ಮಂಜೇಶ್ವರ: ಪರಿಶಿಷ್ಟ ಜಾತಿ, ಪಂಗಡಗಳ ಸರ್ಕಾರಿ ಸವಲತ್ತುಗಳನ್ನು ಅರ್ಹತೆ ಇರುವವರಿಗೆ ನೀಡದೆ ವಂಚಿಸುವುದರ ಜತೆಗೆ ವಿದ್ಯಾರ್ಥಿಗಳಿಗೆ ಕಲಿಕೋಪಕರಣ ನೀಡದಿರುವುದರ ವಿರುಧ್ಧ ಮಂಜೇಶ್ವರ ಬ್ಲಾಕ್ ಕಛೇರಿಯ ಮುಂಭಾಗದಲ್ಲಿ ಕಾಸರಗೋಡು ಪರಿಶಿಷ್ಟ ಜಾತಿ, ಪಂಗಡಗಳ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ , ಜಿಲ್ಲಾ ಪಂಚಾಯತಿ ಸದಸ್ಯ ನಾರಯಣ ನಾಯ್ಕ್ ಅಧ್ಯಕ್ಷತೆ ವಹಿಸಿದರು.
ಪರಿಶಿಷ್ಟ ಜಾತಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ.ಕೆ. ಕಯ್ಯಾರ್ ಪ್ರತಿಭಟನೆ ಉದ್ಘಾಟಿಸಿದರು. ಬಿಜೆಪಿ ಮಂಜೇಶ್ವರ ಮಂಡಲಾಧ್ಯಕ್ಷ ಮಣಿಕಂಠ ರೈ ಪಟ್ಲ, ಬ್ಲಾಕ್ ಪಂಚಾಯತಿ ಸದಸ್ಯ ಅನಿಲ್ ಕುಮಾರ್,
ಬಿಜೆಪಿ ಮಂಜೇಶ್ವರ ಮಂಡಲ ಪ್ರಧಾನಕಾರ್ಯದರ್ಶಿ ಆದರ್ಶ್ ಬಿಯಂ, ಕಾರ್ಯದರ್ಶಿ ಸಂತೋಷ್ ದೈಗೋಳಿ, ಜನಪ್ರತಿನಿಧಿಗಳಾದ ಇಂದಿರ, ಆಶಾಲತ ಶುಭಹಾರ್ಯೆಸಿದರು.
ಪರಿಶಿಷ್ಟ ಜಾತಿ ಮೋರ್ಚ ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಸ್ವಾಗತಿಸಿ , ಪರಿಶಿಷ್ಟ ಜಾತಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಶಶಿಕುಮಾರ್ ವಂದಿಸಿದರು.