ಬದಿಯಡ್ಕ: ಯಕ್ಷಗಾನದಂತಹ ಸಕಾರಾತ್ಮಕ ಕಲಾ ಪ್ರಕಾರ, ಸಾಂಸ್ಕøತಿಕತೆಯನ್ನು ಪ್ರೋತ್ಸಾಹಿಸಿ, ಬೆಂಬಲವಾಗಿ ಪೂರ್ವ ಶ್ರೀಗಳ ಆಶಯವನ್ನು ಈಡೇರಿಸಲು ಎಡನೀರು ಮಠ ಸದಾ ಸಿದ್ಧವಾಗಿದೆ ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭರತೀ ಸ್ವಾಮೀಜಿ ಆಶೀರ್ವದಿಸಿದರು.
ಕಾಸರಗೋಡಿನ ಗಡಿನಾಡ ಯಕ್ಷಗಾನ ಅಕಾಡೆಮಿ ಅವರು ಕರ್ನಾಟಕ ಸರ್ಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಜಾನಪದ ಪರಿಷತ್ ಕೇರಳ ಗಡಿನಾಡ ಘಟಕ, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಸಂಘ ಕಾಸರಗೋಡು ಸಹಕಾರದೊಂದಿಗೆ ಆ.1ರಿಂದ ಆರಂಭಗೊಳ್ಳಳಿರುವ ಮನೆ ಮನೆಯಲ್ಲಿ ಯಕ್ಷಗಾನ ಅಭಿಯಾನದ ಆಮಂತ್ರಣಪತ್ರಿಕೆಯನ್ನು ಬುಧವಾರ ಮಠದ ಆವರಣದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.
ಶ್ರೀ ಎಡನೀರು ಮಠದ ಚಾತುರ್ಮಾಸ ಸಮಿತಿ ಕಾರ್ಯದರ್ಶಿ, ಸಮಾಜಸೇವಕ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅವರಿಗೆ ಆಮಂತ್ರಣಪತ್ರಿಕೆ ಹಸ್ತಾಂತರಿಸುವ ಮೂಲಕ ಸ್ವಾಮೀಜಿ ಬಿಡುಗಡೆಗೊಳಿಸಿದರು. ಕರ್ನಾಟಕ ಜಾನಪದ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಪ್ರೊ. ಎ.ಶ್ರೀನಾಥ್, ಅಖಿಲೇಶ್ ನಗುಮುಗಂ, ಯಕ್ಷಗಾನ ಗುರು ಜಯರಾಮ ಪಾಟಾಳಿ ಉಪಸ್ಥಿತರಿದ್ದರು.