HEALTH TIPS

ಜಿಲ್ಲೆಯ ಕೋವಿಡ್ ಕಟ್ಟುನಿಟ್ಟುಗಳಲ್ಲಿ ಸಡಿಲಿಕೆ

          ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಜಾರಿಗೊಂಡಿರುವ ಕೋವಿಡ್ ಕಟ್ಟುನಿಟ್ಟುಗಳಲ್ಲಿ ಜುಲೈ 1 ರಿಂದ 7 ವರೆಗೆ ಈ ಕೆಳಗೆ ತಿಳಿಸಲಾದ ಸಡಿಲಿಕೆ ನಡೆಸಲಾಗಿದೆ ಎಂದು ಜಿಲ್ಲಾ ಪಿಡುಗು ನಿವಾರಣೆ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಮ್ಮ ಆದೇಶದಲ್ಲಿ ತಿಳಿಸಿದರು. 

             ಉದ್ದಿಮೆ, ಕೃಷಿ ಚಟುವಟಿಕೆಗಳಿಗೆ, ಕೋರೆ ಸಹಿತ ನಿರ್ಮಾಣ ಚಟುವಟಿಕೆಗಳಿಗೆ ಎಲ್ಲ ಸ್ಥಳೀಯಾಡಳಿತ ಸಂಸ್ಥೇಗಳ ವ್ಯಾಪ್ತಿಯಲ್ಲಿ ಅನುಮತಿಯಿದೆ. ಈ ವಲಯಗಳ ಕಾರ್ಮಿಕ ಸಂಚಾರಕ್ಕೆ ಅನುಮತಿಯಿರುವುದು. ಇಲ್ಲಿನ ಅಗತ್ಯಗಳಿಗಾಗಿ ಪ್ಯಾಕೇಜಿಂಗ್ ಸಹಿತ ಕಚ್ಚಾ ವಸ್ತುಗಳ ಮಾರಾಟ ಅಂಗಡಿಗಳು ಬೆಳಗ್ಗೆ 7 ರಿಂದ ಸಂಜೆ 7 ಗಂಟೆ ವರೆಗೆ ಚಟುವಟಿಕೆ ನಡೆಸಬಹುದಾಗಿದೆ. 

           ಆಹಾರೋತ್ಪನ್ನಗಳು, ಹಾಲು- ಹಾಲುತ್ಪನ್ನಗಳು, ಮೀನು-ಮಾಂಸ, ಹಣ್ಣು-ತರಕಾರಿ ಇತ್ಯಾದಿಗಳ ಅಂಗಡಿಗಳು, ಪಡಿತರ ಅಂಗಡಿಗಳು, ದಿನಸಿ ಅಂಗಡಿಗಳು, ಬೇಕರಿಗಳು, ಮೃಗ-ಪಕ್ಷಿಗಳ ತಿನಿಸು ಅಂಗಡಿಗಳು ಇತ್ಯಾದಿಗಳು ಎಲ್ಲ ಕಡೆ ಬೆಳಗ್ಗೆ 7 ರಿಂದ ಸಂಜೆ 7 ಗಂಟೆ ವರೆಗೆ ಕಾರ್ಯಾಚರಿಸಬಹುದು. 

               ಕೇಂದ್ರ-ರಾಜ್ಯ ಸರಕಾರಿ ಕಚೇರಿಗಳು, ಸಾರ್ವಜನಿಕ ಸಂಸ್ಥೇಗಳು, ಸರಕಾರಿ ಕಂಪನಿಗಳು, ಕಮೀಷನ್ ಗಳು, ನಿಗಮಗಳು, ಸ್ಥಲೀಯಾಡಳಿತ ಸಂಸ್ಥೆಗಳು, ಬ್ಯಾಂಕ್ ಗಳು ಎ ಮತ್ತು ಬಿ ಕ್ಯಾಟಗರಿ ವಲಯಗಳಲ್ಲಿ ಶೇ 50 ಸಿಬ್ಬಂದಿ, ಸಿ ಕ್ಯಾಟಗರಿಯಲ್ಲಿ ಶೇ 25 ಸಿಬ್ಬಂದಿ ಬಳಕೆಯೊಂದಿಗೆ ಚಟುವಟಿಕೆ ನಡೆಸಬಹುದು. ಬ್ಯಾಂಕ್ ಗಳು, ಹಣಕಾಸು ಸಂಸ್ಥೆಗಳು ಸದ್ರಿ ಜಾರಿಯಲ್ಲಿರುವ ರೀತಿ ಸೋಮ, ಬುಧ, ಶುಕ್ರವಾರದಂದು ಗ್ರಾಹಕರ ಜೊತೆಗೆ ವ್ಯವಹಾರ ನಡೆಸಬಹುದಾಗಿದೆ. 

       ಕೆ.ಎಸ್.ಆರ್.ಟಿ.ಸಿ., ಖಸಗಿ ಬಸ್ ಗಳು ಕೋವಿಡ್ ಕಟ್ಟುನಿಟ್ಟು ಪಾಲಿಸಿ ಸಂಚಾರಕ್ಕೆ ಅನುಮತಿಯಿದೆ. ಕ್ಯಾಟಗರಿ ಸಿ ಮತ್ತು ಡಿ ವಲಯಗಳಲ್ಲಿ ಸ್ಟಾಪ್ ಗಳು ಇರುವುದಿಲ್ಲ. 

      ಶನಿ, ಭಾನುವಾರಗಳಂದು ಬಿಗಿ ಕಟ್ಟುನಿಟ್ಟುಗಳೊಂದಿಗೆ ಸಂಪೂರ್ಣ ಲಾಕ್ ಡೌನ್ ಇರುವುದು. ಈ ದಿನಗಳಲ್ಲಿ ಅಗತ್ಯದ ಸಾಮಾಗ್ರಿಗಳ ಅಂಗಡಿಗಳು ಮತ್ತು ಅಗತ್ಯ ಸೇವೆಗಳಿಗೆ ಅನುಮತಿಯಿದೆ. ಶನಿ, ಭಾನು ವಾರದಂದು ಪರೀಕ್ಷೆಗಳನ್ನು ನಡೆಸಲು ಅನುಮತಿಯಿದೆ. 

         ಟೆಸ್ಟ್ ಪಾಸಿಟಿವಿಟಿ ಗಣನೆ 12 ರಿಂ 18 ರ ಮಧ್ಯೆ ಇರುವ ಕ್ಯಾಟಗರಿ "ಸಿ"ಯಲ್ಲಿ ಬದಿಯಡ್ಕ, ಕೋಡೋಂ-ಬೇಳೂರು, ಪಳ್ಳಿಕ್ಕರೆ, ಪೈವಳಿಕೆ, ವೆಸ್ಟ್ ಏಲೇರಿ, ಚೆಮ್ನಾಡು, ಅಜಾನೂರು, ಕಾರಡ್ಕ ಗ್ರಾಮ ಪಂಚಾಯತ್ ಗಳನ್ನು, ಕಾಞಂಗಾಡು, ನೀಲೇಶ್ವರ ನಗರಸಭೆಗಳನ್ನು ಅಳವಡಿಸಲಾಗಿದೆ. 

        ಟೆಸ್ಟ್ ಪಾಸಿಟಿವಿಟಿ ಸರಾಸರಿ  ಗಣನೆ 6 ರಿಂದ 12 ರ ಮಧ್ಯೆ ಇರುವ "ಬಿ" ಕ್ಯಾಗರಿಯಲ್ಲಿ ಬಳಾಲ್, ಕಾಸರಗೋಡು, ಎಣ್ಮಕಜೆ, ಕಳ್ಳಾರ್, ದೇಲಂಪಾಡಿ, ಕಿನಾನೂರು-ಕರಿಂದಲಂ, ಕುಂಬಡಾಜೆ, ಕುಂಬಳೆ, ಮಡಿಕೈ, ಮಂಗಲ್ಪಾಡಿ, ಈಸ್ಟ್ ಏಳೇರಿ, ಪನತ್ತಡಿ ಎಂಬ ಸ್ಥಳೀಯಾಡಳಿತ ಸಂಸ್ಥೆಗಳನ್ನು ಅಳವಡಿಸಲಾಗಿದೆ.

           ಟೆಸ್ಟ್ ಪಾಟಿಸಿಟಿವಿಟಿ ಸರಾಸರಿ ಗಣನೆ 6ಕ್ಕಿಂತ ಕಡಿಮೆಯಿರುವ "ಎ" ಕ್ಯಾಟಗರಿಯಲ್ಲಿ ಪುತ್ತಿಗೆ, ಪಿಲಿಕೋಡು, ಕಯ್ಯೂರು-ಚೀಮೇನಿ, ತ್ರಿಕರಿಪುರ, ಮೀಂಜ, ವಲಿಯಪರಂಬ, ಪಡನ್ನ, ಬೆಳ್ಳೂರು, ವರ್ಕಾಡಿ  ಎಂಬ ಸ್ಥಳೀಯಾಡಳಿತ ಸಂಸ್ಥೆಗಳನ್ನು ಸೇರಿಸಲಾಗಿದೆ. 

ಪ್ರತಿ ಕ್ಯಾಟಗರಿಯಲ್ಲಿ ಅನುಮತಿ ಹೊಂದಿರುವವು

          ಕ್ಯಾಟಗರಿ "ಡಿ"-

                             ಟೆಸ್ಟ್ ಪಾಸಿಟಿವಿಟಿ ಗಣನೆ ಶೇ 18ಕ್ಕಿಂತ ಅಧಿಕವಾಗಿರುವ ಕ್ಯಾಟಗರಿ "ಡಿ"ಯಲ್ಲಿ ಸೇರಿರುವ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ರಾಜ್ಯದ ಎಲ್ಲೆಡೆ ಇರುವಂತೆ ಶನಿ, ಭಾನುವಾರದ ಸಂಪೂರ್ಣ ಲಾಕ್ ಡೌನ್ ಇರುವುದು.

            ಕ್ಯಾಟಗರಿ "ಸಿ"-

     ಅಗತ್ಯದ ಸಾಮಾಗ್ರಿಗಳ ಅಂಗಡಿಗಳು ಮಾತ್ರ ಬೆಳಗ್ಗೆ 7 ರಿಂದ ಸಂಜೆ 7 ವರೆಗೆ ತೆರೆದು ಕಾರ್ಯಾಚರಿಸಲು ಅನುಮತಿಯಿದೆ. ಇತರ ಅಂಗಡಿಗಳು( ವಿವಾಹ ಸಂಬಂಧ ಬಟ್ಟೆಬರೆ ಅಂಗಡಿ, ಜ್ಯುವೆಲ್ಲರಿ, ಫುಟ್ ವೇರ್, ಕಲಿಕೋಪಕರಣ, ದುರಸ್ತಿ ಅಂಗಡಿ) ಶುಕ್ರವಾರ ಮಾತ್ರ ಬೆಳಗ್ಗೆ 7 ರಿಂದ ಸಂಜೆ 7 ವರೆಗೆ ಅಧಾರ್ಂಶ ಸಿಬ್ಬಂದಿಯೊಂದಿಗೆ ಚಟುವಟಿಕೆ ನಡೆಸಬಹುದು. ಹೋಟೆಲ್ ಗಳು, ರೆಸ್ಟಾರೆಂಟ್ ಗಳಲ್ಲಿ ಪಾರ್ಸೆಲ್/ ಹೋಂ ಡೆಲಿವರಿ ಮಾತ್ರ. ಸಾರ್ವಜನಿಕ ಸಂಸ್ಥೆಗಳು, ಕಂಪನಿಗಳು, ಕಮೀಷನ್ ಗಳು, ನಿಗಮಗಳು, ಸ್ಥಳೀಯಾಡಳಿತ ಸಂಸ್ಥೆಗಳು ಇತ್ಯಾದಿ ಶೇ 25 ಸಿಬ್ಬಂದಿಯನ್ನು ಬಳಸಿ ಚಟುವಟಿಕೆ ನಡೆಸಬಹುದು. 

               ಕ್ಯಾಟಗರಿ "ಬಿ"-

        ಸಾರ್ವಜನಿಕ ಸಂಸ್ಥೆಗಳು, ಕಂಪನಿಗಳು, ಕಮೀಷನ್ ಗಳು, ನಿಗಮಗಳು, ಸ್ಥಳೀಯಾಡಳಿತ ಸಂಸ್ಥೆಗಳು ಶೇ 50 ಸಿಬ್ಬಂದಿಯನ್ನು ಬಳಸಿ ಕಾರ್ಯಾಚರಿಸಬಹುದು. ಉಳಿದವರು ವರ್ಕ್ ಫ್ರಂ ಹೋಂ ಕರ್ತವ್ಯ ನಡೆಸಬೇಕು. ಅಗತ್ಯದ ಸಾಮಾಗ್ರಿಗಳ ಅಂಗಡಿಗಳು ಮಾತ್ರ ಬೆಳಗ್ಗೆ 7 ರಿಂದ ಸಂಜೆ 7 ವರೆಗೆ ಚಟುವಟಿಕೆ ನಡೆಸಬಹುದು. ಇತರ ಅಂಗಡಿಗಳು ಸೋಮ, ಬುಧ, ಶುಕ್ರ ವಾರಗಳಂದು ಬೆಳಗ್ಗೆ 7 ರಿಂದ ಸಂಜೆ 7 ಗಂಟೆ ವರೆಗೆ ಚಟುವಟಿಕೆ ನಡೆಸಬಹುದು. ಪರಸ್ಪರ ಸಂಪರ್ಕವಿಲ್ಲದ ಹೊರಾಂಗಣ ಕ್ರೀಡಾ ಚಟುವಟಿಕೆಗಳಿಗೆ ಅನುಮತಿಯಿದೆ. ಸಾಮಾಜಿಕ ಅಂತರ ಪಾಲಿಸಿ ಬೆಳಗ್ಗೆ ಮತ್ತು ಸಂಜೆ ವ್ಯಾಯಾಮ ನಡೆಸಬಹುದು. ಹೋಟೆಲ್, ರೆಸ್ಟಾರೆಂಟ್ ಗಳಲ್ಲಿ ಪಾರ್ಸೆಲ್/ ಹೋಂ ಡೆಲಿವರಿ ಮಾತ್ರ. ಮನೆಗಳಲ್ಲಿ ಕೆಲಸದಾಳುಗಳು ಸಂಚಾರ ನಡೆಸಬಹುದು. ಆರಧನಾಲಯಗಳಲ್ಲಿ ಗರಿಷ್ಠ 15 ಮಂದಿಗೆ ಪ್ರವೇಶಾತಿ ಇರುವುದು. ಕೋವಿಡ್ ಕಟ್ಟುನಿಟ್ಟು ಕಡ್ಡಾಯವಾಗಿ ಪಾಲಿಸಬೇಕು. 

             ಕ್ಯಾಟಗರಿ "ಎ"-

            ಎಲ್ಲ ಸಾರ್ವಜನಿಕ ಸಂಸ್ಥೆಗಳು, ನಿಗಮಗಳು, ಕಮೀಷನ್ ಗಳು, ಕಂಪನಿಗಳು, ಸ್ಥಳೀಯಾಡಳಿತ ಸಂಸ್ಥೆಗಳು ಶೇ 50 ಸಿಬ್ಬಂದಿ ಬಳಸಿ ಚಟುವಟಿಕೆ ನಡೆಸಬಹುದು. ಉಳಿದವರು ವರ್ಕ್ ಪ್ರಂ ಹೋಂ ಕರ್ತವ್ಯ ನಡೆಸಬಹುದು. ಎಲ್ಲ ಅಂಗಡಿಗಳು(ಅಕ್ಷಯ ಕೇಂದ್ರಗಳ ಸಹಿತ) ಶೇ 50 ಸಿಬ್ಬಂದಿ ಬಳಸಿ ಬೆಳಗ್ಗೆ 7 ರಿಂದ ಸಂಜೆ 7 ಗಂಟೆ ವರೆಗೆ ಚಟುವಟಿಕೆ ನಡೆಸಬಹುದು. ಆಟೋ, ಟಾಕ್ಸಿ ಚಟುವಟಿಕೆ ನಡೆಸಬಹುದು. ಟಾಕ್ಸಿಗಳಲ್ಲಿ ಚಾಲಕ ಅಲ್ಲದೆ ಮೂವರು, ಆಟೋಗಳಲ್ಲಿ ಇಬ್ಬರು ಪ್ರಯಾಣಿಕರು ಸಂಚಾರ ನಡೆಸಬಹುದು. ಒಂದೇ ಕುಟುಂಬದ ಸದಸ್ಯರಾಗಿದ್ದಲ್ಲಿ ಈ ಶರತ್ತು ಅನ್ವಯವಲ್ಲ. ಬಿವರೇಜಸ್ ಔಟ್ ಲೆಟ್ ಗಳು, ಬಾರುಗಳು ಇತ್ಯಾದಿಗಳಲ್ಲಿ ಟೇಕ್ ಎವೇ ಕೌಮಟರ್ ಗಳು ಮಾತ್ರ ಚಟುವಟಿಕೆ ನಡೆಸಬಹುದು. ಪರಸ್ಪರ ಸಂಪರ್ಕವಿಲ್ಲದ ಹೊರಾಂಗಣ ಕ್ರೀಡಾ ಚಟುವಟಿಕೆಗಳಿಗೆ ಅನುಮತಿಯಿದೆ. ಹೋಟೆಲ್, ರೆಸ್ಟಾರೆಂಟ್ ಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ 7 ವರೆಗೆ ಪಾರ್ಸೆಲ್/ ಹೋಂ ಡೆಲಿವರಿ ಮಾತ್ರ. ಹೋ ಡೆಲಿವರಿ ರಾತ್ರಿ 9.30 ವರೆಗೆ ನಡೆಸಬಹುದು. ಮನೆ ಕೆಲಸದಾಳುಗಳು ಸಂಚಾರ ನಡೆಸಬಹುದು. ಆರಾಧನಾಲಯಗಳಲ್ಲಿ ಗರಿಷ್ಠ 15 ಮಂದಿಗೆ ಪ್ರವೇಶಾತಿ ಇರುವುದು. ಕೋವಿಡ್ ಕಟ್ಟುನಿಟ್ಟು ಕಡ್ಡಾಯವಾಗಿ ಪಾಲಿಸಬೇಕು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries