ನವದೆಹಲಿ: ಅಜಿಥ್ರೊಮೈಸಿನ್ ಆಂಟಿಬಯೋಟಿಕ್ ಸೇವಿಸಿದರೆ ಕೊರೊನಾ ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಹೆಚ್ಚಾಗಲಿದೆ ಎಂದು ಅಧ್ಯಯನವೊಂದು ತಿಳಿಸಿದೆ.
ಕೊರೊನಾ ಸೋಂಕು ಕಡಿಮೆ ಮಾಡುವ ಉದ್ದೇಶದಿಂದ ನೀಡುವ ಅಜಿಥ್ರೊಮೈಸಿನ್ ಆಂಟಿಬಯೋಟಿಕ್ ಔಷಧವು ಪ್ಲಸೀಬೊ ವಿಧಾನಕ್ಕಿಂತ ಹೆಚ್ಚು ಪರಿಣಾಮಕಾರಿಯಲ್ಲ ಮತ್ತು ವಾಸ್ತವವಾಗಿ ಇದು ರೋಗಿಯು ಆಸ್ಪತ್ರೆಗೆ ದಾಖಲಾಗುವ ಪ್ರಮಾಣವನ್ನು ಹೆಚ್ಚಿಸುತ್ತದೆ ಎಂಬುದು ತಿಳಿದುಬಂದಿದೆ.
ಈ ಕುರಿತು ಜರ್ನಲ್ ಆಫ್ ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್‌ನಲ್ಲಿ ವರದಿಯೊಂದು ಪ್ರಕಟವಾಗಿದ್ದು, ಅದರಲ್ಲಿ 263 ಕೊರೊನಾ ಸೋಂಕಿತರನ್ನು ಪ್ರಯೋಗಕ್ಕೆ ಒಳಪಡಿಸಲಾಗಿತ್ತು, ಆದರೆ ಅವರಲ್ಲಿ ಯಾರೂ ಆಸ್ಪತ್ರೆಗೆ ದಾಖಲಾಗಿರಲಿಲ್ಲ.
ಕೊರೊನಾ ಸೋಂಕಿತ ಹೊರರೋಗಿಗಳಲ್ಲಿ, ಪ್ಲಸೀಬೋಗೆ ಹೋಲಿಸಿದರೆ ಓರಲ್ ಅಜಿಥ್ರೊಮೈಸಿನ್ ಅನ್ನು ಪಡೆದ ರೋಗಿಗಳುನೇ ದಿನದಲ್ಲಿ ರೋಗಲಕ್ಷಣಗಳಿಂದ ಮುಕ್ತರಾಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ.
ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಮತ್ತು ಸ್ಟ್ಯಾನ್‌ಫೋರ್ನ್ ವಿಶ್ವವಿದ್ಯಾಲಯದ ಸಂಶೋಧಕರು ಇದಕ್ಕಾಗಿ ರೋಗಿಗಳನ್ನು ಆಯ್ಕೆ ಮಾಡಿದ್ದರು.
171 ಮಂದಿಗೆ ಒಂದು ಡೋಸ್ 1.2 ಗ್ರಾಂ ಓರಲ್ ಅಜಿಥ್ರೊಮೈಸಿನ್ ನೀಡಿದರೆ, 92 ರೋಗಿಗಳಿಗೆ ಪ್ಲಸೀಬೊ ಚಿಕಿತ್ಸೆ ನೀಡಲಾಗಿತ್ತು.
ಸುಮಾರು 14 ದಿನಗಳ ಬಳಿಕ ಎರಡೂ ಗುಂಡುಗಳಲ್ಲಿ ಶೇ.50ರಷ್ಟು ಮಂದಿಗೆ ರೋಗ ಲಕ್ಷಣ ಇಲ್ಲದಿರುವುದು ಕಂಡುಬಂದಿತ್ತು, ಅದೇ 21 ದಿನಗಳಷ್ಟೊತ್ತಿಗೆ ಐದು ಮಂದಿ ತೀವ್ರ ರೋಗ ಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಪ್ಲಸೀಬೋ ಪಡೆದ ಯಾರೂ ಕೂಡ ಆಸ್ಪತ್ರೆಗೆ ದಾಖಲಾಗಿರಲಿಲ್ಲ ಇದು ಆಶ್ಚರ್ಯಕ್ಕೆ ಕಾರಣವಾಗಿತ್ತು.