ಕಾಸರಗೋಡು: ಜಿಲ್ಲೆಯ ಹದಿನೇಳು ಮಂದಿ ಮೀನುಗಾರರಿಗೆ ಸಾಲ ಮರುಪಾವತಿ ಸಹಾಯ ರೂಪದಲ್ಲಿ 3,54,732 ರೂ. ಮಂಜೂರು ಮಾಡಲು ರಾಜ್ಯ ಮೀನುಗಾರರ ಸಾಲ ಮರುಪಾವತಿ ಸಹಾಯ ಆಯೋಗ ಶಿಫಾರಸು ಮಾಡಿದೆ.
ಆನ್ ಲೈನ್ ಮೂಲಕ ನಡೆಸಲಾದ ಆಯೋಗದ ಅಹವಾಲು ಸ್ವೀಕಾರ ಸಭೆ ಕಾಸರಗೋಡು ಜಿಲ್ಲೆಯಿಂದ ಸಲ್ಲಿಸಲಾದ ಅರ್ಜಿಗಳನ್ನು ಪರಿಶೀಲಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಆಯೋಗ ಅಧ್ಯಕ್ಷ ನ್ಯಾಯಮೂರ್ತಿ ಪಿ.ಎಸ್.ಗೋಪಿನಾಥನ್ ಅಧ್ಯಕ್ಷರಾಗಿದ್ದ ಸಭೆಯಲ್ಲಿ ಸದಸ್ಯ ಕೂಟಾಯಿ ಬಶೀರ್ ಭಾಗವಹಿಸಿದ್ದರು. ಉದುವi-ಪನೆಯಾಲ ಸಹಕಾರಿ ಅರ್ಬನ್ ಸೊಸೈಟಿ, ಕೋಟಚ್ಚೇರಿ ಸೇವಾ ಸಹಕಾರಿ ಬ್ಯಾ ಂಕ್, ಹೊಸದುರ್ಗ ಸೇವಾ ಸಹಕಾರಿ ಬ್ಯಾ ಂಕ್, ಉದುಮಾ ಸೇವಾ ಸಹಕಾರಿ ಬ್ಯಾ ಂಕ್, ತೈಕಡಪ್ಪುರಂ ಕಡಪ್ಪುರಂ ಮೀನುಗಾರರ ಅಭಿವೃದ್ಧಿ ಕಲ್ಯಾಣ ಸಹಕಾರಿ ಸಂಘ, ಶಿರಿಯ ಮೀನುಗಾರರ ಅಭಿವೃದ್ಧಿ ಕಲ್ಯಾಣ ಸಹಕಾರಿ ಸಂಘ, ಶಿರಿಯ ಮೀನುಗಾರರ ಅಭಿವೃದ್ಧಿ ಕಲ್ಯಾಣ ಸಂಘ, ತೈಕಡಪ್ಪುರಂ-ಪೂಂಜಾವಿ ಕಡಪ್ಪುರಂ ಮೀನುಗಾರರ ಅಭಿವೃದ್ಧಿ ಕಲ್ಯಾಣ ಸಂಘ ಗಳಿಂದ ಸಾಲಪಡೆದಿದ್ದ 17 ಮಂದಿ
ಮೀನುಗಾರರಿಗೆ ಸಾಲ ಮರುಪಾವತಿ ಸಹಾಯ ರೂಪದಲ್ಲಿ 3.54,732 ರೂ. ಮಂಜೂರಾತಿಗೆ ಶಿಫಾರಸು ಮಾಡಲಾಗಿದೆ. ಕೋಟಚ್ಚೇರಿ ಸೇವಾ ಸಹಕಾರಿ ಬ್ಯಾ ಂಕ್, ಉದುಮಾ ವನಿತಾ ಸೇವಾ ಸಹಕಾರಿ ಸಂಘ ಗಳಿಂದ ಪಡೆದ ಸಾಲಗಳಿಗೆ ಲಡ್ಜರ್ ಕಾಪಿಗಳು, ಆಡಳಿತೆ ಸಮಿತಿ ತೀರ್ಮಾನಗಳನ್ನು ಆಯೋಗಕ್ಕೆ ಸಲ್ಲಿಸುವಂತೆ ಆದೇಶಿಸಲಾಗಿದೆ. 2,40,000 ರೂ.ನ ಮತ್ತೊಂದು ಸಾಲಕ್ಕೆ ಅರ್ಜಿ ಸಲ್ಲಿಸಿರುವ ವ್ಯಕ್ತಿ ಮೀನುಗಾರ ಎಂಬುದನ್ನು ಖಚಿತ ಪಡಿಸುವಂತೆ ಜಿಲ್ಲಾ ಫಿಷರೀಸ್ ಡೆಪ್ಯೂಟಿ ಡೈರೆಕ್ಟರ್ ಅವರಿಂದ ವರದಿ ಕೋರಲಾಗಿದೆ.
ಅಹವಾಲು ಸ್ವೀಕಾರ ಸಭೆಯಲ್ಲಿ 46 ಅರ್ಜಿಗಳನ್ನು ಪರಿಶೀಲಿಸಲಾಗಿತ್ತು. ಕಾಸರಗೋಡು ನಗರಸಭೆ ವನಿತಾಮೀನುಗಾರ ಅಭಿವೃದ್ಧಿ ಕಲ್ಯಾಣ ಸಹಕಾರಿ ಸಂಘದ ಪ್ರತಿನಿಧಿಗಳು ಹಾಜರಾಗದೇ ಇರುವುದರಿಂದ 5 ಅರ್ಜಿಗಳನ್ನು ಮುಂದಿನಸಭೆಯಲ್ಲಿ ಪರಿಶೀಲಿಸುವುದಾಗಿ ತಿಳಿಸಲಾಗಿದೆ. ಕಾಸರಗೋಡು ಜಿಲ್ಲಾ ಸಹಕಾರಿ ಜಂಟಿ ರೆಜಿಸ್ತಾರ್, ಜಂಟಿ ಡೈರೆಕ್ಟರ್ ಕಚೇರಿಯಸಿಬ್ಬಂದಿ, ವಿವಿಧ ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.