ಪಾಲಕ್ಕಾಡ್: ವಿಶ್ವದಲ್ಲೇ ಮೊದಲ ಬಾರಿಗೆ ಪ್ರಜಾಪ್ರಭುತ್ವಕ್ಕೆ ಅಡಿಪಾಯ ಹಾಕಿದ ಸಾಮಾಜಿಕ ಆಡಳಿತ ಸುಧಾರಕ, ದಾರ್ಶನಿಕ ಮತ್ತು ವೀರಶೈವ ಸಮುದಾಯ ಗುರು ಮಹಾತ್ಮ ಬಸವೇಶ್ವರ ಅವರ ಭಾವಚಿತ್ರವನ್ನು ಕೇರಳ ರಾಜ್ಯ ವಿಧಾನಸಭೆ ಸ್ಪೀಕರ್ ಎಂ.ಬಿ.ರಾಜೇಶ್ ಅವರಿಗೆ ಕೇರಳ ವಿಧಾನಸಭೆಯಲ್ಲಿ ಅಖಿಲ ಭಾರತ ವೀರಶೈವಸಭಾ ರಾಜ್ಯ ಸಮಿತಿ ಪದಾಧಿಕಾರಿಗಳು ಹಸ್ತಾಂತರಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಗೋಕುಲ್ ದಾಸ್, ಆರ್.ರವಿ, ಮಧು ಎಡಪ್ಪನ್, ಸಾಬು ಕಣ್ಣಂಕರ ಮತ್ತು ಜ್ಯೋತಿ ಅಯ್ಯರುಮದಮ್ ಅವರು ಬಸವೇಶ್ವರ ಅವರ ಭಾವಚಿತ್ರವನ್ನು ನೀಡಿದರು.
ಬಸವೇಶ್ವರರ ದರ್ಶನಗಳು ಮತ್ತು ಇತಿಹಾಸಗಳನ್ನು ಪಠ್ಯಕ್ರಮದಲ್ಲಿ ಪ್ಲಸ್ ಟು ಮತ್ತು ಡಿಗ್ರಿ ಮಟ್ಟಗಳಲ್ಲಿ ಸೇರಿಸಲು, ವಿಧಾನಸಭೆಯಲ್ಲಿ ಬಸವೇಶ್ವರ ಪ್ರತಿಮೆಯನ್ನು ನಿರ್ಮಿಸಲು ಮತ್ತು ಬಸವೇಶ್ವರ ಹೆಸರಿನಲ್ಲಿ ಕೇರಳದಲ್ಲಿ ಸಾಂಸ್ಕೃತಿಕ ಕೇಂದ್ರವನ್ನು ಸ್ಥಾಪಿಸಲು ಈ ಸಂದರ್ಭ ಸ್ಪೀಕರ್ ಅವರಿಗೆ ಮನವಿ ಮಾಡಲಾಯಿತು.