ಕಾಸರಗೋಡು: ಖಜಾನೆ(ಟ್ರಷರಿ) ಯಲ್ಲಿ ಕೋವಿಡ್ ಕಟ್ಟುನಿಟ್ಟು ಪಾಲಿಸಿ ವ್ಯವಹಾರ ನಡೆಸುವ ನಿಟ್ಟಿನಲ್ಲಿ ಪಿಂಚಣಿದಾರರಿಗೆ ಮತ್ತು ಗ್ರಾಹಕರಿಗೆ ಜುಲೈ ತಿಂಗಳಿಂದ ಪ್ರತ್ಯೇಕ ಸಜ್ಜೀಕರಣ ನಡೆಸಲಾಗಿದೆ.
ಟ್ರಷರಿಯ ಕೌಂಟರ್ ಗಳಿಂದ ನೇರವಾಗಿ ಪಡೆಯುವ ಪಿಂಚಣಿ ವಿತರಣೆ ಸೋಮವಾರದಿಂದ ಶುಕ್ರವಾರ ವರೆಗೆ ನಿಗದಿತ ನಂಬ್ರಗಳ ಮೂಲಕ ಕೊನೆಗೊಳ್ಳುವ ಪಿ.ಟಿ.ಎಸ್.ಬಿ. ಅಕೌಂಟ್ ದಾತರಿಗೆ ಮಾತ್ರ ಇರುವುದು. ಕಟ್ಟುನಿಟ್ಟು ಪಾಲಿಸಿ ಆ ದಿನಗಳಲ್ಲಿ ಪಿಂಚಣಿ ಪಡೆಯಬೇಕು. ಕಟ್ಟುನಿಟ್ಟು ಪಾಲಿಸದೇ ಇರುವ ಮಂದಿಗೆ ಆ ದಿನಗಳಲ್ಲಿ ಪಿಂಚಣಿ ವಿತರಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಪಿಂಚಣಿ ಅಕೌಂಟ್ ನಂಬ್ರ ಸಜ್ಜೀಕರಣ ಈ ರೀತಿ :
ಸೋಮವಾರ-ಬೆಳಗ್ಗೆ ಪಿ.ಟಿ.ಎಸ್.ಬಿ.ಖಾತೆ ನಂಬ್ರ ಸೊನ್ನೆಯಲ್ಲಿ ಕೊನೆಗೊಳ್ಳುವ ಪಿಂಚಣಿದಾರರು, ಮಧ್ಯಾಹ್ನ ನಂತರ ಪಿ.ಟಿ.ಎಸ್.ಬಿ. ಖಾತೆ ನಂಬ್ರ 1 ರಲ್ಲಿ ಕೊನೆಗೊಳ್ಳುವ ಪಿಂಚಣಿದಾರರಿಗೆ ಸಜ್ಜೀಕರಣ ಇರುವುದು.
ಮಂಗಳವಾರ- ಬೆಳಗ್ಗೆ ಖಾತೆ ನಂಬ್ರ 2ರಲ್ಲಿ ಕೊನೆಗೊಳ್ಳುವ, ಮಧ್ಯಾಹ್ನ ನಂತರ 3 ರಲ್ಲಿ ಕೊನೆಗೊಳ್ಳುವ ಪಿಂಚಣಿದಾರರಿಗೆ.
ಬುಧವಾರ- ಬೆಳಗ್ಗೆ ಖಾತೆ ನಂಬ್ರ 4ರಲ್ಲಿ ಕೊನೆಗೊಳ್ಳುವ, ಮಧ್ಯಾಹ್ನ ನಂತರ ಖಾತೆ ನಂಬ್ರ 5ರಲ್ಲಿ ಕೊನೆಗೊಳ್ಳುವ ಪಿಂಚಣಿದಾರರಿಗೆ.
ಗುರುವಾರ- ಬೆಳಗ್ಗೆ ಖಾತೆ ನಂಬ್ರ 6ರಲ್ಲಿ ಕೊನೆಗೊಳ್ಳುವ, ಮಧ್ಯಾಹ್ನ ನಂತರ ಖಾತೆ ನಂಬ್ರ 7ರಲ್ಲಿ ಕೊನೆಗೊಳ್ಳುವ ಪಿಂಚಣಿದಾರರಿಗೆ.
ಶುಕ್ರವಾರ- ಬೆಳಗ್ಗೆ ಖಾತೆ ನಂಬ್ರ 8ರಲ್ಲಿ ಕೊನೆಗೊಳ್ಳುವ, ಮಧ್ಯಾಹ್ನ ನಂತರ ಖಾತೆ ನಂಬ್ರ 9ರಲ್ಲಿ ಕೊನೆಗೊಳ್ಳುವ ಪಿಂಚಣಿದಾರರಿಗೆ.
ಪಿಂಚಣಿ ನೇರವಾಗಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಮಂದಿ ತಮ್ಮ ಪತಿ/ಪತ್ನಿಯ ಚೆಕ್ ಸಹ ಸಲಲಿಸಿದರೆ ಅವರ ಪಿಂಚಣಿಯನ್ನೂ ಜೊತೆಗೆ ವಿತರಿಸಲಾಗುವುದು. ಟಿ.ಎಸ್.ಬಿ, ಇ.ಟಿ.ಎಸ್.ಬಿ. ಇತ್ಯಾದಿ ವ್ಯಕ್ತಿಗತ ಖಾತೆಗಳ ವಿಚಾರದಲ್ಲಿ, ಏಕ ಅಂಕದಲ್ಲಿ ಖಾತೆ ನಂಬ್ರ ಕೊನೆಗೊಳ್ಳುವ ಮಂದಿಗೆ ಏಕ ಅಂಕ ದಿನಾಂಕದಲ್ಲೂ, ದ್ವಿ ಅಂಕದಲ್ಲಿ ಖಾತೆ ನಂಬ್ರ ಕೊನೆಗೊಳ್ಳುವ ಮಂದಿಗೆ ದ್ವಿ ಅಂಕ ದಿನಾಂಕದಲ್ಲೂ ಟ್ರಷರಿ ಸೇವೆಗಳು ಲಭ್ಯವಿರುವುದು. ವ್ಯಕ್ತಿಗತ ಟಿ.ಎಸ್.ಬಿಯ ಠೇವಣಿ ಬಡ್ಡಿ ಹಿಂಪಡೆಯುವ ಕ್ರಮ ಹೊರತಾಗಿ ಸೇವೆಗಳು ಎಲ್ಲ ಚಟುವಟಿಕೆ ದಿನಗಳಲ್ಲೂ ಟ್ರಷರಿಯಲ್ಲಿ ಲಭ್ಯವಿರುವುದು.
ಆನ್ ಲೈನ್ ಟಿ.ಎಸ್.ಬಿ. ಬ್ಯಾಂಕ್ ಸೌಲಭ್ಯ
ಎಲ್ಲ ಪಿಂಚಣಿದಾರರಿಗೂ ಎಂಬ ವೆಬ್ ಸರ್ವೀಸ್ ಮೂಲಕ ಎಂಬ ಆಂಡ್ರಾಯ್ಡ್ ಸಪ್ಲಿಕೇಷನ್ ಮೂಲಕ ಪಿಂಚಣಿ ಸಂಬಂಧ ಮೂಲಭೂತ ಸೌಲಭ್ಯಗಳು ಲಭ್ಯವಿವೆ. ಟ್ರಷರಿಗಳಲ್ಲಿ ನೇರವಾಗಿ ತಲಪದೆಯೇ ಖಾತೆಗಳಿಗೆ, ಪಿ.ಟಿ.ಎಸ್.ಬಿಟಿ., ಟಿ.ಎಸ್.ಬಿ.ಟಿ.ಎಸ್.ಬಿ. ಖಾತೆಗಳಿಂದ ಬ್ಯಾಂಕ್ ಖಾತೆಗಳಿಗೆ ಮೊಬಲಗು ವರ್ಗಾಯಿಸುವ ಆನ್ ಲೈನ್ ಟಿ.ಎಸ್.ಬಿ. ಬ್ಯಾಂಕ್ ಸೌಲಭ್ಯ ಏರ್ಪಡಿಸಲಾಗಿದೆ. ಜೊತೆಗೆ ಎಲ್ಲ ಟ್ರಷರಿಗಳಲ್ಲೂ ಇ-ಮೇಲ್ ಮುಖಾಂತರ ಪಿಂಚಣಿ ಸಂಬಂಧ ದೂರುಗಳು, ತತ್ಸಂಬಂಧಿ ದಾಖಲೆ ಪತ್ರಗಳನ್ನು ಸಲ್ಲಿಸಿ, ಅವುಗಳಿಗೆ ಸಂಬಂಧಿಸಿದ ಪರಿಹಾರದ ಉತ್ತರ ಲಭಿಸಲಿದೆ. ಎಲ್ಲ ಟ್ರಷರಿಗಳ ಅಧಿಕೃತ ಇ-ಮೇಲ್ ಐಡಿ, ಫೆÇೀನ್ ನಂಬ್ರ ಇಲಾಖೆಯ ವೆಬ್ಸೈಟ್ ನಲ್ಲಿ ಪ್ರಕಟವಿದೆ.
ಪಿಂಚಣಿ ಪರಿಷ್ಕಾರ ಸಂಬಂಧ ಡಿಕ್ಲರೇಷನ್ ಸಲ್ಲಿಕೆಯ ಕೊನೆಯ ದಿನಾಂಕ ವಿಸ್ತರಣೆ ಸಂಬಂಧ ಸರಕಾರಕ್ಕೆ ಸಲ್ಲಿಸಿರುವ ಶೀಫಾರಸಿನ ಮೇರೆಗೆ ಉತ್ತರ ಲಭ್ಯ ವಾಗುವ ವರೆಗೆ ಪಿಂಚಣಿದಾರರು ಈ ಸಂಬಂಧ ಟ್ರಷರಿಗೆ ನೇರವಾಗಿ ಹಾಜರಾಗಬೇಕಿಲ್ಲ. ಆದರೆ ಆನ್ ಲೈನ್ ಸೌಲಭ್ಯ ಬಳಸಿ, ಟಪ್ಪಾಲು ಮುಖಾಂತರ ಡಿಕ್ಲರೇಷನ್ ಸಲ್ಲಿಕೆ ಮುಂದುವರಿಸಬಹುದು ಎಂದು ಟ್ರಷರಿ ನಿರ್ದೇಶಕ ತಿಳಿಸಿದರು.