ಬದಿಯಡ್ಕ: ಕೋವಿಡ್ ಹೆಸರಿನಲ್ಲಿ ವ್ಯಾಪಾರ ಸಂಸ್ಥೆಗಳನ್ನು ತೆರೆಯಲು ನಿರ್ಬಂಧ ಹೇರಿರುವ ಸರ್ಕಾರದ ನೀತಿಗೆದುರಾಗಿ ಬದಿಯಡ್ಕ ವ್ಯಾಪಾರಿಗಳು ವಿನೂತನ ಪ್ರತಿಭಟನೆಯನ್ನು ನಡೆಸಿದರು.
ಸೋಮವಾರ ಬೆಳಗ್ಗೆ ಪೇಟೆಯಲ್ಲಿ ವ್ಯಾಪಾರಿಗಳು ಬಕೆಟ್, ನಾಮಫಲಕಗಳನ್ನು ಹಿಡಿದು ಭಿಕ್ಷಾಟನೆ ನಡೆಸಿದರು. ಭಿಕ್ಷಾಟನಾ ಮೆರವಣಿಗೆಯೊಂದಿಗೆ ಮುಂದುವರಿದ ವ್ಯಾಪಾರಿಗಳು ಬದಿಯಡ್ಕ ಪ್ರಧಾನÀ ಕೂಡುರಸ್ತೆಯ ಪರಿಸರದಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು.
ಕೆವಿವಿಇಎಸ್ ಬದಿಯಡ್ಕ ಘಟಕದ ಅಧ್ಯಕ್ಷ ಕುಂಜಾರು ಮುಹಮ್ಮದ್ ಹಾಜಿ ಉದ್ಘಾಟಿಸಿ ಮಾತನಾಡಿ ವ್ಯಾಪಾರಿಗಳು ಅನುಭವಿಸುವ ಸಂಕಷ್ಟವನ್ನು ಸರ್ಕಾರದ ಗಮನಕ್ಕೆ ತರಲು ಇಂತಹ ವಿನೂತನ ಪ್ರತಿಭಟನೆಗೆ ಮುಂದಾಗಿದ್ದೇವೆ. ಅದೆಷ್ಟೋ ವ್ಯಾಪಾರಿಗಳು ಬ್ಯಾಂಕ್ ಸಾಲ ಮಾಡಿ ತಮ್ಮ ಸಂಸ್ಥೆಯನ್ನು ತೆರೆದಿದ್ದು, ಇದೀಗ ಸಂಸ್ಥೆಯನ್ನು ಪೂರ್ಣ ಪ್ರಮಾಣದಲ್ಲಿ ತೆರೆದು ವ್ಯಾಪಾರ ನಡೆಸಲು ಸಾಧ್ಯವಾಗದೆ ತಮ್ಮ ಕುಟುಂಬ ಪೋಷಣೆಗೂ ಕಷ್ಟಪಡುವಂತಾಗಿದೆ. ಬಾಡಿಗೆ ನೀಡಲು ಹಣವಿಲ್ಲದೆ ಒದ್ದಾಡುವಂತಾಗಿದೆ. ಸರ್ಕಾರವು ಟಿಪಿಆರ್ ಮಾನದಂಡದ ಮೂಲಕ ನಡೆಸುವ ಲಾಕ್ ಡೌನ್ ನಿಲುವನ್ನು ಸಡಿಲಿಸಬೇಕು ಎಂದರು.
ವ್ಯಾಪಾರಿ ಮುಖಂಡರಾದ ನರೇಂದ್ರ ಬದಿಯಡ್ಕ, ಜ್ಞಾನದೇವ ಶೆಣೈ, ರಾಜುಸ್ಟೀಫನ್, ರವಿ ಮೊದಲಾದವರು ನೇತೃತ್ವ ವಹಿಸಿದ್ದರು. ವಿವಿಧ ವ್ಯಾಪಾರ ಸಂಸ್ಥೆಯ ಮಾಲಕರು, ನೌಕರರು ಪಾಲ್ಗೊಂಡಿದ್ದರು.