ಕಾಸರಗೋಡು: ಜಿಲ್ಲಾ ಪಂಚಾಯಿತಿ ಇಂಟರ್ನ್ ಶಿಪ್ ಪ್ರೋಗ್ರಾಂನ ಉದ್ಘಾಟನೆಯನ್ನು ಸೋಮವಾರ ಸ್ಥಳೀಯಾಡಳಿತ, ಅಬಕಾರಿ ಸಚಿವ ಎಂ.ವಿ.ಗೋವಿಂದನ್ ಮಾಸ್ಟರ್ ನೆರವೇರಿಸಿದರು.ಕೋವಿಡ್ ಸೋಂಕಿನ ದ್ವಿತೀಯ ಅಲೆಯೂ ಗಂಭೀರ ಸ್ಥಿತಿಯಲ್ಲಿ ಹರಡಿದ ಪರಿಣಾಮ ತ್ವರಿತವಾಗಿ ಪೂರ್ಣಗೊಳಿಸಬೇಕಾದ ಮತ್ತು ನೂತನವಾಗಿ ರಚಿಸಲಾದ ಯೋಜನೆಗಳನ್ನು ಏಕೀಕೃತಗೊಳಿಸುವ ಉದ್ದೇಶದಿಂದ ಕಾಸರಗೋಡು ಜಿಲ್ಲಾ ಪಂಚಾಯಿತಿ ಇಂಟರ್ನ್ ಶಿಪ್ ಪ್ರೋಗ್ರಾಂಗೆ ರೂಪು ನೀಡಿದೆ.
ಈ ಸಂದರ್ಭ ಸಚಿವ ಗೋವಿಂದನ್ ಮಾಸ್ಟರ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿ, ತಳಿಪ್ಪರಂಬ ಕಿಲಾ ವಿಸ್ತರಣೆ ಕೇಂದ್ರವನ್ನು ಉನ್ನತ ಗುಣಮಟ್ಟದ ಇಂಜಿನಿಯರಿಂಗ್ ಸಂಸ್ಥೆಯಾಗಿ ಬಡ್ತಿಗೊಳಿಸಲಾಗುವುದು. ಸ್ಥಳಿಯಾಡಳಿತೆ ಸಂಸ್ಥೆಗಳು ಆರೋಗ್ಯ ಸಂರಕ್ಷಣೆ, ಸಾಮಾಜಿಕ ಸುರಕ್ಷೆ, ಮೂಲಭೂತ ಸೌಲಭ್ಯ ವಲಯಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್, ಜಿಲ್ಲಾ ಪಂಚಾಯತ್ ಸದಸ್ಯರು, ಇಂಟರ್ನ್ ಶಿಪ್ ವಿದ್ಯಾರ್ಥಿಗಳು ಮೊದಲಾದವರು ಉಪಸ್ಥಿತರಿದ್ದರು.
ಕೇಂದ್ರ ಯುವಜನ, ಕ್ರೀಡಾ ಸಚಿವಾಲಯದ ವ್ಯಾಪ್ತಿಯಲ್ಲಿ ಚೆನೈ ಯ ಶ್ರೀ ಪೆರುಂಬದೂರಿನ ರಾಜೀವಗಾಂಧಿ ನ್ಯಾಷನಲ್ ಇನ್ಸ್ ಸ್ಟಿಟ್ಯೂಟ್ ಆಫ್ ಯೂತ್ ಡೆವೆಲಪ್ ಮೆಂಟ್ ನ ಹಳೇ ವಿದ್ಯಾರ್ಥಿಗಳು ರಚಿಸಿರುವ ವೈಬ್ರೆಟಿ ಕಮ್ಯೂನಿಟಿ ಆಕ್ಷನ್ ನೆಟ್ ವರ್ಕ್ ( ವಿ.ಸಿ.ಎ.ಎನ್.) ಸೋಷಲ್ ಇಂಜಿನಿಯರಿಂಗ್ ಒಕ್ಕೂಟದೊಂದಿಗೆ ಸೇರಿ ಇಂಟರ್ನ್ ಶಿಪ್ ಆರಂಭಿಸಲಾಗುತ್ತಿದೆ.