HEALTH TIPS

'ಸಂಸತ್ತಿನ ಅಧಿವೇಶನಕ್ಕೂ ಒಂದು ದಿನ ಮುನ್ನ ಪೆಗಾಸಸ್ ವರದಿ ಕಾಕತಾಳೀಯವಲ್ಲ' ಎಂದ ಕೇಂದ್ರ

              ನವದೆಹಲಿ: ತನ್ನದೇ ಮಂತ್ರಿಗಳು ಮತ್ತು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು ಸೇರಿದಂತೆ ವಿರೋಧ ಪಕ್ಷದ ನಾಯಕರು, ಪತ್ರಕರ್ತರು ಮತ್ತು ಇತರರ ಮೇಲೆ ಕಣ್ಣಿಡಲು ಇಸ್ರೇಲಿ ಸ್ಪೈವೇರ್ ಪೆಗಾಸಸ್ ಅನ್ನು ಸರ್ಕಾರ ಬಳಸುತ್ತಿರುವ ಬಗ್ಗೆ "ಓವರ್-ದಿ-ಟಾಪ್" ಮಾಧ್ಯಮ ವರದಿಗಳನ್ನು ಐಟಿ ಸಚಿವ ಅಶ್ವಿನಿ ವೈಷ್ಣವ್ ಸೋಮವಾರ ಖಂಡಿಸಿದ್ದಾರೆ. ಸಂಸತ್ತಿನ ಮಾನ್ಸೂನ್ ಅಧಿವೇಶನ ಪ್ರಾರಂಭವಾಗುವ ಒಂದು ದಿನದ ಮೊದಲು ಅವುಗಳನ್ನು ಪ್ರಕಟಿಸಿದ್ದು "ಕಾಕತಾಳೀಯವಲ್ಲ" ಎಂದು ಹೇಳಿದ್ದಾರೆ.

              ಲೋಕಸಭೆಯನ್ನುದ್ದೇಶಿಸಿ ಮಾತನಾಡಿದ ವೈಷ್ಣವ್, ಈ ವರದಿಯ ಹಿಂದೆ ಯಾವುದೇ ಆಧಾರ ಇರಲಿಲ್ಲ. ಹಾಗೆಯೇ ತಪಾಸಣೆಯು ಅಕ್ರಮ ಕಣ್ಗಾವಲು ಸಾಧ್ಯವಿಲ್ಲ ಎಂದು ಖಚಿತಪಡಿಸಿದೆ ಎಂದಿದ್ದಾರೆ.

            "ಕಳೆದ ರಾತ್ರಿ ವೆಬ್ ಪೋರ್ಟಲ್‌ನಿಂದ ಈ ಸುದ್ದಿಯನ್ನು ಪ್ರಕಟಿಸಲಾಗಿದೆ. ಈ ವರದಿಯಲ್ಲಿ ಅನೇಕ ಆರೋಪಗಳನ್ನು ಮಾಡಲಾಗಿದೆ. ಸಂಸತ್ತಿನ ಮಾನ್ಸೂನ್ ಅಧಿವೇಶನಕ್ಕೆ ಒಂದು ದಿನ ಮೊದಲು ಪತ್ರಿಕಾ ವರದಿಗಳು ಪ್ರಕಟವಾದವು. ಹಾಗಿರುವಾಗ ಇದು ಕಾಕತಾಳೀಯವಾಗಲು ಸಾಧ್ಯವಿಲ್ಲ," ಎಂದು ವೈಷ್ಣವ್ ಆರೋಪಿಸಿದ್ದಾರೆ.

              "ಈ ಹಿಂದೆ, ವಾಟ್ಸಾಪ್‌ನಲ್ಲಿ ಪೆಗಾಸಸ್ ಬಳಕೆಯ ಬಗ್ಗೆ ಇದೇ ರೀತಿಯ ಸುದ್ದಿಗಳು ಹರಿದಾಡುತ್ತಿದ್ದವು. ಆ ವರದಿಗಳಿಗೆ ಯಾವುದೇ ವಾಸ್ತವಿಕ ಆಧಾರಗಳಿಲ್ಲ. ಎಲ್ಲಾ ಪಕ್ಷಗಳು ಅದನ್ನು ನಿರಾಕರಿಸಿದ್ದವು. ಜುಲೈ 18 ರ ಪತ್ರಿಕಾ ವರದಿಗಳು ಭಾರತೀಯ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ಪ್ರಯತ್ನವೆಂದು ತೋರುತ್ತದೆ," ಎಂದು ದೂರಿದ್ದಾರೆ.

             ಸಂಸತ್ತಿನಲ್ಲಿ ವೈಷ್ಣವ್‌ ಹೇಳಿಕೆ ನೀಡಿದ ಕೆಲವೇ ಗಂಟೆಗಳ ನಂತರ, ಯುಎಸ್ ಪ್ರಕಟಣೆಯಾದ ವಾಷಿಂಗ್ಟನ್ ಪೋಸ್ಟ್ ವರದಿಯೊಂದನ್ನು ಮಾಡಿದೆ. ಈ ವರದಿಯಲ್ಲಿ ಫೋನ್‌ಗಳನ್ನು ಹ್ಯಾಕ್‌ಗೆ ಒಳಗಾದ ಅಥವಾ ಫೋನ್‌ಗಳನ್ನು ಹ್ಯಾಕ್‌ ಮಾಡಿ ಬೇಹುಗಾರಿಕೆಗೆ ಒಳಗಾದ ಜನರ ಪಟ್ಟಿಯಲ್ಲಿ ವೈಷ್ಣವ್ ಹೆಸರು ಕೂಡಾ ಇದೆ. ದಿ ವೈರ್‌ನ ವರದಿಯ ಪ್ರಕಾರ, ವೈಷ್ಣವ್ ಮತ್ತು ಪತ್ನಿಗೆ ನೋಂದಾಯಿಸಲಾದ ದೂರವಾಣಿ ಸಂಖ್ಯೆಗಳು 2017 ರ ಉತ್ತರಾರ್ಧದಲ್ಲಿ ಸೋರಿಕೆಯಾದ ದಾಖಲೆಗಳಲ್ಲಿ ಇದೆ.

          ಕಳೆದ ಸಂಪುಟ ರಚನೆ ಸಂದರ್ಭ ವೈಷ್ಣವ್‌ ಐಟಿ ಮತ್ತು ರೈಲ್ವೆ ಸಚಿವಾಲಯಗಳ ಉಸ್ತುವಾರಿ ಪಡೆಯುವ ಮೂಲಕ ಖಕಿತಗೊಳಿಸಿದ್ದಾರೆ. ಆ ಸಂದರ್ಭದಲ್ಲಿ ಸರ್ಕಾರದ ಸದಸ್ಯರಾಗಲಿ ಅಥವಾ ರಾಜ್ಯಸಭೆಯಲ್ಲಿ ಆಗಲಿ ವೈಷ್ಣವ್‌ ಇರಲಿಲ್ಲ. ಹಾಗೆಯೇ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಯೂ ಆಗಿರಲಿಲ್ಲ. ಆದರೆ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ವೈಷ್ಣವ್‌ ಹೆಸರು ಬಗ್ಗೆ ಸಚಿವರು ಇನ್ನೂ ಪ್ರತಿಕ್ರಿಯಿಸಿಲ್ಲ.

          ಬಿಡುಗಡೆಯಾದ ಪಟ್ಟಿಯಲ್ಲಿ ಸಂಪುಟದಲ್ಲಿರುವ ಪ್ರಹ್ಲಾದ್ ಸಿಂಗ್ ಪಟೇಲ್, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಸೇರಿದ್ದಾರೆ. ಫೋನ್ ಜುಲೈ 14 ರ ಹೊತ್ತಿಗೆ ಹ್ಯಾಕ್ ಮಾಡಲಾಗಿದೆ ಎಂದು ವರದಿಯಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries