ಮಧುರೈ: ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಕನ್ಯಾಕುಮಾರಿ ಪೊಲೀಸರು ರೋಮನ್ ಕ್ಯಾಥೊಲಿಕ್ ಪಾದ್ರಿ ಜಾರ್ಜ್ ಪೊನ್ನಿಯಾರನ್ನು ಮದುರೈನಲ್ಲಿ ಬಂಧಿಸಲಾಗಿದೆ.
ಜುಲೈ 18ರಂದು ಅರುಮಾನೈನಲ್ಲಿ ನಡೆದ ಸಭೆಯಲ್ಲಿ ಪೊನ್ನಯ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅಲ್ಲದೆ 'ಭಾರತ ಮಾತೆ'ಯನ್ನು ಅವಮಾನಿಸಿದ್ದು, ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಹರಡಲು ಯತ್ನ ಹಿನ್ನೆಲೆಯಲ್ಲಿ ಪಾದ್ರಿ ವಿರುದ್ಧ ಪ್ರಕರಣ ದಾಖಲಾಗಿತ್ತು.
ಹಿಂದೂ ಸಂಘಟನೆಗಳು ಮತ್ತು ಹಲವರು ದೂರುಗಳನ್ನು ನೀಡಿದ್ದು ಅರುಮಾನೈ ಪೊಲೀಸರು ಪೊನ್ನಯ್ಯ ವಿರುದ್ಧ 143, 153 ಎ, 269, 295 ಎ, 505(2), ಐಪಿಸಿಯ 506(1) ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆ ಸೆಕ್ಷನ್ 3, 1897 ಸೇರಿದಂತೆ ವಿವಿಧ ವಿಭಾಗಗಳ ಅಡಿಯಲ್ಲಿ ಜುಲೈ 20ರಂದು ಪ್ರಕರಣ ದಾಖಲಿಸಿದ್ದರು.
ಪಾದ್ರಿ ಕಾರಿನಲ್ಲಿ ಚೆನ್ನೈಗೆ ಪರಾರಿಯಾಗಲು ಯತ್ನಿಸಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಅವರನ್ನು ಶನಿವಾರ ಪಾಂಡಿ ಕೋವಿಲ್ ಬಳಿ ಸಿಲೈಮನ್ ಪೊಲೀಸರು ಬಂಧಿಸಿದ್ದರು. ಇದೀಗ ಅವರನ್ನು ಕನ್ಯಾಕುಮಾರಿ ಪೊಲೀಸರಿಗೆ ಹಸ್ತಾಂತರಿಸಲಿದ್ದಾರೆ.