ಕಾಸರಗೋಡು: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಷಷ್ಟ್ಯಬ್ದ ಸಂಭ್ರಮದ ಜ್ಞಾನವಾಹಿನಿ-2021 ಕಾಸರಗೋಡು ವಲಯ ಸಮಿತಿಗೆ ಚಾಲನೆ, ಸರಣಿಯ ಮೊದಲ ಕಾರ್ಯಕ್ರಮ ಹಾಗೂ ಮಧೂರು ಕ್ಷೇತ್ರ ಗದ್ದೆಯಲ್ಲಿ ನಾಟಿ ಉತ್ಸವ ಆರಂಭಿಸಲಾಯಿತು.
ಈ ಸಂದರ್ಭ ಗದ್ದೆ ನಾಟಿ ಮೂಲಕ ಲಭಿಸುವ ಭತ್ತದ ಉತ್ಪನ್ನದ ಅರ್ಧಭಾಗ ಮಧೂರು ಕ್ಷೇತ್ರಕ್ಕೆ ಸಮರ್ಪಿಸುವ ಸಂಕಲ್ಪ ಮಾಡಲಾಯಿತು. ಸಮರ್ಪಣಾ ಕಾರ್ಯಕ್ರಮದಲ್ಲಿ ಕಾಸರಗೋಡು ವಲಯ ಸಮಿತಿ ಅಧ್ಯಕ್ಷ ಕೆ.ಎನ್ ವೆಂಕಟ್ರಮಣ ಹೊಳ್ಳ, ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಉಪಾಧ್ಯಾಯ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಂ. ಬಾಬು, ಸಮಿತಿ ಕಾರ್ಯಾಧ್ಯಕ್ಷ ಜಯಾನಂದ ಕುಮಾರ್ ಹೊಸದುರ್ಗ, ದೇವಸ್ಥಾನ ಸಿಬ್ಬಂದಿ ಉಪಸ್ಥಿತರಿದ್ದರು.