ಮಂಜೇಶ್ವರ : ಕಾಸರಗೋಡು ಜಿಲ್ಲೆಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ, ಜನರ ಮನಗೆದ್ದ ಜನಪ್ರಿಯ ಜಿಲ್ಲಾಧಿಕಾರಿ ಡಾ. ಸಜಿತ್ ಬಾಬು ಅವರಿಗೆ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ವತಿಯಿಂದ ಹೃದಯಂಗಮ ಬೀಳ್ಕೊಡುಗೆ ನೀಡಿ ಗೌರವಿಸಲಾಯಿತು.
ಬೇಕಲದ ಲಲಿತ್ ಇಂಟರ್ನೇಷನಲ್ ಹೋಟೆಲಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸಿದರು.
ಉದುಮ ಶಾಸಕ ಸಿ. ಎಚ್ ಕುಂಞಂಬು, ತ್ರಿಕರಿಪುರ ಶಾಸಕ ಎಂ. ರಾಜಗೋಪಾಲನ್ ಉಪಸ್ಥಿತರಿದ್ದರು.
ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಕೆ. ಆರ್. ಜಯಾನಂದ ಶಾಲು, ಸ್ಮರಣಿಕೆಗಳನ್ನು ನೀಡಿದರು. ಬೀಳ್ಕೊಡುಗೆಗೆ ಕೃತಜ್ಞತೆ ಸಲ್ಲಿಸಿದ ಜಿಲ್ಲಾಧಿಕಾರಿಯವರು ಭಾಷಿಕ, ಸಾಂಸ್ಕøತಿಕ ವೈವಿಧ್ಯದ ಕಾಸರಗೋಡನ್ನು ತೊರೆಯಲು ಮನಸ್ಸಿಗೆ ಭಾರವಾಗುತ್ತಿದೆ. ಆದರೆ ಉದ್ಯೋಗದಲ್ಲಿ ಇದು ಸಹಜ. ಆದರೆ ಕಾಸರಗೋಡನ್ನು ನಾನು ಮರೆಯಲಾರೆ. ನನಗೆ ಕಾಸರಗೋಡು ವಿಶೇಷಾನುಭವ ನೀಡಿದೆ ಎಂದು ಕೃತಜ್ಞತೆ ಸಲ್ಲಿಸಿದರು.