ತಿರುವನಂತಪುರ: ಕೊಡಕರ ದರೋಡೆ ಪ್ರಕರಣದ ಹಿಂದಿರುವ ಪಿತೂರಿ ವಿಧಾನಸಭೆಯಲ್ಲಿ ಮುಖ್ಯಮಂತ್ರಿಯವರ ಭಾಷಣದಿಂದ ಸ್ಪಷ್ಟವಾಗಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಹೇಳಿದ್ದಾರೆ. ಕೊಡಕರದಲ್ಲಿ ಲೂಟಿ ಮಾಡಿದ ಹಣ ಬಿಜೆಪಿಗೆ ಸೇರಿದೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸದನವನ್ನು ದಾರಿತಪ್ಪಿಸಿದ್ದಾರೆ. ಚಿನ್ನ ಮತ್ತು ಡಾಲರ್ ಕಳ್ಳಸಾಗಣೆಯಲ್ಲಿ ಸರ್ಕಾರದ ಶಾಮೀಲಿಗೆ ಮರ್ಯಾದಿ ಉಳಿಸಲು ಮುಖ್ಯಮಂತ್ರಿ ರಾಜಕೀಯ ಸೇಡಿನ ಮೂಲಕ ಪ್ರಯತ್ನಿಸುತ್ತಿದ್ದಾರೆ ಎಂದು ಸುರೇಂದ್ರನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದರೋಡೆ ಪ್ರಕರಣದ ಆರೋಪಿ ದೀಪಕ್ ಬಿಜೆಪಿ ಕಾರ್ಯಕರ್ತ ಎಂದು ಮುಖ್ಯಮಂತ್ರಿ ಹೇಳಿದ್ದು ಶುದ್ದ ಸುಳ್ಳು. ಬಂಧಿತ ಎಲ್ಲಾ 21 ಆರೋಪಿಗಳು ಸಿಪಿಎಂನೊಂದಿಗೆ ನಿಕಟ ಸಂಬಂಧ ಉಳ್ಳವರು. ರಾಮನಾಟ್ಟುಕ್ಕರ ಚಿನ್ನ ಕಳ್ಳಸಾಗಣೆಯಲ್ಲಿ ಭಾಗಿಯಾಗಿರುವ ಕಣ್ಣೂರು ಗ್ಯಾಂಗ್ ಕೂಡ ಕೊಡಕರದಲ್ಲಿ ಹಣವನ್ನು ಕದ್ದಿದೆ. ಅವರು ಸಿಪಿಎಂನ ಉನ್ನತ ನಾಯಕರಿಗೆ ಸೇರಿದವರು.
ತನಿಖಾ ತಂಡ ನ್ಯಾಯಾಲಯದಲ್ಲಿ ಸಲ್ಲಿಸಿದ ಚಾರ್ಜ್‍ಶೀಟ್‍ಗೆ ಬಿಜೆಪಿಗೆ ಯಾವುದೇ ಸಂಬಂಧವಿಲ್ಲ. ಇಷ್ಟು ದಿನ ಬಿಜೆಪಿಯನ್ನು ಬೇಟೆಯಾಡಿದ ಪಿಣರಾಯಿ ವಿಜಯನ್ ವಿಧಾನಸಭೆಯಲ್ಲಿ ಕ್ಷಮೆಯಾಚಿಸಬೇಕಾಗಿತ್ತು ಎಂದು ಸುರೇಂದ್ರನ್ ಹೇಳಿದ್ದಾರೆ.