ಕೊಚ್ಚಿ: ವಿದ್ಯುತ್ ಬಿಲ್ ಪಾವತಿಗೆ ಬಾಕಿ ಇರುವ ಗ್ರಾಹಕರಿಗೆ ತಕ್ಷಣ ಸಂಪರ್ಕ ಕಡಿತ ನೋಟಿಸ್ ನೀಡುವಂತೆ ಕೆಎಸ್‍ಇಬಿ ನಿರ್ದೇಶನ ನೀಡಿದೆ. ಬಾಕಿ ಹಣವನ್ನು ಸಂಗ್ರಹಿಸದೆ ಮುಂದುವರಿಯುವ ಸ್ಥಿತಿಯಲ್ಲಿಲ್ಲ ಎಂದು ವಿದ್ಯುತ್ ಮಂಡಳಿ ಹೇಳಿದೆ. ಅಧಿಸೂಚನೆಯು ಕಾರ್ಯನಿರ್ವಾಹಕ ಎಂಜಿನಿಯರ್‍ಗಳಿಗೆ ಪೋನ್ ಮೂಲಕ ನಿರ್ದೇಶಿಸಲಾಗಿದೆ. 15 ದಿನಗಳ ಸೂಚನೆ ಅವಧಿ ಮುಗಿದ ಬಳಿಕ ಅಂತಹ ಗ್ರಾಹಕರ ಸಂಪರ್ಕ ಕಡಿತಗೊಳಿಸಲು ಸೂಚಿಸಲಾಗಿದೆ.
ಲಾಕ್ ಡೌನ್ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಿಲ್ಲ ಎಂದು ಸರ್ಕಾರ ಈ ಹಿಂದೆ ಸ್ಪಷ್ಟಪಡಿಸಿತ್ತು. ಲಾಕ್ ಡೌನ್ ಸಮಯದಲ್ಲಿ ಇದೇ ರೀತಿ ನೋಟಿಸ್ ನೀಡಲಾಗಿತ್ತಾದರೂ ದೂರುಗಳು ಮತ್ತು ಟೀಕೆಗಳಿಂದಾಗಿ ನಿರ್ಧಾರವನ್ನು ಹಿಂಪಡೆಯಲಾಯಿತು. 2020 ರ ಏಪ್ರಿಲ್ 20 ರಿಂದ ಜೂನ್ 19 ರವರೆಗೆ ಬಿಲ್ ಪಾವತಿಸಲು ಡಿಸೆಂಬರ್ 31 ರವರೆಗೆ ಸಮಯಾವಕಾಶ ನೀಡಲಾಯಿತು ಮತ್ತು ಕಂತುಗಳಲ್ಲಿ ಪಾವತಿಸಲು ಅವಕಾಶವನ್ನು ನೀಡಲಾಗಿತ್ತು.