ತಿರುವನಂತಪುರ: ಕರ್ಕಟಕ ಮಾಸಿಕ ಪೂಜೆಗಾಗಿ ಶಬರಿಮಲೆಗೆ ಭೇಟಿಗೆ ಭಕ್ತರ ಸಂಖ್ಯೆಯನ್ನು 10,000 ಕ್ಕೆ ಹೆಚ್ಚಿಸಲಾಗಿದೆ. ವರ್ಚುವಲ್ ಕ್ಯೂ ಮೂಲಕ 5,000 ಜನರಿಗೆ ತೆರಳಬಹುದೆಂದು ಈ ಹಿಂದೆ ದೇವಸ್ವಂ ಮಂಡಳಿ ತಿಳಿಸಿತ್ತು. ಆದರೆ ಇದೀಗ 10,000 ಕ್ಕೆ ಹೆಚ್ಚಿಸಲಾಗಿದೆ.
ಭಕ್ತರ ಸಂಖ್ಯೆ ಕಡಿಮೆಯಾಗಿರುವುದರಿಂದ ಶಬರಿಮಲೆಯ ಆದಾಯ ಭಾರೀ ಕುಸಿತ ಕಂಡಿದೆ. ಆದಾಯ ಹತ್ತನೇ ಒಂದು ಭಾಗದಷ್ಟು ಕುಸಿದಿರುವುದರಿಂದ ದಿನವೊಂದಕ್ಕೆ 10,000 ಭಕ್ತರಿಗೆ ಭೇಟಿ ನೀಡಲು ಅವಕಾಶ ನೀಡಬೇಕು ಎಂದು ದೇವಸ್ವಂ ಮಂಡಳಿ ಸರ್ಕಾರವನ್ನು ಒತ್ತಾಯಿಸಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಅನುಮತಿ ನೀಡಿದೆ.
ಕರ್ಕಟಕ ತಿಂಗಳ ಪೂಜೆಗಳಿಗಾಗಿ ಜುಲೈ 21 ರವರೆಗೆ ಸನ್ನಿಧಿ ತೆರೆದಿರಲಿದೆ. ಹತ್ತು ಸಾವಿರ ಭಕ್ತರಿಗೆ ಭೇಟಿ ನೀಡಬಹುದಾಗಿದೆ. ಸನ್ನಿಧಿಗೆ ಭೇಟಿ ನೀಡುವವರು 48 ಗಂಟೆಗಳೊಳಗೆ ಮಾಡಿಸಿದ ಆರ್.ಟಿ.ಪಿ.ಸಿ.ಆರ್. ನಕಾರಾತ್ಮಕ ಪ್ರಮಾಣಪತ್ರ ಅಥವಾ ಕೋವಿಡ್ ಲಸಿಕೆಯ ಎರಡು ಡೋಸ್ ಪಡೆದಿರುವ ಪ್ರಮಾಣಪತ್ರವನ್ನು ಹೊಂದಿರಬೇಕು.