ಉಪ್ಪಳ: ಉಪ್ಪಳ ಹೊಳೆಯ ಸೇತುವೆ ರಸ್ತೆ ಬದಿಯಲ್ಲಿ ಪೊದೆಗಳು ಆವರಿಸಿಕೊಂಡು ವಾಹನ ಸಂಚಾರಕ್ಕೆ ಆತಂಕ ಸೃಷ್ಟಿಯಾಗಿರುವುದಾಗಿ ದೂರಲಾಗಿದೆ.
ಸೇತುವೆಯ ತಡೆ ಬೇಲಿಯಲ್ಲಿ ಪೊದೆಗಳು ತುಂಬಿ ರಸ್ತೆ ತನಕ ಆವರಿಸಿದ್ದು ಇದರಿಂದ ದ್ವಿಚಕ್ರ ವಾಹನ ಸವಾರರಿಗೆ ಮೈಗೆ ತಾಗುವುದರಿಂದ ಅಪಘಾತ ಉಂಟಾಗುವ ಸಾದ್ಯತೆಯಿದೆ. ಅಲ್ಲದೆ ರಸ್ತೆ ಬದಿಯಲ್ಲಿ ಹುಲ್ಲುಗಳು, ಮಣ್ಣು ತುಂಬಿಕೊಂಡು ಮಳೆ ನೀರು ಹರಿಯದೆ ರಸ್ತೆಯಲ್ಲಿ ಕಟ್ಟಿನಿಲ್ಲುತ್ತಿದ್ದು, ಇದರಿಂದ ರಸ್ತೆಯಲ್ಲಿ ನಡೆದು ಹೋಗುವರಿಗೆ ಸಮಸ್ಯೆಯಾಗಿದೆ.
ಮಂಗಳೂರು-ಕಾಸರಗೋಡು ಭಾಗಕ್ಕೆ ದಿನನಿತ್ಯ ನೂರಾರು ವಾಹನಗಳು ಸಂಚರಿಸುತ್ತಿರುವ ಈ ಸೇತುವೆ ಇಕ್ಕೆಡೆಗಳಲ್ಲಿ ಕಬ್ಬಿಣದ ತಡೆ ಬೇಲಿ ಈ ಹಿಂದೆಯೇ ಶೋಚನೀಯವಸ್ಥೆಯಲ್ಲಿದೆ. ಸಂಬಂಧಪಟ್ಟ ಅಧಿಕೃತರು ಸೇತುವೆ ರಸ್ತೆ ಪರಿಸರದಲ್ಲಿ ಶುಚೀಕರಣ ಹಾಗೂ ತಡೆಬೇಲಿ ದುರಸ್ಥಿಗೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.