ಕಾಸರಗೋಡು: ಪರಿಶಿಷ್ಟ ಜಾತಿ ಸಮುದಾಯಕ್ಕೆ ಕಲಿಕಾ ಕೊಠಡಿ ಪೂರೈಕೆಯಲ್ಲಿ ಎಸ್.ಸಿ ಪ್ರಮೋಟರ್‍ಗಳನ್ನು ಬಳಸಿಕೊಂಡು ಡಿವೈಎಫ್‍ಐ ಮುಖಂಡರಿ ಭಾರಿ ಪ್ರಮಾಣದ ವಂಚನೆ ನಡೆಸಿದ್ದು, ಈ ಬಗ್ಗೆ ಕಾಸರಗೋಡು ಜಿಲ್ಲೆಯಲ್ಲೂ ಸಮಗ್ರ ತನಿಖೆ ನಡೆಸುವಂತೆ ಬಿಜೆಪಿ ಎಸ್.ಸಿ ಮೋರ್ಚಾ ಜಿಲ್ಲಾ ಸಮಿತಿ ಆಗ್ರಹಿಸಿದೆ.
ತಿರುವನಂತಪುರದಲ್ಲಿ ಬಹಿರಂಗಗೊಂಡಿರುವ ಭ್ರಷ್ಟಾಚಾರದ ಕೂಗು ಇತರ ಜಿಲ್ಲೆಗಳಲ್ಲೂ ನಡೆದಿರುವ ಸಾಧ್ಯತೆಯಿದೆ. ಕಾಸರಗೋಡು ಜಿಲ್ಲೆಯಲ್ಲೂ ಕೊಠಡಿಗೆ ಅರ್ಜಿ ಸಲ್ಲಿಸಿದ್ದರೂ, ಇದುವರೆಗೆ ಲಭ್ಯವಾಗದ ಪರಿಸ್ಥಿತಿಯಿದೆ. ಸಿಪಿಎಂ ನೇತಾರರು ಎಸ್.ಸಿ ಪ್ರಮೋಟರ್‍ಗಳನ್ನು ಬಳಸಿಕೊಂಡು ವಂಚನೆ ನಡೆಸಿರುವ ಸಾಧ್ಯತೆಯಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಈ ಬಗ್ಗೆ ತನಿಖೆ ನಡೆಸಬೇಕಾದ ಅಗತ್ಯವಿದೆ ಎಂದು ಎಸ್.ಸಿ ಮೋರ್ಚಾ ರಾಜ್ಯ ಸಮಿತಿ ಉಪಾಧ್ಯಕ್ಷ ಎ.ಕೆ ಕಯ್ಯಾರ್, ಜಿಲ್ಲಾ ಉಪಾಧ್ಯಕ್ಷ ಸಂಪತ್ ಪೆರ್ನಡ್ಕ, ಪ್ರಧಾನ ಕಾರ್ಯದರ್ಶಿ ನಾರಾಯಣ ಪಿ. ಪೆರಡಾಲ, ಉಪಾಧ್ಯಕ್ಷ ಹರೀಶ್ಚಂದ್ರ ಪುತ್ತಿಗೆ ಆಗ್ರಹಿಸಿದ್ದಾರೆ.