HEALTH TIPS

ಬನ್ನಿ...ಚಹಾ ಸೇವಿಸುತ್ತಾ ಮಾತಾಡೋಣ...ಚಹಾದ ಬಗ್ಗೆ!

              ನಮ್ಮ ದೈನಂದಿನ ಜೀವನದಲ್ಲಿ ಚಹಾದ ಪಾತ್ರವನ್ನು ಯಾವತ್ತಾದರೂ ಉಲ್ಲೇಖಿಸದಿದ್ದರೆ ಅಪರಾಧವೆನ್ನಲು ಅಡ್ಡಿಯಿಲ್ಲ! ಹೆಚ್ಚಿನ ಜನರು ತಮ್ಮ ದಿನವನ್ನು ಒಂದು ಕಪ್ ಚಹಾದೊಂದಿಗೆ ಪ್ರಾರಂಭಿಸುತ್ತಾರೆ. ನಾವು ಸ್ವಲ್ಪ ಆಲಸ್ಯ, ದಣಿದ ಅಥವಾ ನಿರಾಶೆ ಅನುಭವಿಸಿದರೂ, ನಾವು ಮೊದಲು ಚಹಾವನ್ನು ಅವಲಂಬಿಸುತ್ತೇವೆ. ಕೇವಲ ಪಾನೀಯಕ್ಕಿಂತ ಹೆಚ್ಚು ಚಹಾವನ್ನು ಸಂಸ್ಕøತಿಯ ಭಾಗವಾಗಿ ನೋಡಲಾಗುತ್ತಿದೆ. ಮತ್ತದು ಮಾದಕತೆಯೊಂದಿಗೆ ಬೆಚ್ಚನೆಯ, ಸಹವರ್ತಿಯಾಗಿ ಯಾರೋ ಒಬ್ಬರು ಇರುವಂತ ವಾತಾವರಣ ನಿರ್ಮಿಸುತ್ತದೆ. ಅಲ್ಲವೆನ್ನುತ್ತೀರಾ? ಬನ್ನಿ...ಒಂದಷ್ಟು ಚಹಾ ಸೇವಿಸುತ್ತಾ ಮಾತೋಡೋಣ!


               ಮನೆಗೆ ಬರುವ ಅತಿಥಿಗಳಲ್ಲಿ ಕುಶಲೋಪಚಾರದ ಬಳಿಕ ನಾವು ಅವರಲ್ಲಿ ಕೇಳುವುದು ಏನೆಂದರೆ ಕಾಫಿ ಅಥವಾ ಚಹಾ ಏನು ಕುಡಿಯುವಿರಿ? ಚಹಾ ಮತ್ತು ಕಾಫಿ ಎಷ್ಟೋ ವರ್ಷಗಳಿಂದ ನಮ್ಮ ದಿನಚರಿಯಲ್ಲಿ ಸೇರಿಹೋಗಿವೆ. ಇವೆರಡೂ ಭಾರತದ ಮೂಲದವಲ್ಲ, ಆದರೆ ಈಗ ಭಾರತದ ಪ್ರತಿ ಮನೆಯಲ್ಲಿಯೂ ಚಹಾ ಅಥವಾ ಕಾಫಿ ಕುಡಿಯದ ಮನೆಯೇ ಇಲ್ಲ.
     ಭಾರತದ ಜನಸಂಖ್ಯೆಯನ್ನು ಪರಿಗಣಿಸಿದರೆ ದೇಶದಲ್ಲಿ ಟೀ ಕುಡಿಯುವವರ ಸಂಖ್ಯೆ ಹೆಚ್ಚು. ಅದರಲ್ಲೂ ಉತ್ತರ ಭಾರತದಲ್ಲಿ ನೂರಕ್ಕೆ ತೊಂಭತ್ತಕ್ಕಿಂತ ಹೆಚ್ಚು ಜನರು ಚಹಾ ಕುಡಿಯುತ್ತಾರೆ. ದಕ್ಷಿಣದಲ್ಲಿ ಕಾಫಿ ಕುಡಿಯುವವರ ಸಂಖ್ಯೆ ಹೆಚ್ಚು. ಆದರೆ ವಿಶ್ವದ ಜನಸಂಖ್ಯೆಯನ್ನು ಪರಿಗಣಿಸಿದರೆ ಸಾಮಾಬ್ಯವಾಗಿ ಜನ ಹೆಚ್ಚಾಗಿ ಕುಡಿಯುವುದು ಕಾಫಿ. ಅದರಲ್ಲೂ ಹಾಲಿಲ್ಲದ ಕಪ್ಪು ಕಾಫಿ ಕುಡಿಯುವವರ ಸಂಖ್ಯೆ ಹೆಚ್ಚು. ಆದರೆ ನಾಮ್ಮಲ್ಲಿ ಹೆಚ್ಚಿನವರು ಚಹಾ ಅಥವಾ ಕಾಫಿಯನ್ನು ಹೆಚ್ಚು ಇಷ್ಟಪಟ್ಟರೂ ಲಭ್ಯತೆಯ ಪ್ರಕಾರ ಎರಡೂ ಪೇಯಗಳನ್ನು ಕುಡಿಯುತ್ತೇವೆ.
             
ಕಾಫಿ ಅಥವಾ ಚಹಾ ಕುಡಿಯುವವರ ಸ್ವಭಾವವನ್ನು ಗಮನಿಸಿದರೆ ಹಲವು ವ್ಯತ್ಯಾಸಗಳನ್ನು ಗಮನಿಸಬಹುದು. ಆದರೆ ನಮ್ಮ ನಡವಳಿಕೆಗಳನ್ನು ಗಮನಿಸಿದರೆ ನಾವು ಎಷ್ಟು ಚಹಾ ಪ್ರಿಯರು ನಿರ್ಧರಿಸಬಹುದು. ಈ ನಿರ್ಧಾರ ಪ್ರಕಟಿಸುವ ಹನ್ನೆರಡು ಸೂಚನೆಗಳನ್ನು ಕೆಳಗೆ ನೀಡಲಾಗಿದೆ.


        ಚಹಾ ಚಟದಿಂದ ಸಿಗುವ 10 ಪ್ರಯೋಜನಗಳು!
   ಚಹಾಗೋಸ್ಕರ ಅವಕಾಶಗಳನ್ನು ಕಳೆದುಕೊಳ್ಳುತ್ತಿರುವಿರಿ ನಿಮ್ಮಿಂದ ಸಹಾಯ ಅಪೇಕ್ಷಿಸಿ ಅಥವಾ ನಿಮ್ಮೊಂದಿಗೆ ವ್ಯಾಪಾರ ಸಂಬಂಧ ಕುದುರಿಸಲು ಯಾರಾದರೂ 'ಕಾಫಿಗೆ ಬನ್ನಿ, ಸಾವಕಾಶವಾಗಿ ಮಾತನಾಡೋಣ' ಎಂದು ಆಹ್ವಾನ ನೀಡಿದಾಗ, ನೀವು ಕಾಫಿ ಕುಡಿಯುವುದಿಲ್ಲ ಎಂದು ಆ ಆಹ್ವಾನವನ್ನು ತಿರಸ್ಕರಿಸಿ ಸಿಗಬಹುದಾಗಿದ್ದ ಉತ್ತಮ ಅವಕಾಶವನ್ನು ಕಳೆದುಕೊಂಡರೆ ನೀವು ಅಪ್ಪಟ ಚಹಾ ಪ್ರಿಯರು ಎಂದು ಖಂಡಿತವಾಗಿ ಹೇಳಬಹುದು.

        ಕಾಫಿ ಕುಡಿಯುವವರಲ್ಲಿ ಟೀ ಸೇವನೆಯ ಮೂಲಕ ಆರೋಗ್ಯದ ಬಗ್ಗೆ ಚರ್ಚಿಸುವಿರಿ ಕಾಫಿ ಮತ್ತು ಚಹಾ ಕುಡಿಯುವವರ ನಡುವೆ ಹಿಂದಿನಿಂದಲೂ ಆರೋಗ್ಯ ಸಂಬಂಧವಾಗಿ ಚರ್ಚೆಗಳು ನಡೆಯುತ್ತಲೇ ಇವೆ. ಇಂದಿಗೂ ಸಾಗುವ ಈ ಚರ್ಚೆಯಲ್ಲಿ ತಾವು ಚಹಾ ಪರವಾಗಿ ವಾದಿಸಿದರೆ ತಾವು ಚಹಾ ಪ್ರಿಯರು ಎಂದರ್ಥ. ಕಾಫಿಯಲ್ಲಿ ಕೆಫೀನ್ ಇದೆ, ಚಹಾದಲ್ಲಿ ಹೆಚ್ಚಿನ ಆಂಟಿ ಆಕ್ಸಿಡೆಂಟ್ ಇದೆ, ಇದು ಆರೋಗ್ಯಕ್ಕೆ ಉತ್ತಮ ಎಂದು ತಿಳಿಸಿ ಕಾಫಿ ಪ್ರಿಯರನ್ನು ಕಾಫಿ ಸೇವನೆಯಿಂದ ವಿಮುಖರನ್ನಾಗಿಸಲು ಯತ್ನಿಸುವಿರಿ.
              ಈ ಚಹಾ ಚಹಾ ಎಲೆಗಳಿಂದ ಮಾಡಿದ್ದೋ ಚಹಾ ಪುಡಿಯಿಂದ ಮಾಡಿದ್ದೋ ಎಂದು ಹೇಳಬಲ್ಲವರಾಗಿದ್ದೀರಿ ಹಲವು ವರ್ಷಗಳಿಂದ ಚಹಾ ಕುಡಿಯುತ್ತಿರುವ ನಿಮಗೆ ಪ್ರತಿಯೊಂದು ಮಾದರಿಯ ಚಹಾದ ಸ್ವಾದ ಚಿರಪರಿಚಿತವಾಗಿರುತ್ತದೆ. ಈಗ ಕುಡಿಯುತ್ತಿರುವ ಚಹಾ ಚಹಾಪುಡಿಯಿಂದ ತಯಾರಿಸಿದ್ದೋ ಚಹಾ ಎಲೆಗಳನ್ನು ಕುದಿಸಿ ತಯಾರಿಸಿದ್ದೋ ಎಂದು ಹೇಳಬಲ್ಲವರಾಗಿದ್ದರೆ ನೀವು ಅಪ್ಪಟ ಚಹಾ ಪ್ರಿಯರು ಎಂದರ್ಥ.



       ಚಹಾಗೋಸ್ಕರ ಟೀ ಎಸ್ಟೇಟ್‌ಗೆ ಭೇಟಿ ನೀಡುತ್ತೀರಿ ರಜಾದಿನಗಳನ್ನು ಕಳೆಯಲು ಒಂದು ವೇಳೆ ಪರ್ವತದ ಪ್ರದೇಶದವನ್ನು ಆಯ್ದುಕೊಳ್ಳಬೇಕಾದ ಸಂದರ್ಭ ಬಂದರೆ ಹಿಂದೆ ಮುಂದೆ ನೋಡದೇ ಪರ್ವತ ಪ್ರದೇಶವನ್ನು, ಅದರಲ್ಲೂ ಚಹಾ ಎಸ್ಟೇಟ್ ಇರುವಂತಹ ಸ್ಥಳವನ್ನೇ ಆಯ್ದುಕೊಳ್ಳುವುದು ನಿಮ್ಮ ಚಹಾ ಪ್ರಿಯತೆಯನ್ನು ಸಾಬೀತುಪಡಿಸುತ್ತದೆ.
      ಕಾಫಿ ಹೋಟೆಲಿನಲ್ಲಿ ಚಹಾ ಕೋರಿದರೆ ನೀವು ಚಹಾಪ್ರಿಯರಾಗಿದ್ದೀರಿ ಉತ್ತರ ಭಾರತದಲ್ಲಿ ಎಲ್ಲಾ ಹೋಟೆಲುಗಳಲ್ಲಿ ಕಾಫಿ ಸಿಗುವುದಿಲ್ಲ. ಆದರೆ ಚಹಾ ಮಾತ್ರ ಎಲ್ಲೆಡೆ ಸಿಗುತ್ತದೆ. ದಕ್ಷಿಣ ಭಾರತದ ಹೋಟೆಲುಗಳಲ್ಲಿ ಸಾಮಾನ್ಯವಾಗಿ ಎರಡೂ ಸಿಗುತ್ತವೆ. ಆದರೆ ಇತ್ತೀಚೆಗೆ ವೈಭವದ ಮಾಲ್ ಗಳ ಜೊತೆಗೆ ಕಾಫಿ ಕೆಫಿ ಎಂಬ ಹೋಟೆಲುಗಳೂ ಪ್ರಾರಂಭವಾಗಿವೆ. ಚಿತ್ರ ವಿಚಿತ್ರ ಹೆಸರಿನ ಒಗರು ರುಚಿಯ ಕಾಫಿಗಳನ್ನು ಚಿನ್ನದ ಬೆಲೆಯಲ್ಲಿ ಮಾರುವುದೇ ಇಲ್ಲಿಯ ಮುಖ್ಯ ಆಕರ್ಷಣೆ. ಒಂದು ವೇಳೆ ಈ ಹೋಟೆಲಿನಲ್ಲಿಯೂ ಚಹಾ ಬೇಕು ಎಂದು ಕೇಳಿದರೆ ನೀವು ಚಹಾ ಪ್ರಿಯರು ಎನ್ನುವುದರಲ್ಲಿ ಯಾವುದೇ ಅನುಮಾನ ಉಳಿಯುವುದಿಲ್ಲ.
        ಕೆಫೆ ಎಂಬ ಪದ ನಿಮಗೆ ಅರ್ಥಶೂನ್ಯವೆನಿಸುತ್ತದೆ ಇತ್ತೀಚೆಗೆ ಹೆಚ್ಚುತ್ತಿರುವ ಕೆಫೆಗಳಲ್ಲಿ ಕಾಫಿಯೊಂದಿಗೆ ಹಲವು ಕುರುಕಲುಗಳೂ ಕಾಫಿ ಪ್ರಿಯರ ಹೊಟ್ಟೆ ಸೇರುತ್ತಿವೆ. ಚಹಾದೊಂದಿಗೆ ಸಾಮಾನ್ಯವಾಗಿ ಯಾವ ಕುರುಕಲು ತಿಂಡಿಗಳನ್ನೂ ತಿನ್ನಲು ಮನಸ್ಸು ಬಾರದಿರುವ ಕಾರಣ ಕಾಫಿಯ ಜೊತೆ ಕುರುಕಲು ಸೇವಿಸುವ ಕೆಫೆ ನಿಮಗೆ ಅರ್ಥಶೂನ್ಯವೆನಿಸುತ್ತದೆ.
        ಕಾಫಿ ಪದದ ಉಪಯೋಗ ನಿಮಗೆ ಕಿರಿಕಿರಿ ತರಿಸುತ್ತದೆ ನಿಮ್ಮ ಸ್ನೇಹಿತರು ಅಥವಾ ಉದ್ಯೋಗದಾತರು ಸಂವಹನದ ಸಮಯದಲ್ಲಿ ಕಾಫಿ ಪದವನ್ನು ಸಂದರ್ಭಕ್ಕೆ ಅನುಸಾರವಾಗಿ ಬಳಸಿದರೆ ನಿಮಗೆ ಕಿರಿಕಿರಿಯಾದರೆ ನೀವು ಅಪ್ಪಟ ಚಹಾಪ್ರಿಯರು.
      ತಪ್ಪಿ ಹೋದ ಒಂದು ಟೀ ನಿಮ್ಮ ಸಂಯಮವನ್ನೇ ಅಲ್ಲಾಡಿಸಿಬಿಡುತ್ತದೆ ನೀವು ಸಾಮಾನ್ಯವಾಗಿ ದಿನದ ಒಂದು ನಿಯಮಿತ ಹೊತ್ತಿನಲ್ಲಿ ಕುಡಿಯುವ ಚಹಾ ಸಿಗದೇ ಹೋದರೆ ಆಕಾಶವೇ ತಲೆಯ ಮೇಲೆ ಬಿದ್ದವರಂತೆ ಆಡುತ್ತೀರಿ. ಸಂಪರ್ಕಕ್ಕೆ ಬಂದವರೊಡನೆ ಹಾರಾಡುತ್ತೀರಿ. ಚಿಕ್ಕಪುಟ್ಟ ತಪ್ಪುಗಳಿಗೂ ಎಗರಾಡುತ್ತೀರಿ. ಕಡೆಗೆ ತಲೆನೋವು ಎಂದು ಮಲಗಿಬಿಡುತ್ತೀರಿ.
             ನಿಮಗೆ ಟೀ ಅಂದರೆ ಔಷಧಿಯಿದ್ದಂತೆ ನಿಮ್ಮ ಪ್ರಕಾರ ಚಹಾ ಕುಡಿಯುವುದರಿಂದ ಕೆಮ್ಮು, ಶೀತ, ತಲೆನೋವು, ಮೈಗ್ರೇನ್ ಮೊದಲಾದವು ಮಾಯವಾಗುತ್ತವೆ. ನಿಮಗೆ ಇವು ಯಾವುದೂ ಇಲ್ಲದೇ ಇದ್ದರೆ ಅದು ಚಹಾ ಕುಡಿದ ಕಾರಣ ಎಂದು ಬಲವಾಗಿ ನಂಬಿದ್ದು ವೈದ್ಯರನ್ನೇ ಕಕ್ಕಾಬಿಕ್ಕಿಯಾಗಿಸುವಿರಿ.
          ನಿಮ್ಮ ಪ್ರಕಾರ ವಿವಿಧ ಉದ್ದೇಶಗಳಿಗೆ ವಿವಿಧ ಚಹಾ ಲಭ್ಯವಿದೆ ಇಂದು ಮಾರುಕಟ್ಟೆಯಲ್ಲಿ ಹಲವು ವಿಧದ ಚಹಾ ಪುಡಿಗಳು ಲಭ್ಯವಿವೆ. ಜಾಹೀರಾತಿನಲ್ಲಿ ವಿವರಿಸಿರುವಂತೆ ಹಸಿರು ಚಹಾ ದೇಹದ ವಿಷಯುಕ್ತ ವಸ್ತುಗಳನ್ನು ಹೊರಹಾಕಲೂ, ದಾಸವಾಳ ಚಹಾ ಉತ್ತಮ ಕೂದಲಿಗೂ, ಶುಂಠಿ ಚಹಾ ಕೆಮ್ಮು ಶೀತಕ್ಕೂ ರಾಮಬಾಣ ಎಂದು ನೀವು ಬಲವಾಗಿ ನಂಬಿದ್ದೀರಿ. ಅದೇ ಪ್ರಕಾರ ನಿಮ್ಮ ಮನೆಯಲ್ಲಿ ವಿವಿಧ ಚಹಾ ಲಭ್ಯವಿದ್ದು ಬಂದವರಿಗೂ ಅವರ ಕಾಯಿಲೆಗಳ ಬಗ್ಗೆ ವಿಚಾರಿಸಿ ಅದಕ್ಕನುಗುಣವಾದ ಚಹಾ ಪುಡಿಯಿಂದ ಚಹಾ ಮಾಡಿ ಅದರ ಔಷಧೀಯ ಗುಣಗಳನ್ನು ಪ್ರವರದ ಮೂಲಕ ವಿವರಿಸಿದರೆ ನೀವು ಅಪ್ಪಟ ಚಹಾ ಪ್ರಿಯರು ಎಂಬುದನ್ನು ಖಚಿತಪಡಿಸುತ್ತದೆ.

       


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries