ಕುಂಬಳೆ: ಕುಂಬಳೆ ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ನಡೆದ ಕಳ್ಳತನದ ಬಗ್ಗೆ ಮಾಹಿತಿ ಪಡೆಯಲು ಕಾಸರಗೋಡು ಸಂಸದ ರಾಜಮೋಹನ ಉಣ್ಮಿತ್ತಾನ್ ಅವರು ನಿನ್ನೆ ಭೇಟಿ ನೀಡಿದರು.
ಆದಷ್ಟು ಬೇಗ ಇದರ ಹಿಂದಿರುವ ಕೈಗಳನ್ನು ಬಂಧಿಸಲು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶನ ನೀಡಿದರು. ಹಿರಿಯ ರಾಷ್ಟ್ರೀಯ ಕಾಂಗ್ರೆಸ್ ನೇತಾರರಾದ ಸೋಮಶೇಖರ್ ಜಿಎಸ್, ಮಂಜುನಾಥ್ ಆಳ್ವ ಮಡ್ವ, ಗಣೇಶ್ ಭಂಡಾರಿ ಕುತ್ತಿಕ್ಕಾರು, ಲೋಕನಾಥ್ ಶೆಟ್ಟಿ ಕೆಳಗಿನ ಬೈಲು, ಲಕ್ಷ್ಮಣ ಪ್ರಭು ಕುಂಬಳೆ ಮುಂತಾದವರು ಜೊತೆಗಿದ್ದರು.