ಮಂಜೇಶ್ವರ: ವಿವಿಧ ಬೇಡಿಕೆಗಳನ್ನು ಮುಂದಿಟ್ಟು ರಾಜ್ಯ ವ್ಯಾಪಕವಾಗಿ ಬಸ್ ಮಾಲಕ ಸಂಘಟನೆಯ ನೇತೃತ್ವದಲ್ಲಿ ನಡೆಯುತ್ತಿರುವ ಸತ್ಯಾಗ್ರಹದ ಭಾಗವಾಗಿ ಮಂಜೇಶ್ವರ ಬಸ್ ಮಾಲಕರ ಸಂಘದ ವತಿಯಿಂದ ಹೊಸಂಗಡಿಯಲ್ಲಿ ಮಂಗಳವಾರ ಸತ್ಯಾಗ್ರಹ ನಡೆಯಿತು.
ಕೊರೊನಾ ಕಾಲದ ತೆರಿಗೆ ರದ್ದು ಗೊಳಿಸಬೇಕು, ಡಿಸೇಲ್ ಸಬ್ಸಿಡಿಯಲ್ಲಿ ನೀಡಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಸತ್ಯಾಗ್ರಹವನ್ನು ನಡೆಸಲಾಯಿತು. ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲೂ ಏಕಕಾಲದಲ್ಲಿ ಪ್ರತಿಭಟನೆ ನಡೆದಿದೆ.
ಸತ್ಯಾಗ್ರಹವನ್ನು ಜಿಲ್ಲಾ. ಪಂ. ಸದಸ್ಯೆ ಕಮಲಾಕ್ಷಿ ಉದ್ಘಾಟಿಸಿದರು.ಕೋವಿಡ್ ಮಾನದಂಡಗಳನ್ನು ಪಾಲಿಸಿ ನಡೆದ ಸತ್ಯಾಗ್ರಹದಲ್ಲಿ ನೇತಾರರು ಹಾಗೂ ಕಾರ್ಯಕರ್ತರುಗಳು ಪಾಲ್ಗೊಂಡರು.