ಕಾಸರಗೋಡು: ಕೋವಿಡ್ ಅವಧಿಯಲ್ಲಿ ಸಂಕಷ್ಟ ಅನುಭವಿಸುತ್ತಿರುವ ಕೃಷಿಕರ ಸಹಾಯಕ್ಕೆ ರಂಗಭೂಮಿ ಕಲಾವಿದರು ರಂಗಕ್ಕಿಳಿದಿದ್ದಾರೆ. ಕೃಷಿಕರು ಬೆಳೆದ ಮರಗೆಣಸನ್ನು ಜನರ ಬಳಿಗೆ ತಲಪಿಸಿ ಮರಾಟ ನಡೆಸುವ ಮೂಲಕ ಕೃಷಿಕರಿಗೆ ಸಕಾರಾತ್ಮಕ ಸಾಂತ್ವನ ನಿಡುವ ನಿಟ್ಟಿನಲ್ಲಿ "ಮರಗೆಣಸು ಬಂಡಿ" ಪರ್ಯಟನೆ ಆರಂಭಿಸಿದೆ.
ಬೇಡಡ್ಕ ಗ್ರಾಮ ಪಂಚಾಯತ್ ನ ನಾಟಕ ಕಲಾವಿದರು ಜತೆಗೂಡಿ ಹೀಗೊಂದು ದೌತ್ಯ ಆರಂಭಿಸಿದ್ದಾರೆ. ಕಳೆದ ವರ್ಷ ಸುಭಿಕ್ಷ ಕೇರಳಂ ಯೋಜನೆಯ ಅಂಗವಾಗಿ 150 ಹೆಕ್ಟೇರ್ ಜಾಗದಲ್ಲಿ ಬೆಳೆಯಲಾದ ಮರಗೆಣಸನ್ನು ದೊಡ್ಡ ಸರಕು ವಾಹನದಲ್ಲಿ ಹೇರಿಕೊಂಡು ಸಾರ್ವಜನಿಕ ಬಳಿಗೆ ಬಂದು ಮಾರಾಟ ನಡೆಸುತ್ತಿದ್ದಾರೆ.
ಮೊದಲ ದಿನವಾದ ಬುಧವಾರ ವಿದ್ಯಾನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಈ ಪರ್ಯಟನೆ ನಡೆಯಿತು. ಶಾಸಕ ಎನ್.ಎ.ನೆಲ್ಲಿಕುನ್ನು ಪರ್ಯಟನೆಗೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕೃಷಿ ಅಧಿಕಾರಿ ಆರ್.ವೀಣಾರಾಣಿ, ನಾಟಕ್ ಸಂಘಟನೆಯ ಜಿಲ್ಲಾ ಅಧ್ಯಕ್ಷ ರಫೀಕ್ ಮಣೀಯಂಗಾನಂ, ರಾಜ್ಯ ಸಮಿತಿ ಸದಸ್ಯ ಸುಧಾಕರನ್ ಕಾಡಗಂ, ವಲಯ ಸಮಿತಿ ಅಧ್ಯಕ್ಷ ವಿಜಯನ್ ಕಾಡಗಂ, ಕಾರ್ಯದರ್ಶಿ ಉದಯನ್ ಕಾಡಗಂ, ರಂಗಕರ್ಮಿಗಳಾದ ಪ್ರಮೋದ್ ಬೇವಿಂಜೆ, ವಿನು ನಾರಾಯಣನ್, ಜಯನ್ ಕಾಡಗಂ, ಫಹದ್ ರಾಜೇಶ್, ಮುರಳಿ, ಸಜಿತಾ ಕುಮಾರಿ, ಸುಧಾ ಲಕ್ಷ್ಮಿ, ಬೇಡಡ್ಕ ಕೃಷಿ ಸಹಾಯಕಿ ಜಯಶ್ರೀ, ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.