ಕಾಸರಗೋಡು: ದೀರ್ಘ ಕಾಲದ ನಂತರ ಕಾಸರಗೋಡು ಡಿಪೋದಿಂದ ದ.ಕ ಜಿಲ್ಲೆಯ ವಿವಿಧ ಕೇಂದ್ರಗಳಿಗೆ ಸೋಮವಾರದಿಂದ ಕೆಎಸ್ಸಾರ್ಟಿಸಿ ಬಸ್ ಸಂಚಾರ ಆರಂಭಗೊಂಡಿದೆ. ಕೋವಿಡ್ ಮಾನದಂಡ ಪಾಲನೆಯೊಂದಿಗೆ ಬಸ್ ಸಂಚಾರ ನಡೆಸುತ್ತಿದೆ. ಕಾಸರಗೋಡಿನಿಂದ ತಲಪ್ಪಾಡಿ ಹಾದಿಯಾಗಿ ಮಂಗಳೂರಿಗೆ 23ಬಸ್, ಜಾಲ್ಸೂರ್ ಹಾದಿಯಾಗಿ ಸುಳ್ಯ ಹಾಗೂ ಪೆರ್ಲ-ವಿಟ್ಲ ಹಾದಿಯಾಗಿ ತಲಾ ನಾಲ್ಕು ಬಸ್‍ಗಳು ಸಂಚಾರ ನಡೆಸುತ್ತಿದೆ. ಈ ಹಿಂದೆ ತಲಪ್ಪಾಡಿ, ಜಾಲ್ಸೂರ್ ಹಾಗೂ ಪೆರ್ಲ ವರೆಗೆ ಸಂಚಾರ ನಿಗದಿಗೊಳಿಸಲಾಗಿತ್ತು. ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್‍ಗಳೂ ಸೋಮವಾರದಿಂದ ಕಾಸರಗೋಡು ಸಂಚಾರ ಆರಂಭಿಸಿದೆ.