ಮಂಜೇಶ್ವರ: ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಅವರು ಸೋಮವಾರ ಮಂಜೇಶ್ವರ ಪಂಚಾಯತ್ ಉದ್ಯಾವರ ಪಸ್ಟ್ ಗೇಟ್ ಬಳಿ ಮಳೆಯಿಂದಾಗಿ ಜಲವೃತಗೊಂಡ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಲ್ಲಿಯ ನಿವಾಸಿಗಳ ಮನವಿ ಸ್ವೀಕರಿಸಿ ಸಂಬದ್ಧಪಟ್ಟ ರೈಲ್ವೆ ಅಧಿಕಾರಿಗಳನ್ನು ಫೆÇೀನ್ ಮೂಲಕ ಸಂಪರ್ಕಿಸಿ ಸೂಕ್ತ ಪರಿಹಾರ ನೀಡಲು ಸೂಚಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ಸಮೀರಾ ಮುಮ್ತಾಜ್, ಮುಸ್ಲಿಂಲೀಗ್ ಮಂಜೇಶ್ವರ ಪಂಚಾಯತಿ ಸಮಿತಿ ಅಧ್ಯಕ್ಷ ಸೈಫುಲ್ಲಾ ತಂಙಳ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಲಕ್ಷ್ಮಣ ಪ್ರಭು, ಯುವ ಕಾಂಗ್ರೆಸ್ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಇರ್ಷಾದ್ ಮೊದಲಾದವರು ಸಂಸದರ ಜೊತೆಗಿದ್ದರು.