ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಪೋಲೀಸರು ಕೋವಿಡ್ ಪ್ರತಿರೋಧ ಬಿಗಿಗೊಳಿಸಿದ್ದಾರೆ.
ಈ ನಿಟ್ಟಿನಲ್ಲಿ ಜಿಲ್ಲೆಯನ್ನು 6 ಸಬ್ ಡಿವಿಝನ್ ಆಗಿ ವಿಂಗಡಿಸಿದ್ದಾರೆ. ಪ್ರತಿ ಡಿವಿಝನ್ ನಕೋವಿಡ್ ಪ್ರತಿರೋಧ ಚಟುವಟಿಕೆಯ ಹೊಣೆಯನ್ನು ಒಬ್ಬೊಬ್ಬ ಡಿ.ವೈ.ಎಸ್.ಪಿ.ಗೆ ನೀಡಲಾಗಿದೆ. ಜಿಲ್ಲೆಯಲ್ಲಿ ಜು.26ರಂದು ಕೋವಿಡ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ 80 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಮಾಸ್ಕ್ ಧರಿಸದ, ಸಾಮಾಜಿಕ ಅಂತರ ಪಾಲಿಸದೇ ಇರುವ ಆರೋಪದಲ್ಲಿ 2152 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಅಕ್ರಮವಾಗಿ ತೆರೆದು ಕಾರ್ಯಾಚರಿಸಿದ 71 ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. 397 ವಾಹನಗಳನ್ನು ವಶಪಡಿಸಲಾಗಿದೆ. ಕ್ವಾರೆಂಟೈನ್ ಉಲ್ಲಂಘಿಸಿದ ಆರೋಪದಲ್ಲಿ 8 ಕೇಸುಗಳನ್ನು ದಾಖಲಿಸಲಾಗಿದೆ.