ಕೊಚ್ಚಿ: ರಾಜ್ಯದಲ್ಲಿ ಹೇರಲಾಗಿರುವ ಅವೈಜ್ಞಾನಿಕ ಲಾಕ್ ಡೌನ್ ವಿರುದ್ಧ ವರ್ತಕರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಲಾಕ್‍ಡೌನ್ ಹಿಂಪಡೆಯಬೇಕೆಂದು ಕೋರಿ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯಿಂದ ಅರ್ಜಿ ಸಲ್ಲಿಸಲಾಗಿದೆ.
ಲಾಕ್‍ಡೌನ್ ಹೆಸರಿನಲ್ಲಿ ಅಂಗಡಿಗಳನ್ನು ಮುಚ್ಚುವುದು ವ್ಯಾಪಾರಿಗಳಿಗೆ ಭಾರಿ ಆರ್ಥಿಕ ಬಿಕ್ಕಟ್ಟನ್ನು ಸೃಷ್ಟಿಸುತ್ತಿದೆ. ಈ ಹಿನ್ನೆಲೆಯಲ್ಲಿ ತುರ್ತು ಕ್ರಮಕ್ಕಾಗಿ ನ್ಯಾಯಾಲಯವನ್ನು ಸಂಪರ್ಕಿಸಿರುವರು. ತೆರಿಗೆ ವಿನಾಯಿತಿ ಮತ್ತು ಜಿಎಸ್ಟಿ ಮರುಪಾವತಿ ಸೇರಿದಂತೆ ವಿನಾಯ್ತಿ ಪ್ಯಾಕೇಜುಗಳನ್ನು ಘೋಷಿಸಬೇಕು. ವ್ಯವಹಾರಗಳ ಮೇಲಿನ ನಿಬರ್ಂಧಗಳನ್ನು ಪರಿಶೀಲಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಬೇಕು. ವ್ಯಾಪಾರಿಗಳು ಸಾಮಾಜಿಕ ದೂರವನ್ನು ಖಾತ್ರಿಪಡಿಸಿಕೊಳ್ಳಬೇಕು ಮತ್ತು ಜನಸಂದಣಿಯಿಲ್ಲದೆ ಪ್ರತಿದಿನ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಸಂಪೂರ್ಣ ಲಾಕ್‍ಡೌನ್ ನ್ನು ಹಿಂಪಡೆದ ಬಳಿಕ ಅಂಗಡಿಗಳನ್ನು ಮತ್ತೆ ತೆರೆಯಲು ಅನುಮತಿ ನೀಡುವಂತೆ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯು ಸರ್ಕಾರವನ್ನು ಕೇಳಿತ್ತು. ಆದರೆ ಬೇಡಿಕೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ. ಸಮಿತಿ ಕಳೆದ ತಿಂಗಳು ಸ|ಊಚನಾ ಸಮರ ಸೇರಿದಂತೆ ಪ್ರತಿಭಟನೆ ನಡೆಸಿತ್ತು.
ವ್ಯಾಪಾರಿಗಳು ತೀವ್ರ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರತಿದಿನ ತಮ್ಮ ಅಂಗಡಿಗಳನ್ನು ತೆರೆಯುವುದಾಗಿ ಸ್ಪಷ್ಟಪಡಿಸಿದ್ದರು. ಆದರೆ ಮುಖ್ಯಮಂತ್ರಿಯವರು ಹೀಗಾದರೆ ಸರ್ಕಾರವು ಎದುರಿಸಬೇಕಾದ ರೀತಿಯಲ್ಲಿ ಎದುರಿಸಲಿದೆ ಎಂದು ಖಾರವಾಗಿಯೇ ತಿಳಿಸಿದ್ದರು. ಏತನ್ಮಧ್ಯೆ, ಅಂಗಡಿಗಳನ್ನು ತೆರೆಯುವ ಬೇಡಿಕೆಯನ್ನು ಸರ್ಕಾರ ಸ್ವೀಕರಿಸದಿದ್ದರೆ ವ್ಯಾಪಾರಿಗಳು ಆಗಸ್ಟ್‍ನಿಂದ ಅನಿರ್ದಿಷ್ಟ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.