ಕಾಸರಗೋಡು: ಪಳ್ಳಿಕ್ಕರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವರ್ಷವಿಡೀ ತರಕಾರಿ ಬೆಳೆಯುವ ಉದ್ದೇಶದಿಂದ ತರಕಾರಿ ಸಸಿಗಳ ವಿತರಣೆ ಜರುಗಿತು. 'ಓಣಂ ಹಬ್ಬಕ್ಕಾಗಿ ತರಕಾರಿ' ಯೋಜನೆ ಅಂಗವಾಗಿ ಕೃಷಿ ಕ್ರಿಯಾಸೇನೆ ವತಿಯಿಂದ ಪೆರಿಯಾಟಡ್ಕ ಮುದುವತ್ ಎಂಬಲ್ಲಿ ಸಸಿ ವಿತರಣೆ ಸಮಾರಂಭ ನಡೆಯಿತು. ಕಾಸರಗೋಡು ಪ್ರಧಾನ ಕೃಷಿ ಅಧಿಕಾರಿ ಆರ್.ವೀಣಾರಾಣಿ ಸಸಿ ವಿತರಿಸುವ ಮೂಲಕ ಉದ್ಘಾಟಿಸಿದರು. ಪಳ್ಳಿಕ್ಕರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕುಮಾರನ್ ಅಧ್ಯಕ್ಷತೆ ವಹಿಸಿದ್ದರು. ಅನೇಕ ಮಂದಿ ಉಪಸ್ಥಿತರಿದ್ದರು.