ಮಂಜೇಶ್ವರ: ಮಂಜೇಶ್ವರ ಸಕಾರಿ ಆಸ್ಪತ್ರೆಯಲ್ಲಿ ವೇಕ್ಷೀನ್ ನೇಶನ್ ಅವ್ಯವಸ್ಥೆ ಕೂಡಲೇ ಸರಿ ಪಡಿಸಬೇಕು ಹಾಗೂ ಸ್ಥಳೀಯರಿಗೆ ಪ್ರಥಮ ಪ್ರಾಶಸ್ತ್ಯ ನೀಡಬೇಕೆಂದು ಬಿಜೆಪಿ ಮಂಜೇಶ್ವರ ಪಂಚಾಯತಿ ಸಮಿತಿ ಆಗ್ರಹಿಸಿದೆ.
ಕರ್ನಾಟಕ ವಿವಿಧ ಕಾಲೇಜುಗಳಲ್ಲಿ ಪರೀಕ್ಷೆ ಬರೆಯಲು ಇರುವ ವಿದ್ಯಾರ್ಥಿಗಳು ಹಾಗೂ ಉದ್ಯೋಗದ ನಿಮಿತ ಹೋಗುವವರಿಗೆ ವೇಕ್ಷೀನ್ ಲಭ್ಯ ಮಾಡಬೇಕು, ಹಾಗೂ ಕೋವಿಡ್ ಟೆಸ್ಟ್ ಪ್ರಮಾಣ ಹೆಚ್ಚಿಸಿ ಮಂಜೇಶ್ವರ ಪಂಚಾಯತಿನ್ನು ಟ್ರಿಪ್ಪಲ್ ಲಾಕ್ ಡೌನ್ ನಿಂದ ಸಾಮಾನ್ಯ ಸ್ಥಿತಿಗೆ ಬರುವಂತೆ ವ್ಯವಸ್ಥೆ ಮಾಡಬೇಕೆಂದು ಬಿಜೆಪಿ ಆಗ್ರಹಿಸಿದೆ. ಪಂಚಾಯತ್ ವ್ಯಾಪ್ತಿಯಲ್ಲಿ ನಿತ್ಯ ವೇಕ್ಸಿನೇಷನ್ ಹೆಚ್ಚಿಸಬೇಕು ಎಂದು ಒತ್ತಾಯಿಸಿದೆ. ಬಿಜೆಪಿ ವತಿಯಿಂದ ಕೋವಿಡ್ ಲಸಿಕಾ ದಾಖಲಾತಿ ಕ್ಯಾಂಪ್ ಮಾಡಲು ತೀರ್ಮಾನಿಸಲಾಯಿತು.ವರ್ಚುವಲ್ ಆಗಿ ನಡೆದ ಬಿಜೆಪಿ ಸಭೆಯಲ್ಲಿ ರಾಜೇಶ್ ತೂಮಿನಾಡು ಅಧ್ಯಕ್ಷತೆ ವಹಿಸಿದ್ದರು.ಆದರ್ಶ್ ಬಿ.ಎಂ., ನ್ಯಾಯವಾದಿ. ನವೀನ್ ರಾಜ್, ಹರಿಶ್ಚಂದ್ರ ಎಂ, ಯಾದವ ಬಡಾಜೆ, ಪದ್ಮನಾಭ, ಸಂತೋಷ್, ರಾಜೇಶ್ ಮಜಲ್, ಅವಿನಾಶ್ ಉಪಸ್ಥಿತರಿದ್ದರು.
ಯಷ್ಪಾಲ್ ಎಂ ಸ್ವಾಗತಿಸಿ, ಲಕ್ಷ್ಮಣ್ ವಂದಿಸಿದರು.