ಕಾಸರಗೋಡು: ಕಾಸರಗೋಡು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವ್ಯಾಪ್ತಿಯ ಉದ್ಯೋಗ ಶೀಲತಾ ಕೇಂದ್ರದಲ್ಲಿ ಖಾಸಗಿ ಸಂಸ್ಥೆಗಳ ನೇಮಕಾತಿ ಸಂಬಂಧ ಆನ್ ಲೈನ್ ಸಂದರ್ಶನ ನಡೆಯಲಿದೆ. ಭಾಗವಹಿಸಲು ಆಸಕ್ತರು ಮುಂಗಡ ನೋಂದಣಿ ನಡೆಸಬೇಕು. ನೂತನವಾಗಿ ನೋಂದಣಿ ನಡೆಸಲು, ಸಂದರ್ಶನದಲ್ಲಿ ಭಾಗಿಯಾಗಲು ಮತ್ತಿತರ ವಿಚಾರಗಳಿಗೆ ಜು.9ರ ಸಂಜೆ 5 ಗಂಟೆಗೆ ಮುಂಚಿತವಾಗಿ ದೂರವಾಣಿ ಸಂಖ್ಯೆ 9207155700 ಯನ್ನು ಸಂಪರ್ಕಿಬಹುದು. ಮುಂಗಡ ನೋಂದಣಿ ನಡೆಸದೇ ಇದ್ದವರಿಗೆ ಸಂದರ್ಶನದಲ್ಲಿ ಭಾಗಿಗಳಾಗಲು ಸಾಧ್ಯವಿಲ್ಲ. ಸದ್ರಿ ಉದ್ಯೋಗ ಶೀಲತಾ ಕೇಂದ್ರದಲ್ಲಿ ನೋಂದಣಿ ನಡೆಸಿರುವ ಉದ್ಯೋಗಾರ್ಥಿಗಳಿಗೂ ಈ ಶರತ್ತು ಅನ್ವಯವಾಗಿದೆ. ಶನಿ, ಭಾನುವಾರಗಳಂದು ರಜೆ ಇರುವುದು.