ಕಾಸರಗೋಡು: ಕೋವಿಡ್ ಹಿನ್ನೆಲೆಯಲ್ಲಿ ಉದ್ಯೋಗ ನೋಂದಣಿ ನವೀಕರಣದ ಮತ್ತು ಅರ್ಹತಾಪತ್ರ ಪರಿಶೀಲನೆ ನಡೆಸುವ ಕಾಲಾವಧಿ ವಿಸ್ತರಿಸಲಾಗಿದ್ದು, 2020 ಜ.1ರಿಂದ 2021 ಮೇ 31ವರೆಗೆ ನೋಂದಣಿ ನವೀಕರಣ ನಡೆಸಬೇಕಾದ ಉದ್ಯೋಗಾರ್ಥಿಗಳು ಆಗಸ್ಟ್ 31ರ ವರೆಗೆ ನೋಂದಾವಣೆ ನಡೆಸಬಹುದಾಗಿದೆ ಎಂದು ಹೊಸದುರ್ಗ ಕೇಂದ್ರ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.
2013ಮಾರ್ಚ್ ಯಾ ತದನಂತರ ನೋಂದಣಿ ನಡೆಸಬೇಕಿದ್ದಪರಿಶಿಷ್ಟಜಾತಿ-ಪಂಗಡ ಉದ್ಯೋಗಾರ್ಥಿಗಳು ಆ.31 ವರೆಗೆ ನೋಂದಣಿನಡೆಸಲು ಅವಕಾಶಗಳಿವೆ. ಪರಿಶಿಷ್ಟ ಜಾತಿ-ಪಂಗಡ ವಿದ್ಯಾರ್ಥಿಗಳು ನವೀಕರಣ ಸಂಬಂಧ ಪ್ರಸಕ್ತ ಜಾರಿಯಲ್ಲಿರುವ ಇತರ ಆದೇಶಗಳಲ್ಲಿ ಬದಲಾವಣೆಗಳಿರುವುದಿಲ್ಲ. eemಠಿಟoಥಿmeಟಿಣ.ಞeಡಿಚಿಟಚಿ.gov.iಟಿ ಮೂಲಕ 2019 ಡಿ.20 ರಿಂದ ಆನ್ ಲೈನ್ ರೂಪದ ನೋಂದಾವಣೆ ಸರ್ಟಿಫಿಕೆಟ್ ಸೇರ್ಪಡೆ ನಡೆಸಿರುವ ಉದ್ಯೋಗಾರ್ಥಿಗಳು ಆ.31ವರೆಗೆಉದ್ಯೋಗ ವಿನಿಮಯ ಕೇಂದ್ರ ಮೂಲಕ ಅಲ್ಲದೆ ತಾತ್ಕಾಲಿಕ ನೇಮಕಾತಿ ಲಭಿಸಿರುವ 2019 ಡಿ.20 ರಿಂದ ಡಿಸ್ ಚಾರ್ಜ್ ಸರ್ಟಿಫಿಕೆಟ್ ಹಾಜರುಪಡಿಸುವಿಕೆ ಸಾಧ್ಯವಾಗದೇ ಇರುವ ಉದ್ಯೋಗಾರ್ಥಿಗಳಿಗೆ ಆ.31 ವರೆಗೆ ಅವಧಿಯನ್ನು ವಿಸ್ತರಿಸಿರುವುದಾಗಿ ಪ್ರಕಟಣೆ ತಿಳಿಸಿದೆ.