ಕೊಚ್ಚಿ: ಕೇರಳದ ಆಲಪ್ಪುಳ ಜಿಲ್ಲೆಯಲ್ಲಿ ಅಧಿಕಾರಿಗಳನ್ನು ಗೊಂದಲಕ್ಕೀಡು ಮಾಡಿದ ಪ್ರಕರಣವೊಂದರಲ್ಲಿ ಮಹಿಳೆಯೊಬ್ಬರು ಎರಡು ವರ್ಷಗಳ ಕಾಲ ಎಲ್‌ಎಲ್ ಬಿ ಪದವಿ ಇಲ್ಲದೆ ಹಾಗೂ ರಾಜ್ಯ ಬಾರ್ ಕೌನ್ಸಿಲ್ ಗೆ ದಾಖಲಾಗದೆ ವಕೀಲರಾಗಿ ಸಂಪೂರ್ಣ ಕಾನೂನು ವ್ಯವಸ್ಥೆಯನ್ನು ವಂಚಿಸಿದ್ದಾರೆ.
ಸೆಸ್ಸಿ ಕ್ಸೇವಿಯರ್ ಹಲವಾರು ವಿಷಯಗಳಲ್ಲಿ ವಕೀಲರಾಗಿ ಕಾಣಿಸಿಕೊಂಡಿದ್ದಾಳೆ. ಈ ವರ್ಷ ಆಕೆ ಬಾರ್ ಅಸೋಸಿಯೇಶನ್ ಚುನಾವಣೆಯಲ್ಲೂ ಸ್ಪರ್ಧಿಸಿದ್ದಳು ಹಾಗೂ ಗ್ರಂಥಪಾಲಕಿಯಾಗಿ ಆಯ್ಕೆಯಾಗಿದ್ದಳು. ವರದಿಗಳ ಪ್ರಕಾರ, ಆಕೆ ರಾಜ್ಯದಿಂದ ನೇಮಿಸಲ್ಪಟ್ಟ ವಕೀಲ ಆಯುಕ್ತರಾಗಿ ಕೆಲವು ವಿಷಯಗಳಲ್ಲಿ ಕೆಲಸ ಮಾಡಿದ್ದಳು.
ಘಟನೆಯನ್ನು ವರದಿ ಮಾಡಿದ ಲೈವ್ ಲಾ ಪ್ರಕಾರ, ಮಹಿಳೆ ಅಲಪ್ಪುಳದಲ್ಲಿರುವ ಪ್ರಸಿದ್ಧ ವಕೀಲರ ಕಚೇರಿಯಲ್ಲಿ ಕಿರಿಯ ವಕೀಲರಾಗಿ ಕೆಲಸ ಮಾಡುವ ಮೂಲಕ ಬಾರ್ ಅಸೋಸಿಯೇಶನ್ ಅನ್ನು ಮೋಸಗೊಳಿಸಲು ಯಶಸ್ವಿಯಾಗಿದ್ದಾಳೆ. ಅದಕ್ಕೂ ಮೊದಲು, ಆಕೆ ಅಂತಿಮ ವರ್ಷದ ಎಲ್‌ಎಲ್ ಬಿ ವಿದ್ಯಾರ್ಥಿನಿ ಎಂದು ಹೇಳಿಕೊಂಡು ಅದೇ ವಕೀಲರೊಂದಿಗೆ ಇಂಟರ್ನ್ ಶಿಪ್ ಮಾಡಿದ್ದಳು. ನಂತರ ಆಕೆ ಬಾರ್ ಕೌನ್ಸಿಲ್ ದಾಖಲಾಗಿದ್ದಾಗಿ ಹೇಳಿಕೊಂಡಿದ್ದಳು. 2019ರಲ್ಲಿ ಆಲಪ್ಪುಳ ಬಾರ್ ಅಸೋಸಿಯೇಶನ್ ಗೆ ಸದಸ್ಯೆಯಾಗಲು ಅರ್ಜಿ ಸಲ್ಲಿಸಿದ್ದಳು.
ಕಳೆದ 2.5 ವರ್ಷಗಳಿಂದ ಸೆಸ್ಸಿ 10 ಕ್ಕೂ ಹೆಚ್ಚು ನ್ಯಾಯಾಲಯಗಳನ್ನು ಹೊಂದಿರುವ ಆಲಪ್ಪುಳ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡಿದ್ದಾಳೆ ಎಂದು ಆಲಪ್ಪುಳ ಬಾರ್ ಅಸೋಸಿಯೇಶನ್ ಮೂಲವೊಂದು ತಿಳಿಸಿದೆ.
"ಆಕೆ ಅಲಪ್ಪುಳದಲ್ಲಿ ಪ್ರತಿಷ್ಠಿತ ವಕೀಲರಾದ ಅಡ್ವಕೇಟ್ ಬಿ. ಶಿವದಾಸ್ ಅವರಿಂದ ಇಂಟರ್ನ್ ಶಿಪ್ ಪಡೆದಿದ್ದರಿಂದ ನೋಟಿಸ್ ನಿಂದ ತಪ್ಪಿಸಿಕೊಳ್ಳಲು ಆಕೆಗೆ ಸಾಧ್ಯವಾಯಿತು ಹಾಗೂ ನಂತರ ತನ್ನದೇ ಆದ ಪ್ರಾಕ್ಟೀಸ್ ಅನ್ನು ಪ್ರಾರಂಭಿಸಿದ್ದಳು. ಬಾರ್ ಗೆ ದಾಖಲಾಗದೆ, ಆಕೆ ಆಲಪ್ಪುಳ ಬಾರ್ ಅಸೋಸಿಯೇಶನ್ ನ ಸದಸ್ಯೆಯಾಗಿದ್ದಳು ನಂತರ ಆಕೆ ಸಂಘದ ಕಾರ್ಯನಿರ್ವಾಹಕ ಸ್ಥಾನಕ್ಕೆ ಸ್ಪರ್ಧಿಸಿದ್ದಳು ಹಾಗೂ 2021 ರಲ್ಲಿ ಗ್ರಂಥಪಾಲಕಿಯಾದಳು ಎಂದು ತಿಳಿದುಬಂದಿದೆ.