ಕಾಸರಗೋಡು: ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ ಮಂಗಳವಾರ ಕಾಸರಗೋಡು ಬಿಜೆಪಿ ಜಿಲ್ಲಾ ಕಚೇರಿ ಶ್ಯಾಂ ಪ್ರಸಾದ್ ಮುಖರ್ಜಿ ಮಂದಿರದಲ್ಲಿ ಜರುಗಿತು.ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ, ಬಿಜೆಪಿ ರಾಜ್ಯ ಪ್ರಭಾರಿ ಸಿ.ಪಿ ರಾಧಾಕೃಷ್ಣನ್ ಸಮಾರಂಭ ಉದ್ಘಾಟಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಮುಖಂಡರಾದ, ಮಾಜಿ ಶಾಸಕ ಓ.ರಾಜಗೋಪಾಲ್, ಕುಮ್ಮನಂ ರಾಜಶೇಖರನ್, ಪಿ.ಕೆ ಕೃಷ್ಣದಾಸ್, ಎ.ಪಿ ಅಬ್ದುಲ್ಲ ಕುಟ್ಟಿ, ಎಂ.ಟಿ ರಮೇಶ್, ಶೋಭಾ ಸುರೇಂದ್ರನ್, ಸುಧೀರ್, ದಿನೇಶ್ ಒಳಗೊಂಡಂತೆ ಹಲವು ಮಂದಿ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಕೇರಳದಲ್ಲಿನ ಪ್ರಚಲಿತ ವಿದ್ಯಮಾನ, ಚಿನ್ನಕಳ್ಳಸಾಗಾಟ, ಅರಣ್ಯ ಲೂಟಿ, ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದ ಆಡಳಿತ ವೈಫಲ್ಯ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕಾದ ಹಿನ್ನಡೆ, ಕೇಂದ್ರ ಸರ್ಕಾರದ ಯೋಜನೆಗಳನ್ನು ಹೆಸರುಬದಲಾಯಿಸಿ ರಾಜ್ಯದಲ್ಲಿ ಜಾರಿಗೆ ತರುವ ಧೋರಣೆ ಬಗ್ಗೆಯೂ ಚರ್ಚೆ ನಡೆಯಿತು.