ಕೊಚ್ಚಿ: ಕೊಚ್ಚಿನ್ ನೌಕಾಂಗಣದಲ್ಲಿ ಅಫಘಾನ್ ಪ್ರಜೆಯೊಬ್ಬನನ್ನು ಬಂಧಿಸಿರುವುದಾಗಿ ತಿಳಿದುಬಂದಿದ್ದು, ಆದರೆ ಈ ಬಗೆಗಿನ ವಿವರಗಳು ಸಂಪೂರ್ಣ ಗೌಪ್ಯವಾಗಿದೆ ಎಂದು ಕೇಂದ್ರ ಸಂಸ್ಥೆಗಳು ತಿಳಿಸಿವೆ. ರೋಗಿಯೊಬ್ಬರ ಸಹಾಯಕರಾಗಿ ಭಾರತಕ್ಕೆ ಬಂದಿರುವುದಾಗಿ ಅಪಘಾನ್ ಪ್ರಜೆ ತಿಳಿಸಿದ್ದು, ಆದರೆ ರೋಗಿಯ ಬಗೆಗಾಗಲಿ, ಎಲ್ಲಿರುವುದಾಗಲಿ ಮಾಹಿತಿಗಳು ಆತನ ಬಳಿ ಇಲ್ಲ. ಇದು ಘಟನೆಯ ಗಂಭೀರತೆಗೆ ಕಾರಣವಾಗಿದೆ.
ಅಪರಿಚಿತನನ್ನು ನೇಮಕ ಮಾಡಿದ ಗುತ್ತಿಗೆದಾರನನ್ನು ಕೇಂದ್ರ ಏಜೆನ್ಸಿಗಳು ಪ್ರಶ್ನಿಸಲಿವೆ. ಈದ್ ಗುಲ್ ವಿಮಾನ ವಾಹಿನಿಯಲ್ಲಿ ಕೆಲಸ ಮಾಡುವುದು ಗಂಭೀರ ಭದ್ರತಾ ಉಲ್ಲಂಘನೆಯಾಗಿದೆ ಎಂದು ತಿಳಿಯಲಾಗಿದೆ. ಆತನನ್ನು ಇಂದು ವಶಕ್ಕೆ ಪಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಗೂಢಚರ್ಯೆ ಸೇರಿದಂತೆ ಇತರ ವಿಷಯಗಳೂ ತನಿಖೆಗೊಳಗಾಗಲಿದೆ.
ವಿಮಾನ ವಾಹಿನಿಗೆ ಸಂಬಂಧಿಸಿ ಮುಂದುವರಿದ ಅಸಮರ್ಪಕ ಕಾರ್ಯಗಳ ಬಗ್ಗೆಯೂ ತನಿಖೆ ನಡೆಸಲಾಗುವುದು. 2019 ರಲ್ಲಿ ನಡೆದ ಕಳ್ಳತನ ಮತ್ತು ರಾಜನಾಥ್ ಸಿಂಗ್ ಭೇಟಿಯ ಸಮಯದಲ್ಲಿ ಭದ್ರತಾ ಉಲ್ಲಂಘನೆ ನಡೆದಿತ್ತು. ಈ ವಿಷಯಗಳಲ್ಲಿ ಅಫಘಾನ್ ಪ್ರಜೆಯೊಂದಿಗೆ ಸಂಬಂಧ ಹೊಂದಿರುವವರ ಪಾತ್ರವನ್ನೂ ಪರಿಶೀಲಿಸಲಾಗುವುದು.
ಗುತ್ತಿಗೆ ಕಾರ್ಮಿಕರ ಹಿನ್ನೆಲೆಯನ್ನು ತನಿಖೆ ಮಾಡುವ ನಿರ್ದೇಶನವನ್ನು ಅನುಸರಿಸಲು ವಿಫಲವಾದದ್ದೇ ಗಂಭೀರ ಭದ್ರತಾ ಉಲ್ಲಂಘನೆಗೆ ಕಾರಣವೆಂದು ಉಲ್ಲೇಖಿಸಲಾಗಿದೆ.