ಕಾಸರಗೋಡು: ಕನ್ನಡಿಗ, ಕಾಸರಗೋಡು, ಬದಿಯಡ್ಕ ಸಮೀಪದ ಕರಿಂಬಿಲ ನಿವಾಸಿ ಹರಿಶ್ಚಂದ್ರ ನಾಯ್ಕ್ ಅವರು ಕಾಸರಗೋಡು ಅಡಿಶನಲ್ ಎಸ್.ಪಿ. ಆಗಿ ನೇಮಕಗೊಂಡಿದ್ದಾರೆ.
ಈ ಹಿಂದೆ ಎಸ್‍ಐ, ಸಿಐ, ಡಿವೈಎಸ್‍ಪಿ ಆಗಿ ಸೇವೆ ಸಲ್ಲಿಸಿ ಜನಮನ್ನಣೆ ಗಳಿಸಿದರು. ಕನ್ನಡಿಗರ ಹಲವು ಸವಸ್ಯೆಗಳಿಗೆ ಸ್ಪಂದಿಸಿದ್ದರು. ಅವರು ಎಸ್‍ಪಿ ಆಗಿ ಭಡ್ತಿಗೊಂಡು ಕಣ್ಣೂರಿಗೆ ವರ್ಗಾವಣೆಗೊಂಡಿದ್ದರು. ಇವರ ಅತ್ಯುತ್ತಮ ಸೇವೆಯನ್ನು ಮನಗಂಡು ಅತ್ಯುತ್ತಮ ಪೋಲೀಸ್ ಅಧಿಕಾರಿ ಎಂದು ರಾಷ್ಟ್ರಪತಿಯವರ ವಿಶೇಷ ಪ್ರಶಸ್ತಿಗೂ ಅವರು ಆಯ್ಕೆಯಾಗಿದ್ದರು. ಇದೀಗ ಅವರನ್ನು ಅಡಿಶನಲ್ ಎಸ್.ಪಿ. ಆಗಿ ಕಾಸರಗೋಡಿನಲ್ಲಿ ನೇಮಕ ಗೊಳಿಸಲಾಗಿದೆ.
ಹರಿಶ್ಚಂದ್ರ ನಾಯ್ಕ್ ಅವರನ್ನು ಇತ್ತೀಚೆಗೆ ಸಮರಸ ಸುದ್ದಿ ಸಂವಾದದ ಮೂಲಕ ಅತಿಥಿಯಾಗಿ ಸಂದರ್ಶನ ನಡೆಸಿತ್ತೆಂಬುದೂ ಇಲ್ಲಿ ಉಲ್ಲೇಖಾರ್ಹ.