HEALTH TIPS

ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪೋಲೀಸರ ಹೊಸ ಉಪಕ್ರಮ ಪಿಂಕ್ ಪ್ರೊಟೆಕ್ಷನ್ ಯೋಜನೆಗೆ ಚಾಲನೆ: ಮುಖ್ಯಮಂತ್ರಿಗಳಿಂದ ಉದ್ಘಾಟನೆ

             ತಿರುವನಂತಪುರ: ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪೋಲೀಸರ ಹೊಸ ಉಪಕ್ರಮವಾದ ಪಿಂಕ್ ಪೆÇ್ರಟೆಕ್ಷನ್ ಯೋಜನೆಗೆ ಚಾಲನೆ ನೀಡಲಾಗಿದೆ. ತಿರುವನಂತಪುರಂನ ಪೋಲೀಸ್ ಪ್ರಧಾನ ಕಚೇರಿಯ ಮುಂಭಾಗದಲ್ಲಿ ನಿನ್ನೆ ಪಿಂಕ್ ಪ್ರೊಟೆಕ್ಷನ್ ಗಸ್ತು ತಂಡಗಳಿಗೆ ದೇಣಿಗೆ ನೀಡಿದ ವಾಹನಗಳನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿ ಚಾಲನೆ ನೀಡಿದರು.

             ಈ ಸಂದರ್ಭದಲ್ಲಿ ರಾಜ್ಯ ಪೋಲೀಸ್ ಮುಖ್ಯಸ್ಥ ಅನಿಲ್ ಕಾಂತ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಯೋಜನೆಯ ಭಾಗವಾಗಿ 10 ಕಾರುಗಳು,  20 ದ್ವಿಚಕ್ರ ವಾಹನಗಳು ಸೇರಿದಂತೆ 40 ವಾಹನಗಳನ್ನು  ಬಿಡುಗಡೆ ಮಾಡಲಾಯಿತು.

             ಪಿಂಕ್ ಪ್ರೊಟೆಕ್ಷನ್ ಯೋಜನೆಯು ವರದಕ್ಷಿಣೆ ಸಂಬಂಧಿತ ಹಿಂಸೆಗಳು,  ಸೈಬರ್ ಬೆದರಿಕೆ ಮತ್ತು ಸಾರ್ವಜನಿಕ ಅವಮಾನಗಳನ್ನು ತಡೆಯುವ ಗುರಿಯನ್ನು ಹೊಂದಿದೆ. ಅಸ್ತಿತ್ವದಲ್ಲಿರುವ ಪಿಂಕ್ ಪೋಲೀಸ್ ಪೆಟ್ರೋಲ್ ವ್ಯವಸ್ಥೆಯನ್ನು ಸಕ್ರಿಯಗೊಳಿಸುವುದು ಸೇರಿದಂತೆ ಚಟುವಟಿಕೆಗಳನ್ನು ಇದು ಒಳಗೊಂಡಿದೆ.

                ಕೌಟುಂಬಿಕ ಹಿಂಸಾಚಾರಗಳ ಬಗ್ಗೆ ಪೋಲೀಸರಿಗೆ ಈಗಾಗಲೇ ಹಲವು ವರ್ಷಗಳಿಂದ ದೂರುಗಳು ಬರುತ್ತಿವೆ. ಹೊಸ ಯೋಜನೆಯು ಪಿಂಕ್ ಜನಮೈತ್ರಿ ಬೀಟ್ ಎಂಬ ವ್ಯವಸ್ಥೆಯನ್ನು ಒಳಗೊಂಡಿದೆ, ಇದು ಅಂತಹ ಕಿರುಕುಳವನ್ನು ನಿರೀಕ್ಷಿಸಲು ಮತ್ತು ತಡೆಯಲು ಅಗತ್ಯವಾದ ಮಾಹಿತಿಯನ್ನು ಒದಗಿಸುತ್ತದೆ.

              ಗೃಹ ಹಿಂಸಾಚಾರದ ಬಗ್ಗೆ ಮಾಹಿತಿ ಸಂಗ್ರಹಿಸಲು ಮನೆ ಮನೆಗೆ ತೆರಳಿ ಪಿಂಕ್ ಜನಮೈತ್ರಿ ಬೀಟ್ ವ್ಯವಸ್ಥೆ ಕಾರ್ಯನಿರ್ವಹಿಸಲಿದೆ.   ಪಂಚಾಯತ್ ಸದಸ್ಯರು, ನೆರೆಹೊರೆಯವರು ಮತ್ತು ಇತರ ಸ್ಥಳೀಯರಿಂದ ಮಾಹಿತಿಯನ್ನು ಸಂಗ್ರಹಿಸಿ ಮುಂದಿನ ಕ್ರಮಕ್ಕಾಗಿ ಸ್ಟೇಷನ್ ಹೌಸ್ ಅಧಿಕಾರಿಗಳಿಗೆ ಹಸ್ತಾಂತರಿಸುತ್ತಾರೆ.

                  ವಿಶೇಷ ತರಬೇತಿ ಪಡೆದ ಮಹಿಳಾ ಪೋಲೀಸ್ ಅಧಿಕಾರಿಗಳನ್ನು ಒಳಗೊಂಡ ಪಿಂಕ್ ಬೀಟ್ ವ್ಯವಸ್ಥೆಯು ಕೆ.ಎಸ್.ಆರ್.ಟಿ.ಸಿ. ಮತ್ತು ಖಾಸಗಿ ಬಸ್‍ಗಳಲ್ಲಿ ಮತ್ತು ಶಾಲೆಗಳು, ಕಾಲೇಜುಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ,  ಬಸ್ ನಿಲ್ದಾಣಗಳಲ್ಲಿ ಇರುತ್ತದೆ. ಅವರಿಗೆ ಸಹಾಯ ಮಾಡಲು, ಎಲ್ಲಾ 14 ಜಿಲ್ಲೆಗಳಲ್ಲಿ ಪಿಂಕ್ ಪ್ರೊಟೆಕ್ಷನ್ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ.

                 ಜನನಿಬಿಡ ಪ್ರದೇಶಗಳಲ್ಲಿ ಸಮಾಜ ವಿರೋಧಿಗಳ ಇರುವಿಕೆ  ಪತ್ತೆಹಚ್ಚಲು ಮತ್ತು ಕ್ರಮ ಕೈಗೊಳ್ಳಲು ಪಿಂಕ್ ಶ್ಯಾಡೋ ಪೆಟ್ರೋಲ್ ತಂಡವನ್ನು ಸಹ ನಿಯೋಜಿಸಲಾಗುವುದು. ಮಹಿಳಾ ಅಧಿಕಾರಿಗಳನ್ನು ಒಳಗೊಂಡ ಗುಂಡು ಗಸ್ತು ತಂಡ ಪಿಂಕ್ ರೋಮಿಯೋ ಸಹ ಅಸ್ತಿತ್ವಕ್ಕೆ ಬಂದಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries