ತಿರುವನಂತಪುರ: ರಾಜ್ಯದಲ್ಲಿ ಕೋವಿಡ್‍ನಿಂದ ಮೃತಪಟ್ಟವರ ಹೆಸರನ್ನು ರಾಜ್ಯ ಸರ್ಕಾರ ಇಂದು ಬಿಡುಗಡೆ ಮಾಡಿದೆ. ಕಳೆದ ಡಿಸೆಂಬರ್‍ನಲ್ಲಿ ಸ್ಥಗಿತಗೊಂಡಿದ್ದ ಈ ಕ್ರಮವು ಪಾರದರ್ಶಕತೆ ಆರೋಪದ ಹಿನ್ನೆಲೆಯಲ್ಲಿ ಪ್ರಕಟಗೊಳಿಸಲಾಯಿತು. ಮೃತರ ಹೆಸರುಗಳನ್ನು ಜಿಲ್ಲಾ ಮಟ್ಟದಲ್ಲಿ ಪ್ರಕಟಿಸಲಾಗುವುದು. ಇದರೊಂದಿಗೆ ಬಿಟ್ಟುಹೋದವರ ಹೆಸರು ಸೇರಿಸಲೂ ಸಾಧ್ಯವಾಗುವುದು.
ಕೋವಿಡ್ ನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಪಾವತಿಸಲು ಸುಪ್ರೀಂ ಕೋರ್ಟ್ ನೀಡಿದ ತೀರ್ಮಾನದ ಬಳಿಕ, ಮೃತರ ಹೆಸರುಗಳನ್ನು ಪ್ರಕಟಿಸುವ ವಿಷಯವನ್ನು ಮತ್ತೊಮ್ಮೆ ಚರ್ಚಿಸಲಾಗುತ್ತಿದೆ. ಕೋವಿಡ್‍ನಿಂದ ಮೃತರಾದವರ ಅಧಿಕೃತ ಪಟ್ಟಿಯಿಂದ ಹೊರಗುಳಿದವರ ಹೆಸರನ್ನು ಪತ್ತೆಹಚ್ಚುವಂತೆಯೂ ಸರ್ಕಾರ ತಿಳಿಸಿದೆ.
ರಾಜ್ಯ ಮಟ್ಟದಲ್ಲಿ, ಸರ್ಕಾರ ಪ್ರಕಟಿಸಿದ ಅಂಕಿಅಂಶಗಳು ಮತ್ತು ಜಿಲ್ಲಾಧಿಕಾರಿಗಳು ಪ್ರಕಟಿಸಿದ ಅಂಕಿ ಅಂಶಗಳ ನಡುವೆ ವೈತ್ಯಾಸಗಳಿದ್ದವು. ಪ್ರಕಟಿತ ಅಂಕಿ ಅಂಶಗಳಿಂದ ಯಾರೊಬ್ಬರ ಹೆಸರು ಕಾಣೆಯಾಗಿದೆ ಎಂದು ಸಂಬಂಧಿಕರು ಪರಿಶೀಲಿಸಬೇಕು.
ಈಗ ಪ್ರಕಟವಾದ ಪಟ್ಟಿಯಲ್ಲಿ ಇಲ್ಲದವರ ಹೆಸರನ್ನು ಪತ್ತೆಹಚ್ಚಲು ಸರ್ಕಾರಕ್ಕೆ ಸೂಚನೆ ನೀಡಲಾಗಿದೆ. ಸರ್ಕಾರಿ ಪಟ್ಟಿಯಲ್ಲಿರುವ ಆದರೆ ಸ್ಥಳೀಯಾಡಳಿತ ಮಟ್ಟದಲ್ಲಿ ನೋಂದಾಯಿಸದ ಹೆಸರುಗಳನ್ನು ಹುಡುಕಲು ಡಿಎಂಒಗಳಿಗೆ ಸೂಚನೆ ನೀಡಲಾಗಿದೆ.