ಕಾಸರಗೋಡು: ಮಹಿಳೆಯರ ಮೇಲೆ ದೌರ್ಜನ್ಯ ವಿರುದ್ಧ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗ್ರಂಥಾಲಯ ಮಂಡಳಿ ವತಿಯಿಂದ ಗ್ರಂಥಾಲಯಗಳಲ್ಲಿ "ಸ್ನೇಹಪಥ" ನಡೆಸಲಾಗುವುದು.
ಸಾರ್ವಜನಿಕ ವಲಯಗಳಲ್ಲಿ ಮತ್ತು ಮನೆಗಳಲ್ಲಿ ಮಹಿಳೆಯರನ್ನು ದ್ವಿತೀಯ ಪ್ರಜೆಯಾಗಿ ಕಾಣುವ ಮನೋಭಾವನ್ನು ಇಲ್ಲವಾಗಿಸಿ, ಸಮಾನತೆ ಖಚಿತಪಡಿಸುವ ನಿಟ್ಟಿನಲ್ಲಿ ನಡೆಸುವ ಅಭಿಯಾನದ ಮೊದಲ ಹಂತವಾಗಿ ಎUಐಙ 15ರಂದು ಗ್ರಂಥಾಲಯಗಳಲ್ಲಿ "ಸ್ನೇಹಪಥ" ಎಂಬ ಹೆಸರಿನ ಕಾರ್ಯಕ್ರಮ ನಡೆಸಲಾಗುವುದು. ಕೋವಿಡ್ ಕಟ್ಟುನಿಟ್ಟುಗಳ ಸಹಿತ ಯುವಜನ ಮತ್ತವರ ಹೆತವರ ಸಹಿತ ನಿಗದಿತ ಮಂದಿ ಭಾಗವಹಿಸುವರು. ಉಳಿದ ಮಂದಿ ಆನ್ ಲೈನ್ ರೂಪದಲ್ಲಿ ಪಾಲ್ಗೊಳ್ಳುವರು. ಮಹಿಳಾ ಸಂರಕ್ಷಣೆಯಲ್ಲಿ ಸಮಾಜ ಜತೆಗಿದೆ ಎಂಬ ಸಂದೇಶ ಸಾರುವ "ಸ್ನೇಹಪಥ" ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕಾಸರಗೋಡು ಜಿಲ್ಲಾ ಗ್ರಂಥಾಲಯ ಮಂಡಳಿ ಅಧ್ಯಕ್ಷ ಕೆ.ವಿ.ಕುಂuಟಿಜeಜಿiಟಿeಜರಾಮನ್, ಕಾರ್ಯದರ್ಶಿ ಪಿ.ಪ್ರಭಾಕರನ್ ಜಿಲ್ಲೆಯ ಎಲ್ಲ ಗ್ರಂಥಾಲಯ ಕಾರ್ಯಕರ್ತರಲ್ಲಿ ವಿನಂತಿಸಿದರು.