ಕಾಸರಗೋಡು:'ಡ್ರಗ್ ಫ್ರೀ ಕಾಸರಗೋಡು'ಎಂಬ ಸಂದೇಶದೊಂದಿಗೆ ಸಿದ್ಧಪಡಿಸಲಾದ ವೀಡಿಯೋವನ್ನು ಹೆಚ್ಚುವರಿ ಜಿಲ್ಲಾ ದಂಡನಾಧಿಕಾರಿ ಎ.ಕೆ.ರಮೇಂದ್ರನ್ ಬಿಡುಗಡೆಗೊಳಿಸಿದರು. ಮಾದಕ ಪದಾರ್ಥ ಬಳಕೆ ವಿರುದ್ಧ ಸಪ್ತಾಹ ಅಂಗವಾಗಿ ಸಮಾಜ ನೀತಿ ಇಲಾಖೆ ಸಿದ್ಧಪಡಿಸಿದ ಜನಜಾಗೃತಿ ಮೂಡಿಸುವ ವೀಡಿಯೋ ಇದಾಗಿದೆ. ಬೆಟರ್ ಲೈಫ್ ಫೌಂಡೇಷನ್ ವೀಡಿಯೋದ ಚಿತ್ರೀಕರಣ ನಡೆಸಿದ್ದಾರೆ.ಜಿಲ್ಲಾ ಸಮಾಜನೀತಿ ಅಧಿಕಾರಿ ಷೀಬಾ ಮುಮ್ತಾಜ್ ಅಧ್ಯಕ್ಷತೆ ವಹಿಸಿದ್ದರು. ಅಬಕಾರಿ ಸಹಾಯಕ ಆಯುಕ್ತ ವಿನೋದ್ ಬಿ.ನಾಯರ್, ಮಹಿಳಾ ಶಿಶು ಅಭಿವೃದ್ಧಿ ಇಲಾಖೆಯ ಐ.ಸಿ.ಡಿ.ಎಸ್. ಯೋಜನೆ ಪ್ರಬಂಧಕಿ ಕವಿತಾರಾಣಿ ರಂಜಿತ್, ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ., ಜಿಲ್ಲಾ ಪೆÇ್ರಬೇಷನ್ ಅಧಿಕಾರಿ ಪಿ.ಬಿಜು ಉಪಸ್ಥಿತರಿದ್ದರು.