HEALTH TIPS

ಕ್ಯಾಡ್‌ಬರಿ ಉತ್ಪನ್ನಗಳಲ್ಲಿ ಗೋಮಾಂಸ?: ಸ್ಪಷ್ಟನೆ ನೀಡಿದ ಸಂಸ್ಥೆ

          ನವದೆಹಲಿ: ಕ್ಯಾಡ್‌ಬರಿ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಭಾರತದಾದ್ಯಂತ ಹಲವಾರು ಜನರು ಟ್ವಿಟ್‌ ಮಾಡಿದ್ದಾರೆ. ಕಂಪನಿಯು ತಮ್ಮ ಕೆಲವು ಉತ್ಪನ್ನಗಳಲ್ಲಿ ಜೆಲಾಟಿನ್ ಅನ್ನು ಬಳಸುತ್ತದೆ ಎಂದು ಆರೋಪಿಸಿದ್ದಾರೆ.

            ಒಂದು ವೆಬ್‌ಸೈಟ್‌ನ ಸ್ಕ್ರೀನ್‌ಶಾಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಸ್ಕ್ರೀನ್‌ಶಾಟ್‌ನಲ್ಲಿ ಕ್ಯಾಡ್‌ಬರಿಯ ಒಂದು ಉತ್ಪನ್ನವು ಜೆಲಾಟಿನ್‌ ಹೊಂದಿದೆ. ಈ ಜಿಲಾಟಿನ್‌ ಗೋಮಾಂಸದಿಂದ ಹುಟ್ಟಿಕೊಂಡಿದೆ ಎಂದು ಹೇಳುತ್ತದೆ.

        ''ಇದು ನಿಜವೇ? ಹೌದಾದರೆ, ಕ್ಯಾಡ್‌ಬರಿ ಹಿಂದೂಗಳನ್ನು ಹಲಾಲ್ ಪ್ರಮಾಣೀಕೃತ ಗೋಮಾಂಸ ಉತ್ಪನ್ನಗಳನ್ನು ಸೇವಿಸುವಂತೆ ಒತ್ತಾಯಿಸಿದ್ದಕ್ಕಾಗಿ ಮೊಕದ್ದಮೆ ಹೂಡಲು ಅರ್ಹವಾಗಿದೆ,'' ಎಂದು ಕೆಲವರು ಟ್ವೀಟ್‌ ಮಾಡಿದ್ದಾರೆ.

''ನಮ್ಮ ಪೂರ್ವಜರು ಮತ್ತು ಗುರುಗಳು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ಆದರೆ ಗೋಮಾಂಸ ತಿನ್ನುವುದನ್ನು ಸ್ವೀಕರಿಸಲಿಲ್ಲ. ಆದರೆ 'ಸ್ವಾತಂತ್ರ್ಯ' ದ ನಂತರದ ಆಡಳಿತಗಾರರು ನಮ್ಮ ಧರ್ಮವನ್ನು ನಿರ್ಭಯದಿಂದ ಉಲ್ಲಂಘಿಸಲು ಅವಕಾಶ ಮಾಡಿಕೊಟ್ಟಿದ್ದಾರೆ,'' ಎಂದು ನೆಟ್ಟಿಗರು ಟ್ವೀಟ್ ಮಾಡಿದ್ದಾರೆ. ಈ ಬೆನ್ನಲ್ಲೇ ನೂರಾರು ಟ್ವೀಟ್‌ಗಳು ವೈರಲ್ ಆಗಿದ್ದು, ಬ್ರಿಟಿಷ್ ಕಂಪನಿಯನ್ನು ಬಹಿಷ್ಕರಿಸುವಂತೆ ಒತ್ತಾಯಿಸಿದೆ.


          ಈ ಬೆನ್ನಲ್ಲೇ ಈ ಬಗ್ಗೆ ಕ್ಯಾಡ್‌ಬರಿ ಡೈರಿ ಮಿಲ್ಕ್ ಟ್ವೀಟ್‌ ಮೂಲಕ ಸ್ಪಷ್ಟೀಕರಣವನ್ನು ನೀಡಿದೆ. ''ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸ್ಕ್ರೀನ್‌ಶಾಟ್‌ ಭಾರತದಲ್ಲಿ ಉತ್ಪಾದಿಸಲಾಗುವ ಮಾಂಡೆಲೆಜ್ / ಕ್ಯಾಡ್ಬರಿಯ ಉತ್ಪನ್ನಗಳಿಗೆ ಸಂಬಂಧಿಸಿದಲ್ಲ. ಭಾರತದಲ್ಲಿ ಉತ್ಪಾದಿಸಲ್ಪಡುವ ಹಾಗೂ ಮಾರಾಟ ಮಾಡುವ ನಮ್ಮ ಎಲ್ಲಾ ಉತ್ಪನ್ನಗಳು ಶುದ್ಧ ಸಸ್ಯಹಾರವಾಗಿದೆ. ಇದನ್ನು ಈ ಉತ್ಪನ್ನದ ರಾಪರ್‌ನಲ್ಲಿರುವ ಹಸಿರು ಚುಕ್ಕೆಯು ಖಾತರಿಪಡಿಸುತ್ತದೆ,'' ಎಂದು ಉಲ್ಲೇಖಿಸಿದೆ.

''ನೀವು ಊಹಿಸಿದಂತೆ, ಈ ರೀತಿಯ ನಕಾರಾತ್ಮಕ ಪೋಸ್ಟ್‌ಗಳು ನಮ್ಮ ಗೌರವಾನ್ವಿತ ಮತ್ತು ಪ್ರೀತಿಪಾತ್ರ ಬ್ರಾಂಡ್‌ಗಳಲ್ಲಿ ಗ್ರಾಹಕರ ವಿಶ್ವಾಸವನ್ನು ಹಾಳುಮಾಡುತ್ತವೆ. ನಮ್ಮ ಉತ್ಪನ್ನಗಳಿಗೆ ಸಂಬಂಧಪಟ್ಟ ಸಂಗತಿಗಳನ್ನು ಹಂಚಿಕೊಳ್ಳುವ ಮೊದಲು ದಯವಿಟ್ಟು ಪರಿಶೀಲಿಸುವಂತೆ ನಾವು ನಮ್ಮ ಗ್ರಾಹಕರನ್ನು ವಿನಂತಿಸುತ್ತೇವೆ,'' ಎಂದು ಮನವಿ ಮಾಡಿದೆ.

''ನಾವು ಸ್ಪಷ್ಟಪಡಿಸಿದ್ದೇವೆ ಎಂದು ಭಾವಿಸುತ್ತೇವೆ. ಯಾವುದೇ ಹೆಚ್ಚಿನ ಪ್ರಶ್ನೆಗಳಿಗೆ, ದಯವಿಟ್ಟು Suggestions@mdlzindia.com ನಲ್ಲಿ ನಮ್ಮನ್ನು ಸಂಪರ್ಕಿಸಿ,'' ಎಂದು ತಿಳಿಸಿದೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries