ಕಾಸರಗೋಡು: ಸಿಬಿಎಸ್‍ಇ ಪ್ಲಸ್‍ಟು ಪರೀಕ್ಷೆಯಲ್ಲಿ ಕಾಸರಗೋಡು ಚಿನ್ಮಯ ವಿದ್ಯಾಲಯ ಶೇ. ನೂರು ಫಲಿತಾಂಶ ದಆಖಲಿಸಿಕೊಂಡಿದೆ. ಪರೀಕ್ಷೆಗೆ ಹಾಜರಾದ ಒಟ್ಟು 19ವಿದ್ಯಾರ್ಥಿಗಳಲ್ಲಿ 13ಮಂದಿ ವಿಶಿಷ್ಟ ಶ್ರೇಣಿ(ಡಿಸ್ಟಿಂಕ್ಷನ್) ಹಾಗೂ ಆರು ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರಲ್ಲಿ ಶೇ. 97ಅಂಕ ಪಡೆದು ಸಾಹಿಲ್ ಫರ್ದೀನ್ ಪ್ರಥಮ, ನೇಹಾ ಎಸ್. ಅಜಿತ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.