ಬದಿಯಡ್ಕ: ಇಂದಿನ ಶಿಕ್ಷಣ ವ್ಯವಸ್ಥೆ ಬದಲಾಗಿದೆ. ಅಂತರ್ಜಾಲದಿಂದ ಮೊಬೈಲ್ ಮೂಲಕ ಶಿಕ್ಷಣ ಪಡೆಯುತ್ತಿದ್ದಾರೆ, ಈ ದೃಷ್ಟಿಯಿಂದ ಶಾಲಾ ಮಕ್ಕಳು ವಂಚಿತರ ವಾಗಬಾರದೆಂದು ಎಡನೀರು ಸ್ವಾಮೀಜಿ ಹೈಯರ್ ಸೆಕೆಂಡರಿ ಶಾಲೆಯ ಹೈಸ್ಕೂಲ್ ವಿಭಾಗದ ಹಳೆ ವಿದ್ಯಾರ್ಥಿಗಳು ಒಟ್ಟು ಸೇರಿ ಹತ್ತು ಮೊಬೈಲುಗಳನ್ನು ಮಕ್ಕಳಿಗೆ ಉಚಿತವಾಗಿ ನೀಡಿರುವುದು ವಿಶಿಷ್ಟವೂ ಶ್ಲಾಘನೀಯವೂ ಆಗಿದೆ. ನೀಡಿದ ಮೊಬೈಲುಗಳನ್ನು ಜಾಗೃತರಾಗಿ ಉಪಯೋಗಿಸಿ ಕೇವಲ ಶಿಕ್ಷಣಕ್ಕಾಗಿ ಮಾತ್ರ ಉಪಯೋಗಿಸಿಕೊಂಡು ದುರುಪಯೋಗಪಡಿಸದೆ ಉಪಯೋಗಿಸಿ ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನವಿತ್ತರು.
ಎಡನೀರು ಶ್ರೀ ಮಠದ ಸಭಾಂಗಣದಲ್ಲಿ ಸೋಮವಾರ ಜರಗಿದ ಶಾಲಾ ಹಳೆವಿದ್ಯಾರ್ಥಿಗಳು ಪ್ರಸ್ತುತ ಕಲಿಯುತ್ತಿರುವ ಹತ್ತು ಮಂದಿ ವಿದ್ಯಾರ್ಥಿಗಳಿಗೆ ಕಲಿಕೆಗಾಗಿ ಉಚಿತವಾಗಿ ಮೊಬೈಲ್ ಗಳನ್ನು ನೀಡುವ ಕಾರ್ಯಕ್ರಮದಲ್ಲಿ ಚಾಲನೆ ನೀಡಿ ಅವರು ಆಶೀರ್ವಚನವಿತ್ತರು.
ಮಕ್ಕಳ ಹೆತ್ತವರು ಮೊಬೈಲುಗಳನ್ನು ಶ್ರೀಗಳಿಂದ ಪಡೆದುಕೊಂಡರು.
ನಿವೃತ್ತ ಪ್ರಾಂಶುಪಾಲ ರಾಜೇಂದ್ರ ಕಲ್ಲೂರಾಯ, ನಿವೃತ್ತ ಮುಖ್ಯೋಪಾಧ್ಯಾಯ ಮಾಧವ ಹೇರಳ , ಶಾಲಾ ಮುಖ್ಯೋಪಾಧ್ಯಾಯ ಮಧುಸೂದನ .ಪಿ.ಎನ್ ಅವರು ಶುಭಾಶಂಸನೆ ಮಾಡಿದರು .
ಸಭೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವೇಣುಗೋಪಾಲ . ಇ. ಸ್ವಾಗತಿಸಿ , ಸರ್ವಮಂಗಳ ರಾವ್ ವಂದಿಸಿದರು.ವೆಂಕಟ್ ಭಟ್ ಎಡನೀರು ಕಾರ್ಯಕ್ರಮ ನಿರೂಪಣೆಗೈದರು. ಸಭೆಯಲ್ಲಿ ಶಾಲಾ ಅಧ್ಯಾಪಕ ವೃಂದ ಹಾಗೂ ಸೂರ್ಯ ಭಟ್ ಎಡನೀರು, ಭವಾನಿಶಂಕರ ಮಾಸ್ತರ್ ಎಡನೀರು ಹಾಗೂ ಮಹೇಶ್ ಎಡನೀರು ಉಪಸ್ಥಿತರಿದ್ದರು.