HEALTH TIPS

ಕೇರಳದಲ್ಲಿ ಭಯೋತ್ಪಾದನೆ ಚಟುವಟಿಕೆ ಹೆಚ್ಚಿಸಲು ಯತ್ನ!

                ತಿರುವನಂತಪುರ: ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಪ್ರಾಬಲ್ಯ ಹೆಚ್ಚಾಗುತ್ತಿದ್ದಂತೆಯೇ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಸಂಘನೆಗಳು ಕಾಶ್ಮೀರ ಮಾತ್ರವಲ್ಲ, ಕೇರಳದ ಮೇಲೆ ಕಣ್ಣಿಟ್ಟಿವೆ.

        ತಾಲಿಬಾನ್‌ ಮೂಲಕ ಪಾಕಿಸ್ತಾನ ಬೆಂಬಲಿತ ಸಂಘಟನೆಗಳು ಭಾರತವು ಸೇರಿದಂತೆ ವಿವಿಧೆಡೆ ತಮ್ಮ ಚಟುವಟಿಕೆಗಳನ್ನು ತೀವ್ರಗೊಳಿಸಲು ಯತ್ನಿಸುತ್ತಿವೆ.

           ಕೇರಳದ ನೂರಾರು ಯುವಕರು ಹಲವು ವರ್ಷಗಳಿಂದ ಇಸ್ಲಾಂ ಉಗ್ರಗಾಮಿ ಸಂಘಟನೆಗಳನ್ನು ಸೇರಿದ್ದಾರೆ ಮತ್ತು ಹಲವರು ಎನ್‌ಕೌಂಟರ್‌ನಲ್ಲಿ ಸಾವಿಗೀಡಾಗಿರುವುದು ವರದಿಯಾಗಿದೆ. ಈಗ ಮತ್ತೊಮ್ಮೆ ಈ ಸಂಘಟನೆಗಳು ತಮ್ಮ ಚಟುವಟಿಕೆಗಳನ್ನು ವಿಸ್ತರಿಸುವ ಕಾರ್ಯದಲ್ಲಿ ತೊಡಗಿವೆ ಎನ್ನಲಾಗಿದೆ.

         'ತಾಲಿಬಾನ್‌ ಬಳಸಿಕೊಂಡು ಪಾಕಿಸ್ತಾನ ಪ್ರಾಯೋಜಿತ ಚಟುವಟಿಕೆಗಳು ಅಫ್ಗಾನಿಸ್ತಾನದಲ್ಲಿ ಸ್ಥಗಿತಗೊಳ್ಳುವ ಲಕ್ಷಣಗಳು ಗೋಚರಿಸುತ್ತಿಲ್ಲ. ಹೀಗಾಗಿ, ಮುಂದಿನ ದಿನಗಳಲ್ಲಿ ಕಾಶ್ಮೀರ ಮತ್ತು ಕೇರಳದಲ್ಲಿ ಚಟುವಟಿಕೆಗಳನ್ನು ಹೆಚ್ಚಿಸಬಹುದು' ಎಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮಿರಪುರದ ಲೇಖಕ ಮತ್ತು ಸಾಮಾಜಿಕ ಕಾರ್ಯಕರ್ತರಾಗಿರುವ ಅಮ್ಜದ್‌ ಮಿರ್ಜಾ ಅಭಿಪ್ರಾಯಪಟ್ಟಿದ್ದಾರೆ.

             'ಕೇರಳದಲ್ಲಿ ಹಲವು ವರ್ಷಗಳಿಂದ ಭಯೋತ್ಪಾದನೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಉದ್ದೇಶಪೂರ್ವಕವಾಗಿಯೇ ಎಲ್ಲ ರೀತಿಯಿಂದ ಯೋಚಿಸಿಯೇ ಹೆಚ್ಚಿಸಲಾಗಿದೆ. ಇದು ಪಾಕಿಸ್ತಾನ ಜಿಹಾದಿ ಮಿಲಿಟರಿಯ ಕಾರ್ಯತಂತ್ರ' ಎಂದು ಅವರು ವಿಶ್ಲೇಷಿಸಿದ್ದಾರೆ.

         ತಾಲಿಬಾನ್‌ ಚಟುವಟಿಕೆಗಳ ಬಗ್ಗೆ ಇತ್ತೀಚೆಗೆ ಲೇಖನ ಬರೆದಿರುವ ಮಿರ್ಜಾ ಅವರು, 'ಒಂದು ವೇಳೆ, ಕಾಬೂಲ್‌ ಅನ್ನು ತಾಲಿಬಾನ್‌ ನಿಯಂತ್ರಣಕ್ಕೆ ತೆಗೆದುಕೊಂಡರೆ, ಕೇರಳದ ಜಿಹಾದಿಗಳನ್ನು ಪಾಕಿಸ್ತಾನವು ತನ್ನ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತದೆ. ಈ ಮೂಲಕ ಭಾರತದಲ್ಲಿ ಭಯೋತ್ಪಾದನೆ ಚಟುವಟಿಕೆಗಳನ್ನು ಹೆಚ್ಚಿಸಲಿದೆ' ಎಂದು ವಿವರಿಸಿದ್ದಾರೆ.

          ಆದರೆ, ಈ ಅಭಿಪ್ರಾಯಗಳಿಗೆ ಆಧಾರ ಇಲ್ಲ ಎಂದು ಗುಪ್ತ ದಳದ ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

              'ಕೆಲವು ಸಂಘಟನೆಗಳು ಯುವಕರನ್ನು ಸೆಳೆದಿರಬಹುದು. ಆದರೆ, ಈ ರೀತಿಯ ಹೇಳಿಕೆಗಳನ್ನು ನೀಡಲು ಅಥವಾ ಅಭಿಪ್ರಾಯ ವ್ಯಕ್ತಪಡಿಸಲು ಇದೇ ಅಂಶವೇ ಪ್ರಮುಖ ಆಧಾರ ಅಲ್ಲ. ಬೇಹುಗಾರಿಕೆ ಮತ್ತು ಭದ್ರತಾ ಇಲಾಖೆಗಳು ನಿರಂತರವಾಗಿ ಕಟ್ಟೆಚ್ಚರವಹಿಸಿವೆ ಮತ್ತು ಉಗ್ರರ ಚಟುವಟಿಕೆಗಳನ್ನು ವಿಫಲಗೊಳಿಸಿವೆ' ಎಂದು ಅವರು ಪ್ರತಿಪಾದಿಸಿದ್ದಾರೆ.

           ಐಎಸ್‌ ಸಂಘಟನೆಗೆ ಸುಮಾರು 100 ಮಂದಿ ಕೇರಳದವರು ಸೇರಿದ್ದಾರೆ ಮತ್ತು ಕನಿಷ್ಠ 28 ಮಂದಿ ಎನ್‌ಕೌಂಟರ್‌ಗಳಲ್ಲಿ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ. ಕೇರಳದಲ್ಲಿ ಐಎಸ್‌ ಉಗ್ರರು ಇದ್ದಾರೆ ಎಂದು ವಿಶ್ವಸಂಸ್ಥೆಯ ಭಯೋತ್ಪಾದನೆ ಕುರಿತಾದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

         'ಕೇರಳದಲ್ಲಿ ಉಗ್ರಗಾಮಿ ಚಟುವಟಿಕೆಗಳು ಹೆಚ್ಚುತ್ತಿರುವುದು ಆತಂಕಕಾರಿ. ರಾಜ್ಯವು ಉಗ್ರಗಾಮಿ ಸಂಘಟನೆಗಳಿಗೆ ಯುವಕರನ್ನು ಸೇರಿಸುವ ನೇಮಕಾತಿ ಕೇಂದ್ರವಾಗುತ್ತಿದೆ. ಅತಿ ಹೆಚ್ಚು ಶಿಕ್ಷಣ ಪಡೆದ ಯುವಕರು ಇಲ್ಲಿ ಲಭ್ಯವಾಗುತ್ತಿದ್ದಾರೆ' ಎಂದು ಕಳೆದ ತಿಂಗಳು ನಿವೃತ್ತಿಯಾದ ರಾಜ್ಯ ಪೊಲೀಸ್‌ ಪಡೆಯ ಮುಖ್ಯಸ್ಥರಾಗಿದ್ದ ಲೋಕನಾಥ್‌ ಬೆಹೆರಾ ಕೆಲವು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries