ಕರಾವಳಿ ನಾಡಿನ ಸಮಗ್ರ ಜನಜೀವನದ ಮೇಲೆ ಪ್ರಭಾವಶಾಲಿಯಾಗಿ ಸಮಗ್ರ ಜಾಗೃತಿಮೂಡಿಸುವುದು ಸುಲಭದ ಮಾತೇನೂ ಅಲ್ಲ. ಸಾಮುದಾಯಿಕ, ರಾಜಕೀಯ,ಸಾಂಸ್ಕ್ರತಿಕ,ಆರ್ಥಿಕ ಕ್ಷೇತ್ರಗಳೇ ಮೊದಲಾದ ವಿಭಾಗಗಳಲ್ಲಿ ಪ್ರತ್ಯೇಕ ದೃಢತೆಗಳೊಂದಿಗೆ ಮುನ್ನಡೆಯುತ್ತೇವೆ ಎಂಬ ಪರಿಕಲ್ಪನೆಯಲ್ಲಿ ಸಾಗಿ ಬಂದಿರುವ ಜನಪದರ ಬದುಕು ವಿಶಿಷ್ಟವಾದುದು.
ಜನಜೀವನದ ಮೂಲಾಧಾರವಾದ ಜಲ, ಕಳೆದೆರಡು ದಶಕಗಳೀಚೆ ಕರಾವಳಿ ಭಾಗ ಸಹಿತ ಎಲ್ಲೆಡೆ ಉಂಟುಮಾಡಿದ ಕ್ಷಾಮದ ಭಯ ನಮಗೆಲ್ಲ ಪರಿಚಿತವೆ. ಜೊತೆಗೆ ಕೃಷಿಯಂತಹ ಸಾಂಪ್ರದಾಯಿಕ ವ್ಯವಸ್ಥೆಗಳೂ ಭೀತಿಗೊಳಪಟ್ಟವು. ಇಂತಹ ಸಂದರ್ಭ, ಕೃಷಿ ಕ್ಷೇತ್ರದ ಪತ್ರಿಕೋಧ್ಯಮ ಮತ್ತು ಜಲಜಾಗೃತಿಯ ಮೂಲಕ ಸೇವಾ ತತ್ಪರರಾಗಿ ಜಲಕ್ರಾಂತಿಗೆ ಕಾರಣರಾದವರು ಅಂತರಾಷ್ಟ್ರೀಯ ಜಲತಜ್ಞ ಶ್ರೀಪಡ್ರೆ ಅವರು. ನಿರಂತರ ತಂತ್ರಜ್ಞಾನದ ಅವಲೋಕನದೊಂದಿಗೆ ಹೊಸ- ಹೊಸ ಸಾಧ್ಯತೆಗಳ ಬಗ್ಗೆ ಸುಧೀರ್ಘ ಕಾಲದಿಂದ ತೊಡಗಿಸಿಕೊಂಡಿರುವ ಶ್ರೀಪಡ್ರೆಯವರ ಬದುಕು- ಸಾಧನೆಗಳ ಬಗ್ಗೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಸಮರಸ ಸುದ್ದಿ ಅವರೊಂದಿಗೆ ನಡೆಸಿದ ಸಂವಾದದ ಆಯ್ದಭಾಗ ಇಲ್ಲಿ ವೀಕ್ಷಕರಿಗಾಗಿ.
ಸಮರಸ-ಸಂವಾದ:ಅತಿಥಿ: ಶ್ರೀಪಡ್ರೆ. ಖ್ಯಾತ ಜಲತಜ್ಞ, ಪತ್ರಕರ್ತ.
0
ಜುಲೈ 25, 2021
Tags