HEALTH TIPS

ಅವ್ಯವಸ್ಥೆಯಿಂದ ಕೂಡಿದ ಮಂಜೇಶ್ವರ ಅಬಕಾರಿ ಚೆಕ್ ಪೋಸ್ಟ್

               ಮಂಜೇಶ್ವರ: ಕೇರಳ-ಕರ್ನಾಟಕ ಗಡಿಪ್ರದೇಶವಾದ ಮಂಜೇಶ್ವರ ಅಬಕಾರಿ ಚೆಕ್ ಪೋಸ್ಟ್ ಅಭಿವೃದ್ದಿಯಿಲ್ಲದೆ  ಶೋಚನೀಯವಸ್ಥೆಯಿಂದ  ಇಲ್ಲಿನ ಉದ್ಯೋಗಸ್ಥರು ಸಂಕಷ್ಟಕ್ಕೀಡಾಗಿದ್ದಾರೆ. ಚೆಕ್ ಪೋಸ್ಟ್ ನಲ್ಲಿ ಅಧಿಕಾರಿಗಳಿಗೆ ತಪಾಸಣೆ ಮಾಡಲು ಸರಿಯಾದ ವ್ಯವಸ್ಥೆಯಿಲ್ಲ.


         ಅಬಕಾರಿ ಕಚೇರಿ  ಶೋಚನೀಯವಸ್ಥೆಯಲ್ಲಿರುವ ಕಂಟೈನರ್‍ನಲ್ಲಿ  ಕಾರ್ಯಾಚರಿಸುತ್ತಿದೆ.  ಈ ಕಂಟೈನರ್ ನ  ಮೇಲ್ಭಾಗದಲ್ಲಿ ಹಲವು ಮರಗಳು ಅಪಾಯದ ಸ್ಥಿತಿಯಲ್ಲಿದೆ. ಇಲ್ಲಿ ವಾಹನ ತಪಾಸಣೆಗೆ ಏಣಿ ಹಾಗೂ ಕಬ್ಬಿಣದ  ಸಲಾಖೆಗಳು ಮಾತ್ರವೇ ಇದ್ದು, ತಪಾಸಣೆಗೆ ವ್ಯವಸ್ಥಿತ ಉಪಕರಣಗಳಿಲ್ಲ. ಅಧಿಕಾರಿಗಳು  ವಾಹನ ತಪಾಸಣೆಗಾಗಿ ಕುಳಿತುಕೊಳ್ಳುವ ಎರಡು ಟರ್ಪಾಲಿನ ಶೆಡ್ಡ್ ಮಳೆಗೆ ಸೋರುತ್ತಿದೆ.  ಹಲವಾರು ವರ್ಷಗಳಿಂದ ಕಾರ್ಯಚರಿಸುತ್ತಿರುವ  ಈ ಅಬಕಾರಿ ಚೆಕ್ ಪೋಸ್ಟ್ ಯಾವುದೆ ಅಭಿವೃದ್ದಿಯಿಲ್ಲದೆ ಇರುವುದು ಅಧಿಕಾರಿಗಳ ಅನಾಸ್ಥೆ ಕಾರಣವೆಂದು ಸಾರ್ವಜನಿಕರು ಆರೋಪಿಸಿದ್ದಾರೆ.  

           ಕರ್ನಾಟಕ ಸಹಿತ ವಿವಿಧ ಭಾಗದಿಂದ  ಕೇರಳಕ್ಕೆ   ವ್ಯಾಪಕವಾಗಿ ಸಾಗಾಟ ನಡೆಸುತ್ತಿದ್ದ ಗಾಂಜಾ, ಮದ್ಯ, ಹೊಗೆಸೊಪ್ಪು ಉತ್ಪನ್ನಗಳ ಸಹಿತ ಭಾರೀ ಪ್ರಮಾಣದ ಮಾದಕ ವಸ್ತುಗಳನ್ನು ಈ ಚೆಕ್ ಪೋಸ್ಟ್ ನಲ್ಲಿ ಸೂಕ್ಷ್ಮ ತಪಾಸಣೆಯಲ್ಲಿ ಈ ಹಿಂದೆ ಅಧಿಕಾರಿಗಳು ವಶಪಡಿಸಿದ್ದಾರೆ.  ಆದರೆ ಇಲ್ಲಿಂದ ಸಾಗುವ ವಾಹನಗಳನ್ನು ತಡೆದು ನಿಲ್ಲಿಸಲು ಗೇಟ್ ಅಥವಾ ಪರಾರಿಯದಲ್ಲಿ ಅದನ್ನು ಬೆನ್ನಟ್ಟಲು ವ್ಯವಸ್ಥಿತ ರೀತಿಯ ವಾಹನಗಳಿಲ್ಲದೆ ಸಮಸ್ಯೆಗೀಡಾಗುತ್ತಿದ್ದಾರೆ.   ಈ ಚೆಕ್ ಪೋಸ್ಟ್ ನೆಲೆ ನಿಲ್ಲುವುದು ಅತ್ಯಗತ್ಯವಾಗಿದ್ದು, ಅಬಕಾರಿ ಕಚೇರಿಯನ್ನು  ಅಭಿವೃದ್ದಿಗೊಳಿಸಿ ಉನ್ನತ ಮಟ್ಟಕ್ಕೇರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries