HEALTH TIPS

ಬಯಸಿ ಬಿಕ್ಷುಕರಾಗರು: ಬಡತನ ಮತ್ತು ಹಸಿವು ಅವರನ್ನು ಹಾಗೆ ಮಾಡಲು ನಿರ್ಬಂಧಿಸಿದೆ: ಮುಂದಿನ ಐದು ವರ್ಷಗಳಲ್ಲಿ ತೀವ್ರ ಬಡತನವನ್ನು ನಿರ್ಮೂಲನೆ ಮಾಡುವುದು ಕೇರಳದ ಗುರಿ:ಮುಖ್ಯಮಂತ್ರಿ

                     

                ತಿರುವನಂತಪುರ: ಬಡತನವನ್ನು ನಿರ್ಮೂಲನೆ ಮಾಡದ ಹೊರತು ಭಿಕ್ಷಾಟನೆಯನ್ನು ನಿಷೇಧಿಸಲಾಗದು  ಎಂಬ ಸುಪ್ರೀಂ ಕೋರ್ಟ್ ತೀರ್ಪು ಪ್ರಮುಖ ಸಾಮಾಜಿಕ-ಆರ್ಥಿಕ ಸಮಸ್ಯೆಯ ಸಂಬಂಧಿತ ಮತ್ತು ಮಾನವೀಯ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

               ಮಾನವರು ಭಿಕ್ಷುಕರಾಗಿರಬೇಕಾಗಿಲ್ಲ. ಏಕೆಂದರೆ ಅವರು ಬಯಸಿ ಬೇಡುವುದಲ್ಲ. ಬಡತನ ಮತ್ತು ಹಸಿವು ಅವರನ್ನು ಹಾಗೆ ಮಾಡಲು ನಿರ್ಬಂಧಿಸಿದೆ. ಬಡತನ ಮತ್ತು ಅದರ ಒಂದು ಅಡ್ಡಪರಿಣಾಮವಾದ ಭಿಕ್ಷಾಟನೆಯ ನಿಷೇಧದಿಂದ ನಿರ್ಮೂಲನೆ ಮಾಡಲಾಗದು. ನಮಗೆ ಅಂತಹ ದೃಷ್ಟಿಕೋನ ಇರಬಾರದು. ಬಡ ಜನರಿಗೆ ಸಹಾನುಭೂತಿ ಮತ್ತು ಸಹಾಯ ಮಾಡುವ ಇಚ್ಚಾಶಕ್ತಿ ಬೇಕು. ನಾವು ಕೈ ಎತ್ತಿ ಬಡತನದಿಂದ ಮೇಲಕ್ಕೆತ್ತಿದರೆ ಮಾತ್ರ ಭಿಕ್ಷಾಟನೆಯಿಲ್ಲದ ಜಗತ್ತು ಸಾಧ್ಯ. ಇದು ಅಷ್ಟು ಸುಲಭವಾಗಿ ಸಾಧಿಸಬಹುದಾದ ವಿಷಯವಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

                  ಇದು ದೇಶದ ನೀತಿಯಾಗಬೇಕು ಮತ್ತು ಇಚ್ಚಾಶಕ್ತಿಯೊಂದಿಗೆ ಕಾರ್ಯಗತಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ತೀವ್ರ ಬಡತನವನ್ನು ನಿರ್ಮೂಲನೆ ಮಾಡುವ ಕೇರಳದ ಹೊಸ ಯೋಜನೆ ಆ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ.

                   ನಾಲ್ಕು ತಿಂಗಳಲ್ಲಿ ಸಮೀಕ್ಷೆ ಪೂರ್ಣಗೊಳ್ಳಲಿದೆ. ನಂತರ ಸ್ಥಳೀಯಾಡಳಿತ ಸಂಸ್ಥೆಗಳ ನೇತೃತ್ವದಲ್ಲಿ ಸೂಕ್ಷ್ಮ ಯೋಜನೆಗಳನ್ನು ಸಿದ್ಧಪಡಿಸಲಾಗುವುದು ಮತ್ತು ತೀವ್ರ ಬಡತನದಿಂದ ಬಳಲುತ್ತಿರುವ ಕುಟುಂಬಗಳನ್ನು ಗುರುತಿಸಿ, ಪರಿಹಾರ ಕಲ್ಪಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಮುಂದಿನ ಐದು ವರ್ಷಗಳಲ್ಲಿ ಕೇರಳವು ತೀವ್ರ ಬಡತನವನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದೆ. ಆ ಗುರಿಯನ್ನು ಉತ್ತಮ ರೀತಿಯಲ್ಲಿ ಸಾಧಿಸಲು ನಾವೆಲ್ಲರೂ ಒಟ್ಟಾಗಿ ಮುಂದುವರಿಯಬಹುದು ಎಂದು ಮುಖ್ಯಮಂತ್ರಿ ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries