ಗುಂಟೂರು: ಒಂದು ತಪ್ಪಿನಿಂದ ಎರಡು ಜೀವಗಳು ಮಸಣ ಸೇರಿದ್ದರೆ ಇನ್ನೆರಡು ಜೀವಗಳು ಆಸ್ಪತ್ರೆಯಲ್ಲಿ ಸಾವಿನೊಡನೆ ಸೆಣೆಸುವಂತಾಗಿರುವ ದುರಂತ ಘಟನೆ ಆಂಧ್ರ ಪ್ರದೇಶದ ಗುಂಟೂರಿನಲ್ಲಿ ನಡೆದಿದೆ. ಯೆಡ್ಲಪಾಡ ಮಂಡಲದ ಚಾಂಗಿಸ್ಖಾನ್ ಪೆಟಾದಲ್ಲಿ ನೆಲೆಸಿದ ವಿವಾಹಿತ ಮಹಿಳೆಯೊಬ್ಬಳ ಕಾರಣದಿಂದ ಮೂರು ಕುಟುಂಬಗಳಲ್ಲಿ ಬಿರುಗಾಳಿ ಎದ್ದು ದುರಂತದ ಸರಮಾಲೆ ನಡೆದಿದೆ.
ಮಾಮಿದಾಲಾ ಮಹೇಶ್ವರಿ (21) ಎನ್ನುವ ಯುವತಿ ಕಳೆದ ಹನ್ನೊಂದು ತಿಂಗಳ ಹಿಂದೆ ಯೋಧ ಶಿವಶಂಕರ್ ಎಂಬಾತನೊಡನೆ ವಿವಾಹವಾಗಿದ್ದಳು. ಆ ನಂತರ ಶಿವಶಂಕರ್ ನನ್ನು ಹೈದರಾಬಾದ್‌ಗೆ ವರ್ಗಾಯಿಸಲಾಯಿತು. ಆಗ ಪತ್ನಿಯನ್ನು ಕರೆದುಕೊಂಡು ಹೋಗಲು ರಜೆಯ ಮೇಲೆ ಗ್ರಾಮಕ್ಕೆ ಬಂದಿದ್ದ ಪತಿಯೊಡನೆ ಹೋಗಲು ಮಹೇಶ್ವರಿ ಒಪ್ಪಲಿಲ್ಲ.
ಈ ತಿಂಗಳು 8 ರಂದು ಪ್ರಕಾಶಂ ಜಿಲ್ಲೆ ಆದಿಪುಡಿಯಲ್ಲಿನ ತನ್ನ ಗೆಳೆಯನ ಮನೆಗೆ ತೆರಳಿದ್ದ ಮಹೇಶ್ವರಿ ಅಲ್ಲೇ ವಾಸವಿರುತ್ತಾಳೆ. ಮಹೇಶ್ವರಿಯ ಕುಟುಂಬ ಸದಸ್ಯರು ಆಕೆಯನ್ನು ಮನೆಗೆ ಬರಲು ಕೇಳಿಕೊಂಡರೂ ಆಕೆ ಒಪ್ಪುವುದಿಲ್ಲ. ಇದರಿಂದ ಮನನೊಂದ ಮಹೇಶ್ವರಿ ಪತಿ ಶಿವಶಂಕರ್ ಅದೇ ದಿನ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸುತ್ತಾನೆ. ಇದನ್ನು ಗಮನಿಸಿದ ಆತನ ಸಂಬಂಧಿಗಳು ಕೂಡಲೇ ಅವನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಪ್ರಕಾಶಮ್ ಜಿಲ್ಲೆಯ ಆದಿಪುಡಿಯಲ್ಲಿದ್ದ ಮಹೇಶ್ವರಿಯ ಪ್ರಿಯತಮನ ತಂದೆ ಚುಂದುರಿ ಭದ್ರಯ (50) ತನ್ನ ಮಗ ಮದುವೆಯಾಗಿರುವ ಮಹಿಳೆಯನ್ನು ಪ್ರೀತಿಸುವುದಲ್ಲದೆ ಮನೆಗೆ ಕರೆತಂದು ಇಟ್ಟುಕೊಂಡಿದ್ದಾನೆ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಂತರ ಮಹೇಶ್ವರಿಯನ್ನು ಆಕೆಯ ಕುಟುಂಬ ಸದಸ್ಯರು ಮನೆಗೆ ಕರೆದುತಂದಿದ್ದಾರೆ. ಆದರೆ ಈ ಎಲ್ಲಾ ಘಟನೆಗಳಿಂದ ಅಸಮಾಧಾನಗೊಂಡ ಮಹೇಶ್ವರಿ ಭಾನುವಾರ ಬಾತ್‌ರೂಂನಲ್ಲಿ ಚೂರಿಯಿಂದ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇನ್ನೊಂದೆಡೆ ಮಹೇಶ್ವರಿ ಪತಿ ಶಿವಶಂಕರ್ ಅವರ ತಂದೆ ಮಗನ ಸ್ಥಿತಿಯನ್ನು ಕಂಡು ಆಘಾತಗೊಂಡಿದ್ದು ಅವರಿಗೆ ಹೃದಯಾಘಾತವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತನ್ನ ನಾಲ್ಕು ಹೆಣ್ಣುಮಕ್ಕಳ ನಂತರ ಜನಿಸಿದ ತಮ್ಮ ಏಕೈಕ ಪುತ್ರನ ಜೀವನ ಈ ರೀತಿ ಆಗಿದೆಯಲ್ಲ ಎಂದು ಶಿವಯ್ಯ ಮತ್ತು ಅವರ ತಾಯಿ ಅಕ್ಕಮ್ಮ ಆತಂಕದಲ್ಲಿದ್ದಾರೆ.
ಒಂದು ಕಡೆ, ಮಹೇಶ್ವರಿಯ ಪೋಷಕರಾದ ವೆಂಕಟನಾಗಲಕ್ಷ್ಮಿ ಮತ್ತು ಸಾಂಬಶಿವರಾವು ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡ ಕಾರಣ ದುಃಖದಲ್ಲಿದ್ದಾರೆ. ಮತ್ತೊಂದೆಡೆ ಶಿವಶಂಕರ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ. ವೆಂಕಟನಗಲಕ್ಷ್ಮಿ ಅವರ ದೂರಿನ ಪ್ರಕಾರ, ಎಸ್‌ಐ ಪೈದಿ ರಾಂಬಾಬು ಪ್ರಕರಣದ ತನಿಖೆ ನಡೆಸಿದ್ದಾರೆ. ಒಟ್ತಾರೆ ಒಂದು ಅಕ್ರ್ಮ ಸಂಬಂಧ ಮೂರು ಕುಟುಂಬಗಳಲ್ಲಿ ದೊಡ್ದ ಅನಾಹುತಕ್ಕೆ ಕಾರಣವಾಗಿದೆ.