HEALTH TIPS

ಮೇಕಪ್ ಇಲ್ಲದೇ ಸುಂದರವಾಗಿ ಕಾಣಲು ಇಲ್ಲಿವೆ ಬ್ಯೂಟಿ ಟಿಪ್ಸ್ ಗಳು

                ಸುಂದರವಾಗಿ ಕಾಣಬೇಕೆಂಬುದು ಪ್ರತಿಯೊಬ್ಬರ ಆಸೆ. ಅದಕ್ಕೆ ಹೆಚ್ಚಿನ ಹೆಣ್ಣು ಮಕ್ಕಳು ಆಯ್ಕೆ ಮಾಡುವ ಮಾರ್ಗ ಮೇಕಪ್. ಕೆಲವರಂತೂ ಮೇಕಪ್ ಇಲ್ಲದೇ ಹೊರಗೆ ಕಾಲೇ ಇಡುವುದಿಲ್ಲ. ತಮ್ಮ ಮುಖದಲ್ಲಿರುವ ಮೊಡವೆ, ಕಲೆಗಳನ್ನೆಲ್ಲಾ ಮೇಕಪ್ ನಿಂದ ಮರೆಮಾಡಿ, ಸುಂದರವಾಗಿ ಕಾಣುತ್ತಾರೆ. ಇವರ ನಡುವೆ ಕೆಲವರು ಮೇಕಪ್ ನ್ನು ಇಷ್ಟ ಪಡದವರು ಇದ್ದಾರೆ.

              ತ್ವಚೆಯ ಆರೋಗ್ಯದ ದೃಷ್ಟಿಯಿಂದ ಅತಿಯಾದ ಮೇಕಪ್ ಒಳ್ಳೆಯದಲ್ಲ. ಎರಡು ಮೂರು ಲೇಯರ್ ಬಳಸಿ ಮೇಕಪ್ ಮಾಡಿಕೊಳ್ಳುವುದರಿಂದ ಚರ್ಮಕ್ಕೆ ಉಸಿರಾಡಲು ಆಗುವುದಿಲ್ಲ. ಆದ್ದರಿಂದ ಇಲ್ಲಿ ನಾವು ಮೇಕಪ್ ಇಲ್ಲದೇ ಸುಂದರವಾಗಿ ಹೇಗೆ ಕಾಣುವುದು ಎಂಬುದನ್ನು ವಿವರಿಸಿದ್ದೇವೆ.
                    ಮೇಕಪ್ ಇಲ್ಲದೇ ಸುಂದರವಾಗಿ ಕಾಣಲು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:

 ಸನ್‌ಸ್ಕ್ರೀನ್ ಅತ್ಯಗತ್ಯ: ಮೇಕಪ್ ಇರಲಿ ಅಥವಾ ಇಲ್ಲದಿರಲಿ, ಸನ್ ಸ್ಕ್ರೀನ್ ಅತ್ಯಗತ್ಯ. ಇದು ನಿಮ್ಮ ಚರ್ಮ ರಕ್ಷಣೆಗೆ ಪ್ರಮುಖವಾದುದಾಗಿದ್ದು, ಸೂರ್ಯನ ಹಾಣಿಕಾರಕ ಕಿರಣಗಳಿಂದ ನಿಮಗೆ ರಕ್ಷಣೆ ನೀಡುವುದು. ಮನೆಯಿಂದ ಹೊರಬರುವ 15 ನಿಮಿಷಗಳ ಮೊದಲು ಯಾವಾಗಲೂ ಸನ್‌ಸ್ಕ್ರೀನ್ ಅನ್ನು ಹಚ್ಚಿಕೊಳ್ಳಿ.


ಬಣ್ಣದ ಮಾಯಿಶ್ಚರೈಸರ್ ಪ್ರಯತ್ನಿಸಿ: ನಿಮ್ಮ ಮುಖವು ತುಂಬಾ ಡಲ್ ಆಗಿ ಕಾಣುತ್ತದೆ ಎಂದು ನಿಮಗೆ ಅನಿಸಿದರೆ, ಫೌಂಡೇಷನ್ ಬಳಸುವ ಬದಲು ಸಣ್ಣ ಹೊಳಪಿಗಾಗಿ ಬಣ್ಣದ ಮಾಯಿಶ್ಚರೈಸರ್ ಅನ್ನು ಹಚ್ಚಿಕೊಳ್ಳಿ. ಮಾಯಿಶ್ಚರೈಸರ್ ಗಳು ಸಾಮಾನ್ಯವಾಗಿ ಜೆಲ್ ಆಧಾರಿತವಾಗಿದ್ದು, ಮುಖಕ್ಕೆ ಹಚ್ಚಿದಾಗ ಮರೆಯಾಗುತ್ತವೆ. ಆದರೆ ಈ ಬಣ್ಣವಿರುವ ಮಾಯಿಶ್ಚರೈಸರ್ ಗಳು ನಿಮ್ಮ ತ್ವಚೆಯನ್ನು ಮಾಯಿಶ್ವರೈಸಿಂಗ್ ಮಾಡುವುದಲ್ಲೇ, ಹೊಳೆಯುವಂತೆ ಮಾಡುತ್ತವೆ.
 ನಿಂಬೆ ಹಿಂಡಿದ ಬಿಸಿನೀರು: ಬೆಳಿಗ್ಗೆ ಎದ್ದ ಕೂಡಲೇ ತಾಜಾ ನಿಂಬೆ ರಸ ಹಿಂಡಿದ ಬಿಸಿ ನೀರು ಕುಡಿಯಿರಿ. ಈ ದೈನಂದಿನ ಆಚರಣೆ ಕಲ್ಮಶಗಳನ್ನು ಹೊರಹಾಕಿ, ನಿಮ್ಮ ದೇಹವನ್ನು ಶುದ್ಧಗೊಳಿಸುತ್ತದೆ ಜೊತೆಗೆ ನಿಮಗೆ ಹೊಳೆಯುವ ತ್ವಚೆಯನ್ನು ನೀಡುತ್ತದೆ. ಹಾಗಂತ ಅತಿಯಾಗಿ ಕುಡಿಯಬೇಡಿ, ಮೂಳೆಗಳಿಗೆ ಹಾನಿಯಾಗಬಹುದು.
  ಎಫ್ಫೋಲಿಯೇಟ್ ಮಾಡಲು ಮರೆಯಬೇಡಿ: ಕೆಲವೊಮ್ಮೆ ನಮ್ಮ ತ್ವಚೆಗೆ ಹೆಚ್ಚುವರಿ ಆರೈಕೆ ಅಗತ್ಯವಿರುತ್ತದೆ. ಅದಕ್ಕಾಗಿಯೇ ಉತ್ತಮ ಸ್ಕ್ರಬ್ ಬಳಸಿ ನಿಮ್ಮ ಮುಖವನ್ನು ಎಫ್ಫೋಲಿಯೇಟ್ ಮಾಡಬೇಕು. ಎಫ್ಫೋಲಿಯೇಶನ್ ಡೆಡ್ ಸೆಲ್ ಗಳನ್ನು ತೆಗೆಯಲು ಸಹಾಯ ಮಾಡುವುದು. ಈ ಡೆಡ್ ಸೆಲ್ ಗಳು ಹಾಗೂ ಮುಚ್ಚಿರುವ ರಂಧ್ರಗಳಿಂದಲೇ ತ್ವಚೆ ಡಲ್ ಆಗಿ ಕಾಣುವುದು. ಆದ್ದರಿಂದ ನಿಮ್ಮ ತ್ವಚೆಗೆ ಸರಿಹೊಂದುವಂತ ಸ್ಕ್ರಬ್ ಬಳಸಿ, ವಾರಕ್ಕೆ 2-3 ಬಾರಿ ಎಫ್ಫೋಲಿಯೇಟ್ ಮಾಡಬಹುದು.

                 ಟೋನರ್ ಬಳಸಿ: ನಾವು ಮುಖ ತೊಳೆದ ಮೇಲೆ ಟೋನರ್ ಹಂತವನ್ನು ಸಾಮಾನ್ಯವಾಗಿ ಬಿಟ್ಟುಬಿಡುತ್ತೇವೆ. ಆದರೆ ಇದು ಕೂಡ ಆರೋಗ್ಯಕರ ಚರ್ಮಕ್ಕೆ ಅಗತ್ಯವಾದ ಹೆಜ್ಜೆಯಾಗಿದೆ. ಚರ್ಮ ಶುದ್ಧಗೊಳಿಸಿದ ನಂತರ ಟೋನರ್ ಬಳಸುವುದರಿಂದ ಚರ್ಮದ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇದರಿಂದ ತ್ವಚೆಗೆ ಫ್ರೆಶ್ ಭಾವನೆ ಸಿಗುವುದು.
  ಸಾಕಷ್ಟು ನೀರು ಕುಡಿಯಿರಿ: ಆರೋಗ್ಯಕರ ಮತ್ತು ಹೊಳೆಯುವ ತ್ವಚೆಗಾಗಿ ಹೈಡ್ರೀಕರಿಸಿದಂತೆ ಇರುವುದು ತುಂಬಾ ಮುಖ್ಯ. ದಿನವಿಡೀ ಸಾಕಷ್ಟು ನೀರು ಕುಡಿಯಿರಿ. ಸಾಕಷ್ಟು ನೀರು ಕುಡಿಯುವುದು ನಿಮ್ಮೆಲ್ಲಾ ತ್ವಚೆಯ ಸಮಸ್ಯೆಗಳಿಗೆ ಪರಿಹಾರ ನೀಡುವುದಲ್ಲದೇ, ಆರೋಗ್ಯವನ್ನು ಚೆನ್ನಾಗಿರಿಸುವುದು.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries