ನವದೆಹಲಿ: ಪೆಗಾಸನ್ ಸ್ಪೈವೇರ್ ಹ್ಯಾಕಿಂಗ್ ಪಟ್ಟಿಯಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಹೆಸರಿದೆ ಎಂದು ಗಾರ್ಡಿಯನ್‌ನಲ್ಲಿ ಪ್ರಕಟವಾದ ವರದಿಯಲ್ಲಿ ತಿಳಿಸಲಾಗಿದೆ.
ಅಲ್ಲದೆ, ರಾಹುಲ್ ಗಾಂಧಿ, ಪ್ರಶಾಂತ್ ಕಿಶೋರ್ ಅಲ್ಲದೆ ಮಮತಾ ಬ್ಯಾನರ್ಜಿ ಸಂಬಂಧಿ ಅಭಿಷೇಕ್ ಬ್ಯಾನರ್ಜಿ. ಇನ್ನು ಮೋದಿ ಸಂಪುಟ ಸಚಿವರಾದ ಪ್ರಹ್ಲಾದ್ ಪಟೇಲ್ ಹಾಗೂ ಅಶ್ವಿನಿ ವೈಷ್ಣವ್ ಇತರ ಪಕ್ಷದ ಮುಖಂಡರಿಗೆ ಸೇರಿದ ಫೋನ್‌ಗಳನ್ನು ಸ್ಪೈವೇರ್‌ನ ಸಂಭಾವ್ಯ ಗುರಿಗಳೆಂದು ಗುರುತಿಸಲಾಗಿದೆ ಎಂದು ವರದಿ ತಿಳಿಸಿದೆ.
ಭಾರತದ 300 ಮೊಬೈಲ್ ಸಂಖ್ಯೆಗಳ ಪೈಕಿ ಚುನಾವಣಾ ವ್ಯವಸ್ಥಾಪಕ ಪ್ರಶಾಂತ್ ಕಿಶೋರ್ ಮೊಬೈಲ್ ಸಂಖ್ಯೆ ಸಹ ಪಟ್ಟಿಯಲ್ಲಿ ಮತ್ತೊಂದು ಗಮನಾರ್ಹ ಹೆಸರು ಎಂದು ಬ್ರಿಟಿಷ್ ದಿನಪತ್ರಿಕೆ ವರದಿ ಮಾಡಿದೆ.
ಜೂನ್ 14ರಂದು ಅಮ್ನೆಸ್ಟಿಯ ಸೆಕ್ಯುರಿಟಿ ಲ್ಯಾಬ್ ನಡೆಸಿದ ವಿಧಿವಿಜ್ಞಾನದ ವಿಶ್ಲೇಷಣೆಯು ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯ ಅದ್ಭುತ ಗೆಲುವಿಗೆ ಕಾರಣವಾಗಿದ್ದ ತಂತ್ರಜ್ಞ ಕಿಶೋರ್ ಅವರ ಫೋನ್ ನಿಜಕ್ಕೂ ಪೆಗಾಸಸ್ ನಿಂದ ಹ್ಯಾಕ್ ಆಗಿದೆ. ಕಿಶೋರ್ ಫೋನ್ ಕರೆಗಳು, ಇಮೇಲ್‌ಗಳು ಮತ್ತು ಸಂದೇಶಗಳನ್ನು ಏಪ್ರಿಲ್‌ನಲ್ಲಿ ನಡೆದ ಬಂಗಾಳ ಚುನಾವಣೆಯ ಅಂತಿಮ ವಾರಗಳಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಪರೀಕ್ಷೆಯಲ್ಲಿ ತಿಳಿದುಬಂದಿದೆ.
ರಾಹುಲ್ ಗಾಂಧಿಯವರ ಎರಡು ಮೊಬೈಲ್ ಸಂಖ್ಯೆಗಳು 2018ರ ಮಧ್ಯದಿಂದ 2019ರ ಮಧ್ಯಭಾಗದವರೆಗೆ ಲೋಕಸಭಾ ಚುನಾವಣೆ ನಡೆದಾಗ ಬೇಹುಗಾರಿಕೆಗೆ ಆಯ್ಕೆಯಾಗಿರುವುದು ಕಂಡುಬರುತ್ತದೆ.
ಮುಂಗಾರು ಅಧಿವೇಶನ ಆರಂಭವಾಗಿದ್ದು ಎರಡು ಸದನದಲ್ಲೂ ಈ ವಿಚಾರವಾಗಿ ಸರ್ಕಾರ ಹಾಗೂ ವಿಪಕ್ಷಗಳ ನಡುವಿನ ಗದ್ದಲಕ್ಕೆ ಸಾಕ್ಷಿಯಾಗಿದೆ.
ಸಂಸತ್ ಮುಂಗಾರು ಅಧಿವೇಶನಕ್ಕೆ ಸ್ವಲ್ಪ ಮುಂಚಿತವಾಗಿಯೇ ಆರೋಪಗಳು ಭಾರತದ ಪ್ರಜಾಪ್ರಭುತ್ವವನ್ನು ಕೆಡಿಸುವ ಗುರಿಯನ್ನು ಹೊಂದಿವೆ ಎಂದು ಐಟಿ ಮತ್ತು ಸಂವಹನ ಸಚಿವ ಅಶ್ವಿನಿ ವೈಷ್ಣವ್ ಅವರು ಹೇಳಿದ್ದಾರೆ.
ಪೆಗಾಸಸ್ ಸಾಫ್ಟ್‌ವೇರ್ ಭಾರತೀಯರ ಮೇಲೆ ಕಣ್ಣೀಟ್ಟಿದೆ ಎಂಬ ಮಾಧ್ಯಮಗಳ ವರದಿಗಳನ್ನು ತಳ್ಳಿಹಾಕಿದ್ದಾರೆ. ಇನ್ನು ಅನಧಿಕೃತ ವ್ಯಕ್ತಿಗಳಿಂದ 'ಯಾವುದೇ ರೀತಿಯ ಅಕ್ರಮ ಕಣ್ಗಾವಲು' ಭಾರತದಲ್ಲಿ ಸಾಧ್ಯವಿಲ್ಲ ಎಂದು ಹೇಳಿದರು.