ತಿರುವನಂತಪುರ: ವಿಧಾನಸಭೆ ದೊಂಬಿ ಪ್ರಕರಣದ ವಿಚಾರಣೆಯನ್ನು ಎದುರಿಸಲು ಸಿದ್ಧ ಎಂದು ಮಾಜಿ ಸಚಿವ ಕೆ.ಟಿ.ಜಲೀಲ್ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ. ಈ ಪ್ರಕರಣವು ಲೂಟಿ ಅಥವಾ ದರೋಡೆ ನಡೆಸಿದ ಪ್ರಕರಣವಲ್ಲ. ಆದರೆ ಯುಡಿಎಫ್ ಲೂಟಿ ಎಂಬಂತೆ ವರ್ತಿಸುತ್ತಿದೆ ಎಂದು ಜಲೀಲ್ ಹೇಳಿದರು. ಫೇಸ್‌ಬುಕ್ ಪೋಸ್ಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
‘ ಅಂದಿನ ಯುಡಿಎಫ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧದ ಹೋರಾಟದ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಕೆಲವು ಪ್ರಕ್ಷುಬ್ಧ ಘಟನೆಗಳು ನಡೆದವು. ಘಟನೆಗೆ ಸಂಬಂಧಿಸಿದಂತೆ ಅಂದಿನ ಶಾಸಕಾಂಗ ಕಾರ್ಯದರ್ಶಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣದ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಮಾನ್ಯ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ತೀರ್ಪು ಸ್ವಾಗತಾರ್ಹ. ವಿಚಾರಣೆ ನಡೆಯಲಿ. ಏನು ಹೇಳಬೇಕೆಂದು ಸಂಬಂಧಪಟ್ಟ ನ್ಯಾಯಾಲಯಕ್ಕೆ ತಿಳಿಸಲಾಗುವುದು. ಪ್ರಕರಣವು ಲೂಟಿ ಅಥವಾ ಕೊಲೆಯಂತಹ ಪ್ರಕರಣ ಅಲ್ಲ, ಆದರೆ ಯುಡಿಎಫ್ ಹಾಗೆ ಚಿತ್ರಿಸಲು ಯತ್ನಿಸುತ್ತಿದೆ.ಇದು ರಾಜಕೀಯ ದ್ವೇಶವಷ್ಟೆ ಎಂದು ಕೆ.ಟಿ.ಜಲಿಲ್ ಬರೆದಿರುವರು.
ಕೆ.ಎಂ.ಮಣಿ ವಿರುದ್ಧ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಬಜೆಟ್ ಮಂಡಿಸುವಾಗ ವಿಧಾನಸಭೆ ಆಕ್ರೋಶಗೊಂಡಿತು. ಪ್ರತಿಪಕ್ಷದ ಸದಸ್ಯರು ಶುಕ್ರವಾರ ವಿಧಾನಸಭೆ ಅಧಿವೇಷನಕ್ಕೆ ನುಗ್ಗಿ, ನೂರಾರು ಗಲಭೆ ಎಬ್ಬಿಸಿತು. ಮಹಿಳಾ ಸದಸ್ಯರ ಮೇಲೆ ಹಲ್ಲೆ ನಡೆದ ಘಟನೆಯೂ ನಡೆಯಿತು.