ವಾಷಿಂಗ್ಟನ್: ಎಲ್ಲಾ ವಿಚಾರದಲ್ಲೂ ಅಮೆರಿಕಾ ಮೊದಲು, ಅಮೆರಿಕ ಜನರಿಗೆ ಮೊದಲ ಉದ್ಯೋಗ ಸಿಗಬೇಕು ಎಂದು ಪ್ರತಿಪಾದನೆ ಮಾಡಿಕೊಂಡು ಬಂದಿದ್ದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಪಕ್ಷ ಈಗ ಅಮೆರಿಕ ಉಳಿಸಿ ಎಂಬ ಹೊಸ ಅಭಿಯಾನ ಆರಂಭ ಮಾಡಿದೆ.
ಇದೇ ವೇಳೆ ಹೊಸ ಆಡಳಿತದ ಬಗ್ಗೆ ಸಭೆಯಲ್ಲಿ ಬಹಳ ಅಸಮಾಧಾನ ಜನಾಕ್ರೋಶ ವ್ಯಕ್ತವಾಗಿದೆ. ಗಂಭೀರ ಆರೋಪಗಳು ಸುರಿಮಳೆಯನ್ನೇ ಮಾಡಲಾಗಿದೆ.ಹೊಸದಾಗಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಜೋ ಬೈಡನ್ ಆಡಳಿತ ಅಮೆರಿಕ ಜನರ ನಂಬಿಕೆಯನ್ನು ಹುಸಿಗೊಳಿಸಿದೆ, ಆಡಳಿತ ಯಂತ್ರ ಹಳಿತಪ್ಪಿದೆ. ಕಾನೂನು ಸುವ್ಯವಸ್ಥೆ ಹಾಳಾಗಿದೆ. ಅಮೆರಿಕ ಹಲವು ನಗರಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿದೆ ಗುಂಡಿನ ಚಕಮಕಿಯ ಘಟನೆಗಳು ನಿರಾತಂಕವಾಗಿ ಸಾಗಿದೆ ಎಂದು ದೂರಲಾಗಿದೆ.
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಎರಡನೇ "ಸೇವ್ ಅಮೇರಿಕಾ" ಪ್ರಚಾರ ಶೈಲಿಯ ಸಭೆಯನ್ನು ಫ್ಲೋರಿಡಾದ ಸರಸೋಟದಲ್ಲಿ ನಡೆಸಿ, ಹೊಸ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.